ನ.೧೦ಕ್ಕೆ ಹಾಲು ಒಕ್ಕೂಟದ ನಿರ್ದೇಶಕರ ಚುನಾವಣೆ
ಕನ್ನಡಪ್ರಭ ವಾರ್ತೆ ಕೊರಟಗೆರೆತುಮಕೂರು ಹಾಲು ಉತ್ಪಾದಕರ ಒಕ್ಕೂಟದ ನಿರ್ದೇಶಕರ ಸ್ಥಾನದ ಚುನಾವಣೆಗೆಯಲ್ಲಿ ಎನ್‌ಡಿಎ ಅಭ್ಯರ್ಥಿಯಾಗಿ ವಿ.ಸಿದ್ದಗಂಗಯ್ಯರವರನ್ನು ಆಯ್ಕೆ ಮಾಡಲಾಗಿದ್ದು ನ.೧೦ ರಂದು ನಡೆಯುವ ಚುನಾವಣೆಯಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಪಕ್ಷದ ಕಾರ್ಯಕರ್ತರು ಒಟ್ಟಾಗಿ ಕೆಲಸ ಮಾಡಬೇಕಿದೆ ಎಂದು ಮಧುಗಿರಿ ಬಿಜೆಪಿ ಜಿಲ್ಲಾಧ್ಯಕ್ಷ ಹನುಮಂತೇಗೌಡ ತಿಳಿಸಿದರು.
ಪಟ್ಟಣದ ಸುವರ್ಣಮುಖಿ ಲಕ್ಮೀನರಸಿಂಹಸ್ವಾಮಿ ಸಮುದಾಯ ಭವನದಲ್ಲಿ ಏರ್ಪಡಿಸಲಾಗಿದ್ದ ಬಿಜೆಪಿ ಮತ್ತು ಜೆಡಿಎಸ್ ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದರು.ತುಮಕೂರು ಹಾಲು ಉತ್ಪಾದಕರ ಒಕ್ಕೂಟದ ಚುನಾವಣೆ ಸಂಬಂಧ ಕೊರಟಗೆರೆ ವಿಧಾನಸಭಾ ಕ್ಷೇತ್ರದ ಎನ್‌ಡಿಎ ಪಕ್ಷಗಳ ಮುಖಂಡರ ಸಭೆಯನ್ನು ಕರೆಯಲಾಗಿದ್ದು, ಕೋಳಾಲ ಹೋಬಳಿಯ ಸಂಕದಹಳ್ಳಿ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರಾದ ವಿ. ಸಿದ್ದಗಂಗಯ್ಯ ಅವರನ್ನು ಕೊರಟಗೆರೆಯಿಂದ ಎನ್‌ಡಿಎ ಅಭ್ಯರ್ಥಿಯನ್ನಾಗಿ ಮಾಡಲು ತೀರ್ಮಾನಿಸಲಾಗಿದ್ದು, ನಮ್ಮ ಕಾರ್ಯಕರ್ತರು ನಮ್ಮ ಆಭ್ಯರ್ಥಿಗೆ ಹೆಚ್ಚು ಮತ ಹಾಕಿಸಲು ಹೆಚ್ಚಿನ ಶ್ರಮವಹಿಸುವಂತೆ ಮನವಿ ಮಾಡಿದರು.
ಮಾಜಿ ಶಾಸಕ ಪಿ.ಆರ್.ಸುದಾಕರಲಾಲ್ ಮಾತನಾಡಿ, ನ.೧೦ ರಂದು ನಡೆಯುವ ತುಮಕೂರು ಹಾಲು ಉತ್ಪಾದಕರ ಒಕ್ಕೂಟದ ಚುನಾವಣೆಯಲ್ಲಿ ಎರಡು ಪಕ್ಷಗಳು ನಾಯಕರು ಒಮ್ಮತದಿಂದ ಸಿದ್ದಗಂಗಯ್ಯ ಅವರನ್ನು ಅಭ್ಯರ್ಥಿಯನ್ನಾಗಿ ಮಾಡಲಾಗಿದೆ ಎಂದು ತಿಳಿಸಿದರು.ನಿವೃತ್ತ ಐಎಎಸ್ ಅಧಿಕಾರಿ ಬಿ.ಎಚ್.ಅನಿಲ್‌ಕುಮಾರ್ ಮಾತನಾಡಿ, ಎರಡು ಪಕ್ಷಗಳ ಮುಖಂಡರು ಕಾರ್ಯಕರ್ತರು ಸಮಾಲೋಚಿಸಿ ಲೋಕಸಭಾ ಚುನಾವಣೆಯಲ್ಲಿ ಎನ್‌ಡಿಎ ಮೈತ್ರಿಯನ್ನು ಬೆಂಬಲಿಸಿ ಕೇಂದ್ರ ಸಚಿವ ವಿ.ಸೋಮಣ್ಣ ಅವರ ಗೆಲುವಿಗೆ ಕಾರಣರಾಗಿದ್ದೀರಿ. ಅದರಂತೆ ಈ ಬಾರಿ ನಡೆಯುವ ತುಮಕೂರು ಹಾಲು ಉತ್ಪಾದಕರ ಒಕ್ಕೂಟದ ಚುನಾವಣೆಯಲ್ಲಿ ಅದೇ ರೀತಿ ಒಗ್ಗಟಿನಿಂದ ಕೆಲಸ ಮಾಡಿ ಸಿದ್ದಗಂಗಯ್ಯ ಅವರನ್ನು ಗೆಲ್ಲಿಸಲು ಶ್ರಮವಹಿಸುತ್ತೇವೆ ಎಂದರು.
ಎನ್‌ಡಿಎ ಅಭ್ಯರ್ಥಿ ವಿ.ಸಿದ್ದಗಂಗಯ್ಯ ಮಾತನಾಡಿ, ಎನ್‌ಡಿಎ ಮೈತ್ರಿ ಸಭೆಯಲ್ಲಿ ಕೊರಟಗೆರೆ ತುಮುಲ್ ಚುನಾವಣೆಗೆ ೬ ಜನ ಅಕಾಂಕ್ಷಿಗಳಿದ್ದು ಅವರೆಲ್ಲಾ ಒಳ್ಳೆಯ ಮನಸ್ಸಿನಿಂದ ಮುಖಂಡರ ಮಾತಿಗೆ ಬೆಲೆ ನೀಡಿ ನನ್ನನ್ನು ಒಮ್ಮತದ ಅಭ್ಯರ್ಥಿಯನ್ನಾಗಿ ಮಾಡಿದ್ದಾರೆ ಅವರಿಗೆ ಧನ್ಯವಾದವನ್ನು ತಿಳಿಸುತ್ತೇನೆ ಎಂದರು.ಜೆಡಿಎಸ್ ಕಾರ್ಯಾದ್ಯಕ್ಷ ನರಸಿಂಹರಾಜು, ಮಾಜಿ ಜಿ.ಪಂ ಸದಸ್ಯ ಶಿವರಾಮಯ್ಯ, ಕಾಮರಾಜು, ಲಕ್ಷ್ಮಣ್, ಮಂಜುನಾಥ್, ಪ್ರಕಾಶ್, ರವಿಕುಮಾರ್, ಲಕ್ಷ್ಮೀಶ್, ಸಾಕರಾಜು, ಬಿಜೆಪಿಯ ನಂಜಾರಾದ್ಯ ,ಕಾಮರಾಜು ರವಿಚಂದ್ರ, ನಟರಾಜು, ಚಂದ್ರಣ್ಣ ಸೇರಿ ಹಲವರು ಹಾಜರಿದ್ದರು.