ಕರ್ನಾಟಕದ ಸಾಂಸ್ಕೃತಿಕ ನಾಯಕ ಬಸವಣ್ಣನವರು ಈ ನಾಡಿನಲ್ಲಿ ಕೋಟ್ಯಾಂತರ ಅನುಯಾಯಿಗಳನ್ನು ಹೊಂದಿದ್ದಾರೆ.
ಬಸವ ಪರ ಸಂಘಟನೆಗಳ ಒಕ್ಕೂಟದಿಂದ ತಹಸೀಲ್ದಾರ್ ಮೂಲಕ ಸರ್ಕಾರಕ್ಕೆ ಮನವಿಕನ್ನಡಪ್ರಭ ವಾರ್ತೆ ಮುಂಡರಗಿ
ಕರ್ನಾಟಕದ ಸಾಂಸ್ಕೃತಿಕ ನಾಯಕ ಬಸವಣ್ಣನವರು ಈ ನಾಡಿನಲ್ಲಿ ಕೋಟ್ಯಾಂತರ ಅನುಯಾಯಿಗಳನ್ನು ಹೊಂದಿದ್ದಾರೆ. ಅಂತಹ ಮಹಾನ್ ನಾಯಕರ ವಿರುದ್ಧ ಇತ್ತೀಚೆಗೆ ಬಸವ ಮಂಟಪ ಕೃತಿಕಾರ ರವಿ ಹಂಜ್ ಸಂದರ್ಶನದಲ್ಲಿ ಬಸವಣ್ಣನವರು ಕಳ್ಳರು, ಕೊಲೆಗಾರ, ಬಿಜ್ಜಳನ ಖಜಾನೆಯನ್ನು ಕದ್ದು/ಲೂಟಿ ಮಾಡಿ ದಾಸೋಹ ಮಾಡಿದರು ಎಂಬ ಹೇಳಿಕೆ ನೀಡಿದ್ದು ತೀವ್ರ ಖಂಡನೀಯ. ಅವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಮಂಗಳವಾರ ಬಸವ ಪರ ಸಂಘಟನೆಗಳ ಒಕ್ಕೂಟದಿಂದ ತಹಸೀಲ್ದಾರ್ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.ಲಿಂಗಾಯತ ಧರ್ಮಗುರು ಬಸವಣ್ಣನವರ ಬಗ್ಗೆ ಅವಹೇಳನಕಾರಿಯಾಗಿ ಲಿಂಗಾಯತರ ಧಾರ್ಮಿಕ ನಂಬಿಕೆಗೆ ತೀವ್ರ ಧಕ್ಕೆ ತಂದ ರವಿ ಹಂಜ್ ವಿರುದ್ಧ ತಕ್ಷಣವೇ ಎಫ್.ಐ.ಆರ್. ದಾಖಲಿಸಿ ಕಾನೂನು ಕ್ರಮ ಜರುಗಿಸಬೇಕು. ಬಸವಣ್ಣನವರು ತಮ್ಮ ವಚನದಲ್ಲಿ ಕಳಬೇಡ, ಕೊಲಬೇಡ ಎಂದು ಬೋಧಿಸಿ ಈ ಜಗಕೆ ಮಾದರಿಯಾಗಿದ್ದಾರೆ. ಅದರಂತೆ ಇತಿಹಾಸಕಾರ ಡಾ. ಎಂ.ಎಂ.ಕಲಬುರ್ಗಿ, ಡಾ. ಫ.ಗು.ಹಳಕಟ್ಟಿ ಸೇರಿ ಬಹಳ ಸಂಶೋಧಕರು ಪ್ರಾಮಾಣಿಕ ಮಹಾಮಂತ್ರಿ ಎಂದು ಸ್ಪಷ್ಟನೆ ನೀಡಿದ್ದಾರೆ. ಇಂತಹ ಮಹನೀಯರನ್ನು ರವಿ ಹಂಜ್ ಸಂದರ್ಶನದಲ್ಲಿ ಕಳ್ಳ, ಕೊಲೆಗಾರ, ಬಿಜ್ಜಳನ ಖಜಾನೆ ಲೋಟಿಕೋರ ಎಂದು ಹೇಳಿದ್ದಾರೆ.
ಈ ಮೂಲಕ ಕೋಟ್ಯಾಂತರ ಲಿಂಗಾಯತರ, ಬಸವಾಭಿಮಾನಿಗಳ, ಕನ್ನಡಿಗರ ಧಾರ್ಮಿಕ ಭಾವನೆಗೆ ಧಕ್ಕೆಯನ್ನು ಉಂಟು ಮಾಡಿದ್ದಾರೆ. ಇದು ಅತ್ಯಂತ ಖಂಡನೀಯ. ರವಿ ಹಂಜ್ ವಿರುದ್ಧ ತನಿಖೆ ನಡೆಸಿ ಅವರ ಹೇಳಿಕೆಗೆ ಯಾವ ವಚನ ಆಧಾರ ಎಂದು ಬಹಿರಂಗಪಡಿಸುವಂತೆ ಮತ್ತು ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಮನವಿಯಲ್ಲಿ ಒತ್ತಾಯಿಸಲಾಗಿದೆ.ಬಸವಪರ ಸಂಘಟನೆಗಳ ಒಕ್ಕೂಟದ ಪ್ರಮುಖರಾದ ಕೊಟ್ರೇಶ ಅಂಗಡಿ, ಸಿ.ಕೆ. ಗಣಪ್ಪನವರ, ಡಾ. ಅನ್ನದಾನಿ ಮೇಟಿ, ಪವನ್ ಚೋಪ್ರಾ, ಪಾಲಾಕ್ಷಿ ಗಣದಿನ್ನಿ, ಎಚ್.ಡಿ. ಪೂಜಾರ, ಎ.ಕೆ. ಮುಲ್ಲಾನವರ, ನಬಿಸಾಬ ಕೆಲೂರ, ಬಸವರಾಜ ನವಲಗುಂದ, ಶರಣಪ್ಪ ಮುದಿಯಜ್ಜನವರ, ಶರಾವತಿ ಕಲಾಲ ಮಾತನಾಡಿದರು.ಈ ಸಂದರ್ಭ ಆನಂದಗೌಡ ಪಾಟೀಲ, ಈಶಣ್ಣ ಬೆಟಗೇರಿ, ಬಸಯ್ಯ ಗಿಂಡಿಮಠ, ಎಸ್.ಎಸ್. ಗಡ್ಡದ, ಶಿವಯೋಗಿ ಕೊಪ್ಪಳ, ಮುತ್ತಣ್ಣ ಹಾಳಕೇರಿ, ಎಚ್.ವಿರೂಪಾಕ್ಷಗೌಡ್ರ, ಮಂಜುನಾಥ ಮುಂಡವಾಡ, ಶರಣಪ್ಪ ಕುಬಸದ, ಸದಾಶಿವಯ್ಯ ಕಬ್ಬೂರಮಠ, ಸುರೇಶ ನಾಯಕ, ರಮೇಶ ಹುಳಕಣ್ಣವರ, ಅಡಿವೆಪ್ಪ ಚಲವಾದಿ, ಡಾ.ಬಿ.ಎಸ್. ಮೇಟಿ, ರಜಾಸಾಬ್ಬ ಬೆಟಗೇರಿ, ರೆಹೆಮಾನಸಾಬ್ ಮಲ್ಲನಕೇರಿ, ಅಂದಪ್ಪ ಉಳ್ಳಾಗಡ್ಡಿ, ಯಲ್ಲಪ್ಪ ಕುಕನೂರ, ಬಸವರಾಜ ದೇಸಾಯಿ, ಡಿ.ಎಂ. ಕಾತರಕಿ, ದುದ್ದುಪೀರ ಹಣಗಿ, ಅಶೋಕ ಅಣ್ಣೀಗೇರಿ, ಶಶಿಕಲಾ ಹಳ್ಳಿಕೇರಿ, ಶೃತಿ ಎಂ.ಎಸ್. ಈಶ್ವರಿ ಹಂಬಾಡಿಕರ್ ಸೇರಿದಂತೆ ಅನೇಕರಿದ್ದರು.