ಬಿಜೆಪಿಯಿಂದ ದಕ್ಷಿಣ ಭಾರತ ನಿರ್ಲಕ್ಷ್ಯ: ಎಂ. ಲಕ್ಷ್ಮಣ್

KannadaprabhaNewsNetwork |  
Published : Apr 29, 2026, 04:00 AM IST
ಎಂ.ಲಕ್ಷ್ಮಣ್ | Kannada Prabha

ಸಾರಾಂಶ

ಉತ್ತರ ಭಾರತದಲ್ಲಿ ತನ್ನ ಸ್ಥಾನ ಗಟ್ಟಿಗೊಳಿಸಲು ಲೋಕಸಭಾ ಕ್ಷೇತ್ರಗಳನ್ನು ಶೇ. ೫೦ರಷ್ಟು ಏರಿಸಲು ಹೊರಟಿರುವ ಬಿಜೆಪಿ ಸರ್ಕಾರ ದಕ್ಷಿಣ ಭಾರತದ ಬಗ್ಗೆ ತಾರತಮ್ಯ ಧೋರಣೆ ಅನುಸರಿಸುತ್ತಿದೆ ಎಂದು ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್ ಆರೋಪಿಸಿದರು.

ಮಡಿಕೇರಿ: ಉತ್ತರ ಭಾರತದಲ್ಲಿ ತನ್ನ ಸ್ಥಾನ ಗಟ್ಟಿಗೊಳಿಸಲು ಲೋಕಸಭಾ ಕ್ಷೇತ್ರಗಳನ್ನು ಶೇ. ೫೦ರಷ್ಟು ಏರಿಸಲು ಹೊರಟಿರುವ ಬಿಜೆಪಿ ಸರ್ಕಾರ ದಕ್ಷಿಣ ಭಾರತದ ಬಗ್ಗೆ ತಾರತಮ್ಯ ಧೋರಣೆ ಅನುಸರಿಸುತ್ತಿದೆ ಎಂದು ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್ ಆರೋಪಿಸಿದರು.ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜನಸಂಖ್ಯೆ ಆಧಾರದಲ್ಲಿ ಕ್ಷೇತ್ರ ಪುನರ್ವಿಂಗಡಣೆಯಾದರೆ ಉತ್ತರದಲ್ಲಿ ಜನಸಂಖ್ಯೆ ಶೇ. ೧೯೫ರಷ್ಟು ಏರಿಕೆಯಾಗಿದ್ದರೆ, ದಕ್ಷಿಣದಲ್ಲಿ ಕೇವಲ ಶೇ. ೧೩೫ರಷ್ಟು ಮಾತ್ರ. ಇದರಿಂದ ಉತ್ತರದ ರಾಜ್ಯಗಳಲ್ಲಿ ಸ್ಥಾನ ಹೆಚ್ಚಾಗಿ ಬಿಜೆಪಿಗೆ ಲಾಭವಾಗಲಿದೆ. ದಕ್ಷಿಣದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲ್ಲ ಎಂಬ ಸತ್ಯ ಅವರಿಗೆ ಗೊತ್ತು ಎಂದು ಟೀಕಿಸಿದರು.ಕರ್ನಾಟಕ ೫ ಲಕ್ಷ ಕೋಟಿ ರೂ. ತೆರಿಗೆ ನೀಡಿದರೆ ಕೇಂದ್ರ ವಾಪಸ್ ಕೊಡುವುದು ಕೇವಲ ೬೦ ಸಾವಿರ ಕೋಟಿ ರು. ದಕ್ಷಿಣವನ್ನು ನಿರ್ಲಕ್ಷಿಸುವ ಮಸೂದೆಗಳನ್ನು ಕಾಂಗ್ರೆಸ್ ವಿರೋಧಿಸುತ್ತದೆ ಎಂದು ಲಕ್ಷ್ಮಣ್ ಹೇಳಿದರು.

ಮಹಿಳಾ ಮೀಸಲಾತಿಯನ್ನು ಕಾಂಗ್ರೆಸ್ ತಂದಿದ್ದು, ೨೦೨೩ರಲ್ಲಿ ರಾಜ್ಯಸಭೆಯಲ್ಲಿ ಅಂಗೀಕಾರವಾಗಿ ರಾಷ್ಟ್ರಪತಿ ಅಂಕಿತವೂ ಆಗಿದೆ. ಆದರೆ, ಕೇಂದ್ರ ೨೦೨೬ರಲ್ಲಿ ಗೆಜೆಟ್ ನೋಟಿಫಿಕೇಶನ್ ಹೊರಡಿಸಿದೆ. ಮೂರು ವರ್ಷ ಯಾಕೆ ಸುಮ್ಮನಿದ್ದರು? ಬಿಜೆಪಿಗೆ ಮೀಸಲಾತಿಯನ್ನೇ ಸಹಿಸಲ್ಲ ಎಂದು ವ್ಯಂಗ್ಯವಾಡಿದರು.ಮೈಸೂರು-ಕೊಡಗು ಸಂಸದರು ಎರಡೂ ಜಿಲ್ಲೆಗೆ ಕೇಂದ್ರದಿಂದ ಒಂದೂ ಯೋಜನೆ ತಂದಿಲ್ಲ. ಸಂಸದರು ಎಲ್ಲಿದ್ದಾರೆ ಎಂದು ಜನ ಹುಡುಕಾಡುವಂತಾಗಿದೆ. ಇನ್ನಾದರೂ ಎಚ್ಚೆತ್ತು ಯೋಜನೆ ತರಲಿ ಎಂದು ಆಗ್ರಹಿಸಿದರು.ಕೆಪಿಸಿಸಿ ಸದಸ್ಯ ಎಚ್.ಎಂ. ನಂದಕುಮಾರ್, ಮಡಿಕೇರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್.ಎ. ಹಂಸ, ಡಿಸಿಸಿ ಸದಸ್ಯ ಸಲೀಂ ಹ್ಯಾರಿಸ್, ಜಯೇಂದ್ರ, ಸೂರಜ್ ಹೊಸೂರು ಸುದ್ದಿಗೋಷ್ಠಿಯಲ್ಲಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಟಾಪರ್‌ ರ್‍ಯಾಂಕ್‌ ಕೊಟ್ಟ ಶಾಲೆಯಲ್ಲಿ ಸೌಲಭ್ಯಗಳೇ ಇಲ್ಲ
ಕುಡಿಯುವ ನೀರಿಗೆ ಅಧಿಕಾರಿಗಳು ತುರ್ತು ಸ್ಪಂದಿಸಿ