ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಕೃಷಿ ಕಾರ್ಯದಲ್ಲಿ ಟ್ರ್ಯಾಕ್ಟರ್ ಬಳಕೆ ಸಾಮಾನ್ಯವಾಗಿದೆ. ಬರದಿಂದ ಸಂಕಷ್ಟದಲ್ಲಿರುವ ರೈತರು ತೈಲ ಬೆಲೆ ಏರಿಕೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಜನಸಾಮಾನ್ಯರು ವಾಹನ ಬಳಿಸುವುದು ಕಷ್ಟವಾಗಿದ್ದು, ಕೂಡಲೆ ಕಾಂಗ್ರೆಸ್ ಸರ್ಕಾರ ಪೆಟ್ರೋಲ್, ಡೀಸೆಲ್ ದರ ಹೆಚ್ಚಳ ನಿರ್ಧಾರ ಹಿಂಪಡೆಯಬೇಕು. ಇಲ್ಲದಿದ್ದರೆ ಬಿಜೆಪಿ ಹೋರಾಟ ನಡೆಸಲಿದೆ ಎಂದು ಮಾಜಿ ಶಾಸಕ ಡಾ.ವೀರಣ್ಣ ಚರಂತಿಮಠ ಹೇಳಿದರು.ಸಮೀಪದ ಸಂಗಮ ಕ್ರಾಸ್ ನಲ್ಲಿ ಭಾರತೀಯ ಜನತಾ ಪಕ್ಷ ಬಾಗಲಕೋಟೆ ಮತಕ್ಷೇತ್ರದ ಗ್ರಾಮೀಣ ಹಾಗೂ ನಗರ ಮಂಡಳ ವತಿಯಿಂದ ತೈಲ ಬೆಲೆ ಏರಿಕೆ ಖಂಡಿಸಿ ರಾಜ್ಯ ಸರ್ಕಾರದ ವಿರುದ್ಧ ಗುರುವಾರ ಹಮ್ಮಿಕೊಂಡ ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದರು.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದು 15 ತಿಂಗಳಾದರೂ ಒಂದು ರೂಪಾಯಿ ಅಭಿವೃದ್ಧಿ ಕಾರ್ಯ ಮಾಡಿಲ್ಲ. ಯಾವುದೇ ರೀತಿಯ ಸೌಲಭ್ಯಗಳನ್ನು ಒದಗಿಸಿಲ್ಲ, ಪೆಟ್ರೋಲ್, ಡೀಸೆಲ್, ಹಾಲಿನ ದರ, ಸ್ಟಾಂಪ್ ಡ್ಯೂಟಿ, ಆಸ್ತಿ ಕರ ಹೆಚ್ಚಿಸಲಾಗಿದೆ. ಗ್ಯಾರಂಟಿ ಹೆಸರಿನಲ್ಲಿ ಬೆಲೆ ಏರಿಕೆ ಮಾಡಿದ ಕಾಂಗ್ರೆಸ್ ಸರ್ಕಾರ ರಾಜ್ಯದ ಜನತೆಗೆ ಬರೆ ಹಾಕುತ್ತಿದೆ, ಗ್ಯಾರಂಟಿ ಎಂದು ಹೇಳುತ್ತಲೇ ಜನರ ಕಿವಿಗೆ ಹೂವು ಇಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಕೂಡಲೇ ಪೆಟ್ರೋಲ್, ಡೀಸೆಲ್ ಬೆಲೆ ಇಳಿಸಬೇಕು, ಇಲ್ಲವಾದಲ್ಲಿ ಸದನದ ಒಳಗೆ ಹಾಗೂ ಹೊರಗೆ ಜನರ ಪರವಾಗಿ ಹೋರಾಟ ಮಾಡಲಾಗುವುದು ಎಂದರು.
ಇದಕ್ಕೂ ಮುಂಚೆ ಸಂಗಮ ಕ್ರಾಸ್‌ನ ಲ್ಲಿ ಮಾನವ ಸರಪಳಿ ನಿರ್ಮಸಿ ರಸ್ತೆ ತಡೆ ನಡೆಸಿ ಪ್ರಟಿಭಟನೆ ನಡೆಸಲಾಯಿತು. ಬೆಳಗಾವಿ ಪ್ರಭಾರಿ ಬಸವರಾಜ ಯಂಕಂಚಿ ಹಾಗೂ ಶಿವಾನಂದ ಟವಳಿ ಮಾತನಾಡಿದರು, ಪ್ರತಿಭಟನೆಯಲ್ಲಿ ಬಿಟಿಡಿಎ ಮಾಜಿ ಅಧ್ಯಕ್ಷ ಜಿ.ಎನ್. ಪಾಟೀಲ, ಶಿವಾನಂದ ಕೋಟಿ, ಲಕ್ಷ್ಮೀನಾರಾಯಣ ಕಾಸಟ್ರಾ, ಜುನಾಯ್ಕರ, ರಾಜು ಮುದೆನೂರ, ಗ್ರಾಮೀಣ ಮಂಡಲ ಅಧ್ಯಕ್ಷ ಸುರೇಶ ಕಣ್ಣೂರು, ಮಲ್ಲೇಶ ವಿಜಾಪುರ, ಕಲ್ಲಪ್ಪ ಭಗವತಿ, ಬಸವರಾಜ ಹುನಗುಂದ, ಮುತ್ತು ಸೀಮಿಕೇರಿ, ಉಮೇಶ ಜುಮನಾಳ, ರಂಗನಗೌಡ ಗೌಡರ, ಮುತ್ತಣ್ಣ ಕೋಲ್ಹಾರ, ಮಲ್ಲಯ್ಯ ಹಿರೇಮಠ, ಸೋಮಸಿಂಗ್ ಲಮಾಣಿ, ಸಂಗಪ್ಪ ಗಾಣಿಗೇರ, ಮಂಜುನಾಥ ಗೌಡರ, ಹುಚ್ಚೇಶ ನಿಲುಗಲ್, ಕವಿ ಬೇನಕಟ್ಟಿ, ಕರಿಯಪ್ಪ ಕಟ್ಟಿಮನಿ, ಸಿದ್ದು ಲೋಕಾಪುರ,ವಾಸು ಜಾಧವ ಸೇರಿದಂತೆ ಅನೇಕ ಬಿಜೆಪಿ ಕಾರ್ಯಕರ್ತರು ಭಾಗವಹಿಸಿದ್ದರು.ವಾಲ್ಮೀಕಿ ಅಭಿವೃದ್ಧಿ ನಿಗಮದ ₹ 187 ಕೋಟಿಯನ್ನು ತೆಲಂಗಾಣ ಹಾಗೂ ಬೇರೆ ರಾಜ್ಯಗಳ ಚುನಾವಣೆಗೆ ಬಳಸುವುದರ ಮೂಲಕ ವಾಲ್ಮೀಕಿ ಜನಾಂಗಕ್ಕೆ ಕಾಂಗ್ರೆಸ್ ಸರ್ಕಾರ ಮೋಸ ಮಾಡಿದೆ. ವಾಲ್ಮೀಕಿ ನಿಗಮದ ಅವ್ಯವಹಾರದ ಕುರಿತು ಸರ್ಕಾರ ಎಸ್ಐಟಿ ತನಿಖೆ ಮೂಲಕ ಮುಚ್ಚಿ ಹಾಕಲು ಯತ್ನಿಸುತ್ತಿದೆ.
-ಡಾ.ವೀರಣ್ಣ ಚಂತಿಮಠ ಮಾಜಿ ಶಾಸಕ