ದೇವರು, ಧರ್ಮದ ಹೆಸರಲ್ಲಿ ಬಿಜೆಪಿ ರಾಜಕೀಯ: ಸಚಿವ ಶಿವರಾಜ ತಂಗಡಗಿ

KannadaprabhaNewsNetwork | Published : Jan 26, 2024 1:46 AM

ಸಾರಾಂಶ

ಕನಕಗಿರಿ ಕ್ಷೇತ್ರದ ರಸ್ತೆಗಳು ಕಳೆದ ಐದು ವರ್ಷಗಳಲ್ಲಿ ಸಂಪೂರ್ಣ ಹದಗೆಟ್ಟಿದ್ದು ಸಂಚಾರಕ್ಕೆ ಆಯೋಗ್ಯವಾಗಿದ್ದು ಮುಖ್ಯಮಂತ್ರಿ ₹200 ಕೋಟಿ ರಸ್ತೆ ದುರಸ್ತಿ ಮಾಡಲು ಅನುದಾನ ನೀಡಿದ್ದು ಶೀಘ್ರ ಟೆಂಡರ್ ಕರೆದು ಕಾಮಗಾರಿ ಆರಂಭಿಸಲಾಗುತ್ತದೆ

ಗಂಗಾವತಿ: ಕಾಂಗ್ರೆಸ್ಸಿಗರು ಬಡವರು, ದೀನ-ದಲಿತರು ಸೇರಿ ಸಮಸ್ತರಿಗೆ ಕಲ್ಯಾಣವಾಗುವ ಯೋಜನೆಗಳ ಅನುಷ್ಠಾನ ಮತ್ತು ದೇಶದ ಭದ್ರತೆಯತ್ತ ಗಮನ ಹರಿಸಿದರೆ, ಬಿಜೆಪಿಯವರು ಜಾತಿ, ಧರ್ಮ ಮತ್ತು ದೇವರ ಹೆಸರಿನಲ್ಲಿ ಜನರ ಮಧ್ಯೆ ಜಗಳ ಹಚ್ಚಿ ರಾಜಕೀಯ ಲಾಭ ಮಾಡುವ ಚಿಂತೆ ಇರುತ್ತದೆ ಎಂದು ಸಚಿವ ಶಿವರಾಜ್ ತಂಗಡಗಿ ಆರೋಪಿಸಿದರು.ತಾಲೂಕಿನ ಜಂಗಮರ ಕಲ್ಗುಡಿ ಗ್ರಾಮದಲ್ಲಿ ಅಭಯಹಸ್ತ ಜನಸಂಪರ್ಕ ಸಭೆಯಲ್ಲಿ ಸಾರ್ವಜನಿಕರಿಂದ ಆಹವಾಲು ಸ್ವೀಕರಿಸಿ ಮಾತನಾಡಿದರು.ಕಳೆದ ವಿಧಾನಸಭಾ ಚುನಾವಣೆಯಲ್ಲಿ ಜಂಗಮರ ಕಲ್ಗುಡಿ ಗ್ರಾಮದಲ್ಲಿ ಅತಿಹೆಚ್ಚು ಮತಗಳನ್ನು ನೀಡಿ ಆಶೀರ್ವಾದ ಮಾಡಿದ್ದರಿಂದ ನನ್ನ ಗೆಲುವು ಸಾಧ್ಯವಾಗಿದೆ. ಚುನಾವಣೆ ಸಂದರ್ಭದಲ್ಲಿ ನೀಡಿದ್ದ ಭರವಸೆಯಂತೆ ಪ್ರತಿ ಗ್ರಾಮಕ್ಕೂ ತೆರಳಿ ಜನರ ಸಮಸ್ಯೆ ಆಲಿಸುತ್ತಿದ್ದೇನೆ. ಕನಕಗಿರಿ ಕ್ಷೇತ್ರದ ರಸ್ತೆಗಳು ಕಳೆದ ಐದು ವರ್ಷಗಳಲ್ಲಿ ಸಂಪೂರ್ಣ ಹದಗೆಟ್ಟಿದ್ದು ಸಂಚಾರಕ್ಕೆ ಆಯೋಗ್ಯವಾಗಿದ್ದು ಮುಖ್ಯಮಂತ್ರಿ ₹200 ಕೋಟಿ ರಸ್ತೆ ದುರಸ್ತಿ ಮಾಡಲು ಅನುದಾನ ನೀಡಿದ್ದು ಶೀಘ್ರ ಟೆಂಡರ್ ಕರೆದು ಕಾಮಗಾರಿ ಆರಂಭಿಸಲಾಗುತ್ತದೆ ಎಂದರು.ಮರಳಿ ಹೋಬಳಿಯಲ್ಲಿ 10 ಎಕರೆ ಸರ್ಕಾರಿ ಭೂಮಿ ಪಡೆದು ಮೊರಾರ್ಜಿ ದೇಸಾಯಿ ವಸತಿ ಶಾಲೆ ಆರಂಭಿಸಲಾಗುತ್ತದೆ. ಕಲ್ಗುಡಿ ಗ್ರಾಮದ ರುದ್ರಭೂಮಿ ಅಭಿವೃದ್ಧಿ, ಶಾಲಾ ಕಂಪೌಂಡ್ ನಿರ್ಮಾಣ, ವಿದ್ಯುತ್ ತಂತಿ ಬದಲಾವಣೆ, ಚರಂಡಿ, ಗ್ರಾಮದೊಳಗಿನ ರಸ್ತೆ, ಶಾಲಾ ಕೊಠಡಿಗಳ ದುರಸ್ತಿ ಸೇರಿ ಸಾರ್ವಜನಿಕರ ಕೆಲಸ ಕಾರ್ಯ ಮಾಡಿ ಕೊಡಿಕೊಡಲಾಗುತ್ತದೆ. ಶಾಲಾ ಕಾಲೇಜು ಮಕ್ಕಳಿಗೆ ಕೆಎಸ್ಸಾರ್ಟಿಸಿ ಬಸ್ ನಿಲುಗಡೆ ಸೂಚಿಸಲಾಗಿದೆ. ಸರ್ಕಾರ ಐದು ಗ್ಯಾರಂಟಿ ಯೋನೆಗಳ ಪೈಕಿ 8 ಮಹಿಳೆಯರಿಗೆ ಗೃಹಲಕ್ಷ್ಮಿ ಯೋಜನೆ ಹಾಗೂ 180 ಮನೆಗಳಿಗೆ ಗೃಹಜ್ಯೋತಿ ಲಾಭ ದೊರಕುತ್ತಿಲ್ಲ ಎಂಬ ದೂರು ಇದ್ದು, ಅದನ್ನು ಸರಿಪಡಿಸಲಾಗುತ್ತದೆ ಎಂದರು.ದೇವಿಕ್ಯಾಂಪಿನಲ್ಲಿ ರುದ್ರಭೂಮಿ ಒತ್ತುವರಿ ತೆರವು, ನ್ಯಾಯಬೆಲೆ ಅಂಗಡಿ ಮಂಜೂರಿ ಮಾಡಲಾಗುತ್ತದೆ. ಕನಕಗಿರಿ ಕ್ಷೇತ್ರದಲ್ಲಿ ಪ್ರತಿ ವಾರವೂ ಅಭಯಹಸ್ತ ಜನಸಪರ್ಕ ಸಭೆ ಆಯೋಜನೆ ಮಾಡಿ ಜನರ ಮನೆಯ ಬಳಿಗೆ ಆಡಳಿತ ಯಂತ್ರ ತೆಗೆದುಕೊಂಡು ಹೋಗಿ ಸರ್ಕಾರದ ಯೋಜನೆಗಳನ್ನು ತಲುಪಿಸುವ ಕಾರ್ಯಕ್ರಮ ನಿರಂತರ ನಡೆಸಲಾಗುತ್ತಿದೆ ಎಂದರು.ಸಭೆಯಲ್ಲಿ ತಹಸೀಲ್ದಾರ್ ಯು.ನಾಗರಾಜ, ತಾಪಂ ಇಒ ಲಕ್ಷ್ಮೀದೇವಿ ಯಾದವ್, ಸಿಪಿಐ ಸೋಮಶೇಖರ ಜುಟ್ಟಲ್, ಬಿಇಒ ವೆಂಕಟೇಶ ಶಿಂಧೆ, ಕೆಎಸ್ಸಾರ್ಟಿಸಿ ವ್ಯವಸ್ಥಾಪಕ ರಾಜಶೇಖರ ಅಣ್ಣಿಗೇರಿ, ಶಿವನಗೌಡ, ಜೆಸ್ಕಾಂ ಅಧಿಕಾರಿಗಳಾದ ವಿರೇಶ, ಮಂಜುನಾಥ, ಜಿಪಂ ಮಾಜಿ ಸದಸ್ಯ ಅಮರೇಶ ಗೋನಾಳ, ಎಪಿಎಂಸಿ ನಿರ್ದೇಶಕ ರಡ್ಡಿ ಶ್ರೀನಿವಾಸ, ಕಲ್ಗುಡಿ ಪ್ರಸಾದ, ಶರಣೇಗೌಡ, ತಾಪಂ ಮಾಜಿ ಸದಸ್ಯರಾದ ಬಿ.ಫಕೀರಯ್ಯ, ವೆಂಕೋಬ ಮೇಲುಸಕ್ರಿ ಗ್ರಾಪಂ ಅಧ್ಯಕ್ಷೆ-ಉಪಾಧ್ಯಕ್ಷರು, ಸದಸ್ಯರು, ಪಿಡಿಒ ಸೇರಿ ಗ್ರಾಮಸ್ಥರಿದ್ದರು.

Share this article