ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ
ಬೆಲೆ ಏರಿಕೆ ಹಾಗೂ ಬರಗಾಲದಿಂದ ಸಂಕಷ್ಟಕ್ಕೀಡಾದ ರೈತರಿಗೆ ಬೆಳೆ ಪರಿಹಾರ, ಬೆಳೆ ವಿಮೆ ನೀಡುವಲ್ಲಿ ವಿಫಲವಾಗಿರುವ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ಗದಗ ಗ್ರಾಮೀಣ ಮಂಡಲದ ವತಿಯಿಂದ ಮುಳಗುಂದದ ಬಸಾಪೂರ ಕ್ರಾಸ್‌ನಲ್ಲಿ ರಸ್ತೆ ತಡೆ ನಡೆಸಿ ಪ್ರತಿಭಟಿಸಲಾಯಿತು. ಬಳಿಕ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು. ಪ್ರತಿಭಟನೆಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ತೋಟಪ್ಪ (ರಾಜು) ಕುರುಡಗಿ, ಗ್ರಾಮೀಣ ಮಂಡಲ ಅಧ್ಯಕ್ಷ ಬೂದಪ್ಪ ಹಳ್ಳಿ, ಪ್ರಧಾನ ಕಾರ್ಯದರ್ಶಿಗಳಾದ ಸುಭಾಸ ಸುಂಕದ, ಮಂಜುನಾಥ ಹಳ್ಳೂರಮಠ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಲಿಂಗರಾಜ ಪಾಟೀಲ, ಪ್ರಮುಖರಾದ ಮಹದೇವಪ್ಪ ಚಿಂಚಲಿ, ಬದ್ರೇಶ್ ಕುಸ್ಲಾಪುರ್, ವೈ.ಪಿ. ಅಡ್ನೂರ್, ಮಲ್ಲಾರೆಪ್ಪ ಬೆಂತೂರ, ಅನಿಲ್ ಅಬ್ಬಿಗೇರಿ, ಚಗನ್ ರಾಜಪುರೋಹಿತ್, ಶೇಖಣ್ಣ ಕನ್ಯಾಳ್, ಶರಣಪ್ಪ ಚಿಂಚಲಿ, ಪರಮೇಶ್ ನಾಯಕ್, ನಿಂಗಯ್ಯ ಇಟಗಿಮಠ, ಮಹೇಶ್ ಕಮ್ಮಾರ್, ಮಹದೇವಪ್ಪ ಪ್ಯಾಟಿ, ನೀಲಪ್ಪ ಮಹಾಲಿಂಗಪುರ್, ಲಕ್ಷ್ಮಣ ರಣತುರ, ರೇಖಾ ಮದ್ನೂರ್, ಅರವಿಂದ ಅಣ್ಣಿಗೇರಿ, ಬಾಗಪ್ಪ ವಗ್ಗರ್, ನಾಗರಾಜ್ ಮದ್ನೂರ್, ಸತ್ಯನಾರಾಯಣ ಗೋಡ್ಕೆ, ಸೋಮರೆಡ್ಡಿ ನಡುರ್, ಬಸವರಾಜ ಕೋರಿಶೆಟ್ಟರ, ಬೂದಪ್ಪ ಮಾಡಳ್ಳಿ, ಯಲ್ಲಪ್ಪ ಕೋರಿ, ವಿರುಪಾಕ್ಷ ಹಸಬಿ, ಕನಕದಾಸ ಮೇವುರ್, ಈರಣ್ಣ, ಮೋಹನ ಮದ್ದಿನ, ಬಿ.ಎಂ. ಕುಲಕರ್ಣಿ, ಮಲ್ಲಣ್ಣ ಬಳ್ಳಾರಿ, ಮಲ್ಲಪ್ಪ ಕುಂದಗೋಳ, ಸುರೇಶ ರಾಮಣ್ಣವರ, ನಾಗರಾಜ ಕತ್ತಿ, ಸಿ.ಎಸ್. ಪತ್ರಿ, ಪ್ರಮೋದ ಡಂಬಳ, ಲಕ್ಷ್ಮಣ ಇಂಗಳಳ್ಳಿ, ಬಿ.ಎಲ್. ಜಾದವ, ಎ.ಎನ್. ಬಾತಾಖಾನಿ, ದೇವಪ್ಪ ನೀಲಗುಂದ, ಮಂಜು ಕುಂಬಾರ, ನಿಂಗಪ್ಪ ಬುಷಿ, ಮಂಜಪ್ಪ ಸಿದ್ದನಗೌಡ್ರ, ಕಿರಣ ಬಾತಾಖಾನಿ, ಅಡಿವೆಪ್ಪ ಬಾತಾಖಾನಿ, ಬಾಗಣ್ಣವರ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.