ಬಿಜೆಪಿಯಿಂದ ನಮೋ ಯುವ ರನ್ ಮ್ಯಾರಾಥಾನ್‌ ಆಯೋಜನೆ

KannadaprabhaNewsNetwork |  
Published : Sep 22, 2025, 01:02 AM IST
ಬಿಜೆಪಿಯಿಂದ ನಮೋ ಯುವ ರನ್ ಮ್ಯಾರಾಥಾನ್‌ ಆಯೋಜನೆ | Kannada Prabha

ಸಾರಾಂಶ

ಕನ್ನಡಪ್ರಭ ವಾರ್ತೆ ವಿಜಯಪುರ: ಬಿಜೆಪಿ ನಗರ ಘಟಕದ ವತಿಯಿಂದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಅಭಿನಂದಿಸಲು ಭಾನುವಾರ ಬೆಳಗ್ಗೆ ನಮೋ ಯುವ ರನ್ ಮ್ಯಾರಾಥಾನ್‌ ನಡೆಸಲಾಯಿತು. ನೂರಾರು ಯುವಕರು, ಹಿರಿಯರು ಅತ್ಯುತ್ಸಾಹದಿಂದ ಮ್ಯಾರಾಥಾನ್‌ನಲ್ಲಿ ಪಾಲ್ಗೊಂಡರು. ನಗರದ ಛತ್ರಪತಿ ಶಿವಾಜಿ ಮಹಾರಾಜ ವೃತ್ತದಿಂದ ಆರಂಭವಾದ ಮ್ಯಾರಾಥಾನ್‌ನಲ್ಲಿ ಸಾವಿರಾರು ಯುವಕರು, ಕಾರ್ಯಕರ್ತರು, ವಿವಿಧ ಸಂಘ- ಸಂಸ್ಥೆಗಳ ಪ್ರತಿನಿಧಿಗಳು ಶುಭ್ರ ವರ್ಣದ ನಮೋ ಯುವ ರನ್ ಟೀ-ಶರ್ಟ್‌ಗಳನ್ನು ಧರಿಸಿ ಪಾಲ್ಗೊಂಡರು.

ಕನ್ನಡಪ್ರಭ ವಾರ್ತೆ ವಿಜಯಪುರ: ಬಿಜೆಪಿ ನಗರ ಘಟಕದ ವತಿಯಿಂದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಅಭಿನಂದಿಸಲು ಭಾನುವಾರ ಬೆಳಗ್ಗೆ ನಮೋ ಯುವ ರನ್ ಮ್ಯಾರಾಥಾನ್‌ ನಡೆಸಲಾಯಿತು. ನೂರಾರು ಯುವಕರು, ಹಿರಿಯರು ಅತ್ಯುತ್ಸಾಹದಿಂದ ಮ್ಯಾರಾಥಾನ್‌ನಲ್ಲಿ ಪಾಲ್ಗೊಂಡರು. ನಗರದ ಛತ್ರಪತಿ ಶಿವಾಜಿ ಮಹಾರಾಜ ವೃತ್ತದಿಂದ ಆರಂಭವಾದ ಮ್ಯಾರಾಥಾನ್‌ನಲ್ಲಿ ಸಾವಿರಾರು ಯುವಕರು, ಕಾರ್ಯಕರ್ತರು, ವಿವಿಧ ಸಂಘ- ಸಂಸ್ಥೆಗಳ ಪ್ರತಿನಿಧಿಗಳು ಶುಭ್ರ ವರ್ಣದ ನಮೋ ಯುವ ರನ್ ಟೀ-ಶರ್ಟ್‌ಗಳನ್ನು ಧರಿಸಿ ಪಾಲ್ಗೊಂಡರು. ಶಿವಾಜಿ ವೃತ್ತದಿಂದ ಆರಂಭಗೊಂಡ ಈ ಮ್ಯಾರಾಥಾನ್ ಗಾಂಧಿವೃತ್ತ, ಬಸವೇಶ್ವರ ವೃತ್ತ, ಡಾ.ಬಿ.ಆರ್‌.ಅಂಬೇಡ್ಕರ ವೃತ್ತದ ಮಾರ್ಗದ ಮೂಲಕ ಪುನ: ಶಿವಾಜಿ ವೃತ್ತಕ್ಕೆ ತಲುಪಿ ಸಂಪನ್ನಗೊಂಡಿತು.

ಮ್ಯಾರಾಥಾನ್‌ಗೆ ಚಾಲನೆ ನೀಡಿದ ಸಂಸದ ರಮೇಶ ಜಿಗಜಿಣಗಿ ಮಾತನಾಡಿ, ದೇಶದ ಅಭಿವೃದ್ಧಿಯ ಜೊತೆಗೆ ಪ್ರತಿ ನಾಗರಿಕನ ಆರೋಗ್ಯಕ್ಕೆ ಪ್ರಧಾನಿ ಮೋದಿ ಒತ್ತು ನೀಡಿದ್ದಾರೆ, ಹೀಗಾಗಿ ಫಿಟ್ ಇಂಡಿಯಾ, ಯೋಗಾಸನಕ್ಕೆ ಪ್ರಥಮಾಧ್ಯತೆ ಕಲ್ಪಿಸಿದ್ದಾರೆ. ಪ್ರತಿಯೊಬ್ಬರ ಬಗ್ಗೆಯೂ ಕಾಳಜಿ ತೋರುವ ಪ್ರಧಾನಿಯನ್ನು ಪಡೆದ ನಾವು ಧನ್ಯರು ಎಂದರು. ಮೋದಿ ಅವರ ಜೊತೆ ನಾವು ಸದಾ ನಿಲ್ಲಬೇಕು ಎಂದರು.

ಮಾಜಿ ಸಚಿವ ಅಪ್ಫಾಸಾಹೇಬ ಪಟ್ಟಣಶೆಟ್ಟಿ, ಬಿಜೆಪಿ ನಗರ ಘಟಕದ ಅಧ್ಯಕ್ಷ ಸಂದೀಪ ಪಾಟೀಲ, ಬಿಜೆಪಿ ಜಿಲ್ಲಾಧ್ಯಕ್ಷ ಗುರುಲಿಂಗಪ್ಪ ಅಂಗಡಿ, ಮುಖಂಡರಾದ ಉಮೇಶ ಕಾರಜೋಳ, ಡಾ.ಸುರೇಶ ಬಿರಾದಾರ, ಸ್ವಪ್ನಾ ಕಣಮುಚನಾಳ, ಚಂದ್ರಶೇಖರ ಕವಟಗಿ, ಸಂಜೀವ ಐಹೊಳೆ, ವಿಜಯ ಜೋಶಿ, ರಾಹುಲ ಜಾಧವ, ಕೃಷ್ಣಾ ಗುನ್ಹಾಳಕರ, ರಾಜಕುಮಾರ ಸಗಾಯಿ, ಸಚಿನ ಬೊಂಬಳೆ, ರಾಜು ವಾಲಿ, ಶ್ರೀಧರ ಬಿಜ್ಜರಗಿ, ಸಿದ್ದು ಮಲ್ಲಿಕಾರ್ಜುನ ಮಠ ಪಾಲ್ಗೊಂಡಿದ್ದರು.

ಚಿತ್ರ: 21BIJ02

ಬರಹ: ಬಿಜೆಪಿಯಿಂದ ನಮೋ ಯುವ ರನ್ ಮ್ಯಾರಾಥಾನ್‌ ಆಯೋಜನೆ

PREV

Recommended Stories

ಸಿಬ್ಬಂದಿ ಕೊರತೆ ಬೆಂಗಳೂರು ನಗರದಲ್ಲಿ ಜಾತಿ ಗಣತಿ ವಿಳಂಬ
ಸಮೀಕ್ಷೆ ಹೆಸರಿನಲ್ಲಿ ಹಿಂದೂ ಸಮಾಜ ಒಡೆಯುವ ಹುನ್ನಾರ