ಚನ್ನಪಟ್ಟಣ: ಕೆಂಪೇಗೌಡರ ದೂರದೃಷ್ಟಿಯ ಫಲವೇ ಇಂದು ಬೆಂಗಳೂರು ವಿಶ್ವದ ಪ್ರಮುಖ ನಗರಗಳಲ್ಲಿ ಒಂದೆನಿಸಿದೆ. ಬೆಂಗಳೂರಿನಲ್ಲಿ ಎಲ್ಲ ಜನಾಂಗದ ಕುಲ ಕಸುಬಿಗೆ ತಕ್ಕಂತೆ ಪೇಟೆಗಳನ್ನು ನಿರ್ಮಿಸಿಕೊಟ್ಟರು. ಅವರು ಒಂದು ಸಮುದಾಯಕ್ಕೆ ಸೀಮಿತರಲ್ಲ ಎಂದು ಕಸ್ತೂರಿ ಕರ್ನಾಟಕ ಜನಪರ ವೇದಿಕೆ ರಾಜ್ಯಾಧ್ಯಕ್ಷ ರಮೇಶ್‌ಗೌಡ ತಿಳಿಸಿದರು.
ನಾಡಪ್ರಭು ಕೆಂಪೇಗೌಡರು ಸರ್ವಧರ್ಮ, ಸಮುದಾಯ, ಜಾತಿಯ ಜನತೆಗೆ ಜೀವನ ಕಟ್ಟಿಕೊಳ್ಳಲು ಅವಕಾಶ ಮಾಡಿಕೊಟ್ಟಿರುವ ಬೆಂಗಳೂರು ನಗರದ ನಿರ್ಮಾತೃ. ಸರ್ಕಾರಗಳ ನಿರ್ಲಕ್ಷ್ಯ ಮತ್ತು ಜನರ ದುರಾಸೆಯಿಂದ ಕೆರೆಕಟ್ಟೆಗಳು ಒತ್ತುವರಿಯಾಗಿವೆ ಎಂದು ವಿಷಾದಿಸಿದರು.
ನಿವೃತ್ತ ಪ್ರಾಂಶುಪಾಲ ನಿಂಗೇಗೌಡ ಮಾತನಾಡಿ, ನಾಡಿನ ಭವಿಷ್ಯನ್ನು ಮನದಲ್ಲಿಟ್ಟುಕೊಂಡು ಕೆಂಪೆಗೌಡರು ಬೆಂಗಳೂರು ನಿರ್ಮಿಸಿದ್ದರು. ಎಲ್ಲಡೆ ಕೆರೆ-ಕಟ್ಟೆಗಳು, ಕೋಟೆ, ಹೆಬ್ಬಾಗಿಲು ನಿರ್ಮಾಣ ಮಾಡಿದ್ದರು. ಕೆಂಪೇಗೌಡರ ಕೊಡುಗೆ ಸ್ಮರಿಸುವುದು ನಮ್ಮೆಲ್ಲರ ಕರ್ತವ್ಯ ಎಂದರು.ಶಿಕ್ಷಣ ಸಂಯೋಜಕ ಚಕ್ಕೆರೆ ಯೋಗೀಶ್ ಮಾತನಾಡಿ, ನಾಡಪ್ರಭು ಕೆಂಪೇಗೌಡರು ಮುಂದಿನ ಭವಿಷ್ಯಕ್ಕೆ ಅನುಕೂಲವಾಗಲಿ ಎಂಬ ನಿಟ್ಟಿನಲ್ಲಿ ಹಲವಾರು ಕೆರೆಕಟ್ಟೆಗಳನ್ನು ನಿರ್ಮಿಸಿ ವ್ಯಾಪಾರಕ್ಕೆ ಅನುಕೂಲವಾಗುವ ಪೇಟೆಗಳನ್ನು ನಿರ್ಮಿಸಿದರು. ಇಂದು ರಾಜ್ಯ ಸೇರಿದಂತೆ ಹೊರ ರಾಜ್ಯಗಳಿಂದ ಬರುವ ಪ್ರತಿಯೊಬ್ಬರಿಗೂ ತಮ್ಮ ಜೀವನ ರೂಪಿಸಿಕೊಳ್ಳಲು ಆಸರೆಯಾಗಿದೆ. ಕೆಂಪೇಗೌಡರು ಕಟ್ಟಿದ ಬೆಂಗಳೂರು ಆಧುನಿಕ ತಂತ್ರಜ್ಞಾನದ ಕೇಂದ್ರ ಬಿಂದುವಾಗಿದ್ದು, ದೇಶದಲ್ಲೇ ಪ್ರಖ್ಯಾತಿ ಪಡೆದಿದೆ ಎಂದರು.
ಶಿಕ್ಷಕ ವಳಗೆರೆದೊಡ್ಡಿ ಕೃಷ್ಣ, ನಿವೃತ್ತ ಸಿಡಿಪಿಒ ಪುಟ್ಟಸ್ವಾಮಿ, ವೇದಿಕೆ ಜಿಲ್ಲಾಧ್ಯಕ್ಷ ಬೇವೂರು ಯೋಗೀಶ್‌ಗೌಡ, ಕೆಪಿಸಿಸಿ ಸದಸ್ಯ ಪಿ.ರಮೇಶ್, ಮಂಚೇಗೌಡ, ಗಿರಿ ಬೈರಾಪಟ್ಟಣ, ಸೂರಪ್ಪಗೌಡ, ನಾಗರಾಜು, ವಳಗೆರೆ ದೊಡ್ಡಿ ಕೃಷ್ಣ ಇತರರಿದ್ದರು.ಪೊಟೋ೨೭ಸಿಪಿಟಿ೨: ಚನ್ನಪಟ್ಟಣದಲ್ಲಿ ಕಾವೇರಿ ಸರ್ಕಲ್‌ನಲ್ಲಿ ಕಕಜವೇಯಿಂದ ಕೆಂಪೇಗೌಡ ಜಯಂತಿ ಆಚರಿಸಲಾಯಿತು.