ಸೂರಿಂಜೆಯಲ್ಲಿ ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ಪ್ರತಿಭಟನೆ

KannadaprabhaNewsNetwork |  
Published : Jun 23, 2025, 11:47 PM IST
ಸೂರಿಂಜೆ ಬಿಜೆಪಿ ಪ್ರತಿಭಟನೆ  | Kannada Prabha

ಸಾರಾಂಶ

ಸೂರಿಂಜೆ ದೇಲಂತಬೆಟ್ಟು ಬಿಜೆಪಿ ಶಕ್ತಿ ಕೇಂದ್ರ ವತಿಯಿಂದ ಸೂರಿಂಜೆ ಗ್ರಾಮ ಪಂಚಾಯಿತಿ ಕಚೇರಿಯ ಎದುರುಗಡೆ ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಯಿತು.

ಕನ್ನಡಪ್ರಭವಾರ್ತೆ ಮೂಲ್ಕಿ

ರಾಜ್ಯ ಸರ್ಕಾರದಿಂದ ಬಡವರಿಗೆ ಬಸವ ವಸತಿ ಯೋಜನೆಯಲ್ಲಿ ನೂತನ ಮನೆ ನಿರ್ಮಿಸಲು ಅನುದಾನ ಬರುತ್ತಿದ್ದು ಪ್ರಸ್ತುತ ಕಾಂಗ್ರೆಸ್ ಸರ್ಕಾರ ಎರಡು ವರ್ಷಗಳಿಂದ ಮನೆ ಮಂಜೂರಾತಿ ಮತ್ತು ಅನುದಾನ ನೀಡುತ್ತಿಲ್ಲ. ಪ್ರತಿಯೊಂದು ಇಲಾಖೆಯಲ್ಲಿಯೂ ಭ್ರಷ್ಟಾಚಾರ ನಡೆಸಲು ರಾಜ್ಯದ ಕಾಂಗ್ರೆಸ್ ಸರ್ಕಾರ ಅನುಮತಿ ನೀಡಿದೆ ಎಂದು ಸೂರಿಂಜೆ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಜೀತೆಂದ್ರ ಶೆಟ್ಟಿ ಹೇಳಿದರು.

ಸೂರಿಂಜೆ ದೇಲಂತಬೆಟ್ಟು ಬಿಜೆಪಿ ಶಕ್ತಿ ಕೇಂದ್ರ ವತಿಯಿಂದ ಸೂರಿಂಜೆ ಗ್ರಾಮ ಪಂಚಾಯಿತಿ ಕಚೇರಿಯ ಎದುರುಗಡೆ ರಾಜ್ಯ ಸರ್ಕಾರದ ವಿರುದ್ಧ ನಡೆದ ಪ್ರತಿಭಟನೆ ಸಭೆಯಲ್ಲಿ ಮಾತನಾಡಿದ ಅವರು ಬಡ ವರ್ಗದವರಿಗೆ ಪಂಚಾಯತ್ ವತಿಯಿಂದ ದೊರಕಬೇಕಾದ 11 ಬಿ ಯನ್ನು ನಿಲ್ಲಿಸಲಾಗಿದೆ. 9 ಮತ್ತು 11 ಮಾಡಲು ಮೂಡಕ್ಕೆ ಹೋಗಬೇಕಾಗುತ್ತದೆ. ಮೂಡಾದಲ್ಲಿ ಭ್ರಷ್ಟಾಚಾರ ತುಂಬಿ ತುಳುಕುತ್ತಿದೆ. ದಲ್ಲಾಳಿಗಳ ಹಾವಳಿಯಿಂದ ಬಡಜನರಿಗೆ ತುಂಬಾ ಅನ್ಯಾಯವಾಗಿದೆ. ಅದನ್ನು ಕೇಳುವವರೆ ಇಲ್ಲ, ಬಡವರಿಗೆ ಮನೆ ಕಟ್ಟಲು ಬೇಕಾಗಿರುವ ಕಲ್ಲು ಹೊಯ್ಗೆ ಸ್ಥಗಿತಗೊಂಡಿದೆ , ಬಿ.ಪಿ.ಎಲ್ ರೇಶನ್ ಕಾರ್ಡ್ ಸ್ಥಗಿತಗೊಂಡಿದೆ, ವೃದ್ಯಾಪ್ಯ ವೇತನ ಸಂಧ್ಯಾಸುರಕ್ಷಾ ದಂತಹ ಬಡಪರ ಯೋಜನೆಗಳು ಸ್ಥಗಿತಗೊಂಡಿದೆ. ಬಿಟ್ಟಿ ಭಾಗ್ಯ ಯೋಜನೆ ಕೊಟ್ಟು ಜನರನ್ನು ಮುರ್ಖಾರನ್ನಾಗಿಸಿ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದೆ. ಈ ಎಲ್ಲಾ ಸಮಸ್ಯೆಗಳನ್ನು ಅದಷ್ಟು ಶೀಘ್ರವಾಗಿ ರಾಜ್ಯ ಸರ್ಕಾರ ಸರಿಪಡಿಸಬೇಕು ಎಂದು ಹೇಳಿದರು.

ಗ್ರಾಮ ಪಂಚಾಯತ್ ಉಪಾಧ್ಯಕ್ಷ ಗೋಪಾಲ ಕುಲಾಲ್, ಸದಸ್ಯರಾದ ಸಿಂಧು, ಪದ್ಮಾವತಿ ಶೆಟ್ಟಿ, ದಿವಾಕರ ಶೆಟ್ಟಿ, ಮಾಜಿ ತಾಲೂಕು ಪಂಚಾಯತ್ ಸದಸ್ಯರಾದ ಸುಪ್ರೀತಾ ಶೆಟ್ಟಿ ಕರಂಬಾರು, ಬಿಜೆಪಿ ಪ್ರಮುಖರಾದ ಮನೋಹರ ಶೆಟ್ಟಿ ಸೂರಿಂಜೆ, ಶಶಿಧರ ಶೆಟ್ಟಿ ಸೂರಿಂಜೆ, ಪರಶುರಾಮ ಶೆಟ್ಟಿ ಸೂರಿಂಜೆ, ದಿನೇಶ್ ಕುಲ್ಲಂಗಾಲು, ಸುಮನ್ ಶೆಟ್ಟಿ, ಪುರಂದರ ಕುಲಾಲ್, ದೇವಿಕಿರಣ್ ಶಿಬರೂರು, ಸಂಪತ್, ಗಿರೀಶ್ ಕೋಟೆ, ಬಾಲಕೃಷ್ಣ ಕೈಯೂರು, ದುರ್ಗಪ್ರಸಾದ್, ರಘರಾಮ ಮುಟ್ಟಿಕಲ್, ಪುನೀತ್, ಯೋಗೀಶ್ ಕೈಯೂರ್, ದಯಾನಂದ ಮತ್ತಿತರರು ಉಪಸ್ಥಿತರಿದ್ದರು.

ಈ ಸಂದರ್ಭ ಮನವಿ ಪತ್ರವನ್ನು ಪಂಚಾಯತ್ ಪಿ,ಡಿ.ಒ ಮೂಲಕ ಸರ್ಕಾರಕ್ಕೆ ಸಲ್ಲಿಸಲಾಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಜಿ ರಾಮ್‌ ಜಿ ಕುರಿತು ಇಂದು ರಾಜ್ಯ ವಿಶೇಷ ಸಂಪುಟ ಸಭೆ
ಫೆ.13ಕ್ಕೆ ಕಾಂಗ್ರೆಸ್‌ ಸರ್ಕಾರಕ್ಕೆ 1000 ದಿನ