ಬಿಜೆಪಿಯಿಂದ ಸಂವಿಧಾನ ಜಾಗೃತಿ ಸಪ್ತಾಹ, ಭೀಮಸ್ಮರಣೆ ಅಭಿಯಾನ

KannadaprabhaNewsNetwork |  
Published : Nov 22, 2025, 01:15 AM IST
   ಸಿಕೆಬ-2 ಸುದ್ದಿಗೋಷ್ಟಿಯಲ್ಲಿ  ಮಾಜಿ ಸಂಸದ ಮುನಿಸ್ವಾಮಿ ಮಾತನಾಡಿದರು | Kannada Prabha

ಸಾರಾಂಶ

ಸಂವಿಧಾನ ಬರೆದ ಬಾಬಾ ಸಾಹೇಬ್ ಅಂಬೇಡ್ಕರ್‌ಗೆ ಕಾಂಗ್ರೆಸ್ ಸರ್ಕಾರ ಎಷ್ಟೊಂದು ಅವಮಾನ ಮಾಡಿ, ಈಗ ಅಂಬೇಡ್ಕರ್ ಅವರ ಸಂವಿಧಾನ ಪುಸ್ತಕವನ್ನು ಜೇಬಿನಲ್ಲಿಟ್ಟುಕೊಂಡು ಜನರನ್ನು ಮೋಸ ಮಾಡಲು ಹೊರಟಿದ್ದಾರೆ.

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ಕಾಂಗ್ರೆಸ್ ಸರ್ಕಾರ ಬಿಜೆಪಿ ವಿರುದ್ಧ ಓಟ್ ಚೋರಿ ಬಗ್ಗೆ ದೊಡ್ಡದಾದ ಆರೋಪಗಳು ಮಾಡಿತ್ತು. ಅದರೆ ಓಟ್ ಚೋರ್ ಮಾಡಿದ್ದು ಕಾಂಗ್ರೆಸ್ ಪಕ್ಷದವರೆ ಎಂದು ಕಾಂಗ್ರೆಸ್ ಮುಖಂಡರು ಬಾಯಲ್ಲಿ ಬಂದಿದ್ದು ಎಲ್ಲರಿಗೂ ಗೊತ್ತಿರುವ ವಿಚಾರ, ಬಿಹಾರದಲ್ಲಿ ಕಾಂಗ್ರೆಸ್ ಪಕ್ಷ ಜಂಗಲ್ ರಾಜ್ ಜೊತೆ ಕೈ ಜೋಡಿಸಿ ದುರಾಡಳಿತ ಮಾಡಲು ಮುಂದಾಗಿದ್ದರು ಆದರೆ ಬಿಹಾರದ ಜನ ನೀರಿಕ್ಷೆ‌ ಮೀರಿದ ಫಲಿತಾಂಶ ನೀಡಿ ಉತ್ತರ ನೀಡಿದ್ದಾರೆ ಎಂದು ಕೋಲಾರ ಮಾಜಿ ಸಂಸದ ಎಸ್ ಮುನಿಸ್ವಾಮಿ ಹೇಳಿದರು.ಬಿಜೆಪಿ‌ ಮುಖಂಡರಿಂದ ಸಂವಿಧಾನ ಜಾಗೃತಿ ಸಪ್ತಾಹ ಮತ್ತು ಭೀಮಸ್ಮರಣೆ ಕಾರ್ಯಕ್ರಮದ ಅಂಗವಾಗಿ ನಗರದ ಸಂಸದ ಡಾ.ಕೆ. ಸುಧಾಕರ್ ಗೃಹ ಕಚೇರಿಯಲ್ಲಿ ಶುಕ್ರವಾರ ನಡೆದ ಪೂರ್ವಭಾವಿ ಸಭೆಯ ನಂತರ ಸುದ್ದಿಗೋಷ್ಟಿಯನ್ನು ಉದ್ದೇಶಿಸಿ ಮಾತನಾಡಿ, ಸಂವಿಧಾನ ಬರೆದ ಬಾಬಾ ಸಾಹೇಬ್ ಅಂಬೇಡ್ಕರ್‌ಗೆ ಕಾಂಗ್ರೆಸ್ ಸರ್ಕಾರ ಎಷ್ಟೊಂದು ಅವಮಾನ ಮಾಡಿ, ಈಗ ಅಂಬೇಡ್ಕರ್ ಅವರ ಸಂವಿಧಾನ ಪುಸ್ತಕವನ್ನು ಜೇಬಿನಲ್ಲಿಟ್ಟುಕೊಂಡು ಜನರನ್ನು ಮೋಸ ಮಾಡಲು ಹೊರಟಿದ್ದಾರೆ. ನರೇಂದ್ರ ಮೋದಿಯವರು ಪ್ರಧಾನಿಯಾದ ಮೇಲೆ ಅಂಬೇಡ್ಕರ್ ಅವರಿಗೆ ಸಲ್ಲಬೇಕಾದ ಗೌರವ ನೀಡುತ್ತಿದ್ದಾರೆ ಎಂದರು.

ಕಾಂಗ್ರೆಸ್ ಪಕ್ಷದವರು ಅಂಬೇಡ್ಕರ್ ಅವರಿಗೆ ದೆಹಲಿಯಲ್ಲಿ ಅರ್ಧ ಅಡಿ ಜಾಗ ಕೊಡಲಿಲ್ಲ. ಈಗ ಅಹಿಂದ ನಾಯಕರು ಅಂಬೇಡ್ಕರ್ ಹೆಸರು ಬಳಸಿಕೊಂಡು ಮೋಸ ಮಾಡುತ್ತಿದ್ದಾರೆಂದು ಕಾಂಗ್ರೆಸ್ ಪಕ್ಷದ ವಿರುದ್ಧ ಚೀಮಾರಿ ಹಾಕಿದ್ದಾರೆ. ಕಾಂಗ್ರೆಸ್ ನವರು ಜವಹರ್ ಲಾಲ್ ನೆಹರು, ಇಂದಿರಾಗಾಂಧಿ, ರಾಜೀವ್ ಗಾಂಧಿಗೆ ಭಾರತ ರತ್ನ ನೀಡಿದರು. ಆದರೆ ಸಂವಿಧಾನ ಬರೆದ ಬಾಬಾ ಸಾಹೇಬ ಅಂಬೇಡ್ಕರ್ ಅವರಿಗೆ ನೀಡಲು ಅವರಿಗೆ ಬಿಡುವಿರಲಿಲ್ಲ, ಬಾಬಾ ಸಾಹೇಬರಿಗೆ ಬಿಜೆಪಿಯೇ ನೀಡಬೇಕಾಯಿತು ಎಂದರು.

ಕಾಂಗ್ರೆಸ್ ಸರ್ಕಾರ ಆಡಳಿತಕ್ಕೆ ಬಂದು ಎರಡೂವರೆ ವರ್ಷಗಳು ಸಮೀಪಿಸುತ್ತಿದ್ದರೂ ಸಹ ಬಿಜೆಪಿ ಸರ್ಕಾರದ ಅಭಿವೃದ್ಧಿ ಕಾಮಗಾರಿಗಳಲ್ಲಿಯೇ ಮುಂದುವರೆಯುತ್ತಿದೆ. ಸರ್ಕಾರ ಬಂದಾಗಿನಿಂದ ಇದುವರೆಗೂ ಒಂದು ಕಿಲೋ ಮೀಟರ್ ರಸ್ತೆಯೂ ಹಾಕಿಲ್ಲ. ಅಭಿವೃದ್ಧಿ ಮರೀಚಿಕೆಯಾಗಿದೆ. ಪರಿಶಿಷ್ಟರ ಮೀಸಲು ಹಣ ಗ್ಯಾರಂಟಿಗಳಿಗೆ ಬಳಸಿ ಪರಿಶಿಷ್ಟರಿಗೂ ಸಿದ್ದರಾಮಯ್ಯ ಮೋಸ ಮಾಡುತ್ತಿದ್ದಾರೆ. ಕುರ್ಚಿಗಾಗಿ ಕಿತ್ತಾಟ ನಡೆಯುತ್ತಿರುವುದು ಬಿಟ್ಟರೆ ಯಾವುದೇ ಜನಪರ ಕಾರ್ಯಳತ್ತ ಆಗಲಿ, ರಾಜ್ಯದ ಅಬಿವೃದ್ಧಿಯತ್ತ ಆಗಲಿ ಗಮನವಿಲ್ಲ. ಕಾಂಗ್ರೆಸ್‌ನ 5 ಗ್ಯಾರಂಟಿಗಳಿಗೆ ಯಾವ ವಾರಂಟಿಯೂ ಇಲ್ಲ, ಸರ್ವರ್‌ಗಳು ಸಿಗುವುದಿಲ್ಲ ಎಂದು ವ್ಯಂಗ್ಯವಾಡಿದರುದರು.

ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಿಂದಲೂ ಗಲಭೆ ಪ್ರಕರಣಗಳು ಹೆಚ್ಚಾಗಿವೆ. ಅವರ ಶಾಸಕರ ಮನೆ ಮೇಲೆ ದಾಳಿ ಮಾಡಿದರೂ ಸಹಾ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ತಪ್ಪಿತಸ್ಥರನ್ನು ಬಂಧಿಸಿಲ್ಲ. ಕುಕ್ಕರ್ ಬಾಂಬ್ ಬ್ಲಾಸ್ಟ್ ಮಾಡಿದವರನ್ನು ಬ್ರದರ್ಸ್ ಎನ್ನುತ್ತಾರೆ. ರಾಜ್ಯದಲ್ಲಿ ಏನಾದರೂ ಶರಿಯಾ ಕಾನೂನು ಇದೆಯಾ? ಆ ರೀತಿ ಮಾಡುವುದಾದರೆ ಪಾಕಿಸ್ತಾನಕ್ಕೆ ಹೋಗಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಜಿಲ್ಲಾಧ್ಯಕ್ಷ ಸೀಕಲ್ ರಾಮಚಂದ್ರಗೌಡ ಮಾತನಾಡಿ, ಬಿಜೆಪಿ‌ ಮುಖಂಡರಿಂದ ಸಂವಿಧಾನ ಜಾಗೃತಿ ಸಪ್ತಾಹ ಮತ್ತು ಭೀಮಸ್ಮರಣೆ ಕಾರ್ಯಕ್ರಮ ನ. 26ರಂದು ಹಮ್ಮಿಕೊಳ್ಳಲಾಗಿದ್ದು, ರಾಜ್ಯದ ನಾಯಕರ ಸೂಚನೆ ಮೇರೆಗೆ ಇಂದು ನಮ್ಮ ಜಿಲ್ಲೆಯಲ್ಲೂ ಪೂರ್ವಭಾವಿ ಸಭೆ ನಡೆಸಿ ಕಾರ್ಯಕ್ರಮದ ಉಸ್ತುವಾರಿಗಳಾಗಿದ್ದ ಮಾಜಿ ಸಂಸದ ಮುನಿಸ್ವಾಮಣ್ಣ ಮುಖಂಡತ್ವದಲ್ಲಿ ಪ್ರಚಾರ ಕೈಗೊಂಡು ಬಾಬಾ ಸಾಹೇಬ್ ಅಂಬೇಡ್ಕರ್ ಅವರನ್ನ ಕಾಂಗ್ರೆಸ್ ಪಕ್ಷ ಹೇಗೆ ಕಡೆಗಣಿಸಿತ್ತು ಎಂಬುದನ್ನು ಸಾರ್ವಜನಿಕರಿಗೆ ತಿಳಿಯಪಡಿಸಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ಎಂದರು.ಸುದ್ದಿಗೋಷ್ಠಿಯಲ್ಲಿ ಮಾಜಿ ಶಾಸಕ ರಾಜಣ್ಣ, ಚಿಂತಾಮಣಿ ವೇಣು ಗೋಪಾಲ್, ಮಹಿಳಾ ಮೋರ್ಚಾದ ಲೀಲಾವತಿ ಶ್ರೀನಿವಾಸ್. ರಾಷ್ಟ್ರೀಯ ಪರಿಷತ್ ಸದಸ್ಯರಾದ ಲಕ್ಷ್ಮೀನಾರಾಯಣ ಗುಪ್ತ, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಎಚ್.ಎಸ್.ಮುರಳಿಧರ, ಕೆ.ಬಿ.ಮುರಳಿ. ಜಿಲ್ಲಾ ಕಾರ್ಯದರ್ಶಿ ಆರ್.ಎನ್. ಅಶೋಕ್ ಜಿಲ್ಲಾ ಮಾಧ್ಯಮ ಸಂಚಾಲಕ ವಿ.ಮಧುಚಂದ್ರ, ಎಸ್.ಸಿ.ಮೋರ್ಚಾ ಜಿಲ್ಲಾಧ್ಯಕ್ಷ ಕೃಷ್ಣಮೂರ್ತಿ, ಮುಖಂಡರಾದ ಬಾಲಕುಂಟಹಳ್ಳಿ ಗಂಗಾಧರ್, ಸೀಕಲ್ ಆನಂದಗೌಡ, ಗೌರಿಬಿದನೂರಿನ ಮಾರ್ಕೆಟ್ ಮೋಹನ್, ಬಿಜೆಪಿ ಮುಖಂಡರು, ಕಾರ್ಯಕರ್ತರು ಇದ್ದರು.

ಸಿಕೆಬ-2 ಸುದ್ದಿಗೋಷ್ಟಿಯಲ್ಲಿ ಮಾಜಿ ಸಂಸದ ಮುನಿಸ್ವಾಮಿ ಮಾತನಾಡಿದರು.

PREV

Recommended Stories

ಮಠ-ಮಾನ್ಯಗಳು ಗ್ರಾಮ ಸೇವೆ, ಅಭಿವೃದ್ಧಿಗೆ ಆದ್ಯತೆ ನೀಡಬೇಕು: ಎಚ್‌.ಕೆ. ಪಾಟೀಲ್
ದೊಡ್ಡ ಕನಸುಗಳ ಈಡೇರಿಕೆಗೆ ಶಿಕ್ಷಣ ಬೇಕು: ಪ್ರೊ.ಡಿ.ಎಸ್.ಗುರು