ಕನ್ನಡಪ್ರಭ ವಾರ್ತೆ ಮಡಿಕೇರಿ
ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ಜನರನ್ನು ಸಾಯಿಸಿ ರಾಜಕಾರಣ ಮಾಡುತ್ತಿದೆ. ಈ ಕಾರಣದಿಂದಲೇ 17 ರಾಜ್ಯಗಳಲ್ಲಿ ಅಧಿಕಾರಕ್ಕೆ ಬಂದಿದ್ದೀರಿ ಎಂದು ಹೇಳಿದರು.
ಬಿಜೆಪಿ ಬೆಂಬಲಿಗ ವಿನಯ್ ಸೋಮಯ್ಯ ಆತ್ಮಹತ್ಯೆ ಮೂರು ಡೆತ್ ನೋಟ್ ವಾಟ್ಸಪ್ ಹೋಗಿದೆ. ಈ ಪ್ರಕರಣದ ಪ್ರಥಮ ವರದಿ ಬರಲಿ. ನಂತರ ಸಿಬಿಐಗೆ ಕೊಡೋಣ. ಬಿಜೆಪಿ ಸಾವಿನ ಮನೆಯಲ್ಲಿ ರಾಜಕಾರಣ ಮಾಡುವ ವ್ಯವಸ್ಥೆಯನ್ನು ಬೀದಿ ಬೀದಿಯಲ್ಲಿ ಹೇಳುತ್ತೇವೆ. ಸರ್ಕಾರ ಈ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡಿದೆ. ಆದಷ್ಟು ಬೇಗ ಸತ್ಯಾಂಶ ಹೊರ ಬರಲಿದ್ದು, ಬಿಜೆಪಿಯ ಮುಖವಾಡ ಬಯಲಾಗಲಿದೆ ಎಂದು ಹೇಳಿದರು.ಜಿಲ್ಲೆಯ ಇಬ್ಬರು ಶಾಸಕರಿಂದ ಕೊಡಗಿನಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯ ನಡೆಯುತ್ತಿದೆ. ಕಳೆದ ಎರಡು ವರ್ಷದಲ್ಲಿ ಕೊಡಗಿನ ಅಭಿವೃದ್ಧಿಗೆ 2000 ಕೋಟಿ ಬಂದಿದೆ ಇದಕ್ಕೆ ದಾಖಲೆಯನ್ನು ನಾವು ನೀಡುತ್ತೇವೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಕಾಂಗ್ರೆಸ್ ಮಾಜಿ ಅಧ್ಯಕ್ಷ ಮಂಜುನಾಥ್ ಕುಮಾರ್ ಪ್ರಮುಖರಾದ ರಫೀಕ್ ಕೋಳುಮಂಡ, ಪಿ.ಎ. ಹನೀಫ್ ಇದ್ದರು.