ಸುಹಾಸ್‌ ಶೆಟ್ಟಿ ಹತ್ಯೆ ಖಂಡಿಸಿ ಬ್ಯಾಡಗಿಯಲ್ಲಿ ಬಿಜೆಪಿ ಪ್ರತಿಭಟನೆ

KannadaprabhaNewsNetwork |  
Published : May 07, 2025, 12:48 AM IST
ಮ | Kannada Prabha

ಸಾರಾಂಶ

ರಾಜ್ಯ ಸರ್ಕಾರ ಮಾತ್ರ ತುಷ್ಟೀಕರಣಕ್ಕೆ ಮುಂದಾಗಿ ಹಿಂದೂಗಳ ಹತ್ಯೆಗೆ ಪರೋಕ್ಷವಾಗಿ ಬೆಂಬಲ ನೀಡುತ್ತಿದೆ ಎಂದು ಮಾಜಿ ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ಆರೋಪಿಸಿದರು.

ಬ್ಯಾಡಗಿ: ಹಿಂದೂ ಕಾರ್ಯಕರ್ತ ಸುಹಾಸ್‌ ಶೆಟ್ಟಿ ಹತ್ಯೆ ಖಂಡಿಸಿ ಬಿಜೆಪಿ ತಾಲೂಕು ಘಟಕದ ಕಾರ್ಯಕರ್ತರು ಪಟ್ಟಣದಲ್ಲಿ ಮಂಗಳವಾರ ಮೌನ ಪ್ರತಿಭಟನೆ ನಡೆಸಿ ಬಳಿಕ ಮೊಂಬತ್ತಿ ಬೆಳಗಿ ಶ್ರದ್ಧಾಂಜಲಿ ಸಲ್ಲಿಸಿದರು.

ಪಟ್ಟಣದ ಹಳೇ ಪುರಸಭೆ ಎದುರು ಜಮಾಯಿಸಿದ ಬಿಜೆಪಿ ಮುಖಂಡರು ಹಾಗೂ ನೂರಾರು ಕಾರ್ಯಕರ್ತರು ಮೌನಾಚರಣೆ ಹಾಗೂ ಮೊಂಬತ್ತಿ ಬೆಳಗುವ ಮೂಲಕ ಹಿಂದೂ ಕಾರ‍್ಯಕರ್ತ ಸುಹಾಸ್ ಶೆಟ್ಟಿಗೆ ಶ್ರದ್ಧಾಂಜಲಿ ಅರ್ಪಿಸಿದರು.

ಈ ವೇಳೆ ಮಾತನಾಡಿದ ಮಾಜಿ ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ, ರಾಜ್ಯದಲ್ಲಿ ಜಿಹಾದಿ ಮನಸ್ಥಿತಿಗಳು ಹೆಚ್ಚಾಗುತ್ತಿದೆ. ಇದರಿಂದ ಹಿಂದೂ ಕಾರ್ಯಕರ್ತರ ಹತ್ಯೆಗಳು ನಿರಂತರವಾಗಿ ನಡೆಯುತ್ತಿವೆ. ಇದಕ್ಕೆಲ್ಲ ಕಡಿವಾಣ ಹಾಕಬೇಕಿದ್ದ ಸರ್ಕಾರ ಮಾತ್ರ ತುಷ್ಟೀಕರಣಕ್ಕೆ ಮುಂದಾಗಿ ಹಿಂದೂಗಳ ಹತ್ಯೆಗೆ ಪರೋಕ್ಷವಾಗಿ ಬೆಂಬಲ ನೀಡುತ್ತಿದೆ ಎಂದು ಆರೋಪಿಸಿದರು.

ಜಿಲ್ಲಾ ಬಿಜೆಪಿ ಘಟಕದ ಉಪಾಧ್ಯಕ್ಷ ಬಸವರಾಜ ಛತ್ರದ ಮಾತನಾಡಿ, ಹಿಂದೂಗಳಿಗೆ ಭಾರತದಲ್ಲಿಯೇ ಸುರಕ್ಷತೆ ಇಲ್ಲದಂತಾಗಿದೆ. ದೇಶದ ಒಳಗೂ ಹಾಗೂ ಹೊರಗೆ ಹಿಂದೂ ಜನರು ಎಲ್ಲರ ಟಾರ್ಗೆಟ್ ಅನ್ನುವಂತಾಗಿದೆ. ಇದಕ್ಕೆ ಪಹಲ್ಗಾಂ ದಾಳಿ ಹಾಗೂ ರಾಜ್ಯದಲ್ಲಿ ಕಳೆದ ಕೆಲ ವರ್ಷಗಳಿಂದ ಹಿಂದೂಗಳ ಹತ್ಯೆಗಳೇ ಸಾಕ್ಷಿಗಳಾಗಿವೆ. ಜಿಹಾದಿ ಮನಸ್ಥಿತಿಯ ಕೆಲ ಮತಾಂಧರು ಹಿಂದೂ ಕಾರ್ಯಕರ್ತರ ಹತ್ಯೆ ಮಾಡುತ್ತಿದ್ದಾರೆ ಎಂದು ದೂರಿದರು.

ಬಿಜೆಪಿ ತಾಲೂಕು ಘಟಕದ ಉಪಾಧ್ಯಕ್ಷ ನಿಂಗಪ್ಪ ಬಟ್ಟಲಕಟ್ಟಿ ಮಾತನಾಡಿ, ರಾಜ್ಯದಲ್ಲಿ ಪ್ರತಿದಿನ ಒಂದಿಲ್ಲೊಂದು ಅಪರಾಧ ಕೃತ್ಯಗಳು ಅದರಲ್ಲೂ ಹಿಂದೂ ಕಾರ್ಯಕರ್ತರು ಹತ್ಯೆಗಳು ನಡೆಯುತ್ತಿವೆ. ಬೆಂಗಳೂರು, ಶಿವಮೊಗ್ಗ, ಮಂಗಳೂರು, ದಾವಣಗೆರೆ ಸೇರಿದಂತೆ ಹಾಡಹಗಲೇ ಮಚ್ಚು, ಲಾಂಗು ಹಿಡಿದು ಅಪರಾಧಿಗಳು ರಾಜಾರೋಷವಾಗಿ ಹಗಲಿನಲ್ಲೇ ಹತ್ಯೆ ಮಾಡುತ್ತಿದ್ದಾರೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆಗೆ ಹದಗೆಡಲು ಕಾಂಗ್ರೆಸ್ ಸರ್ಕಾರವೇ ಕಾರಣವೆಂದು ಆರೋಪಿಸಿದರು.

ಈ ವೇಳೆ ಪುರಸಭೆ ಸದಸ್ಯರಾದ ಕಲಾವತಿ ಬಡಿಗೇರ, ಕವಿತಾ ಸೊಪ್ಪಿನಮಠ, ಸರೋಜಾ ಉಳ್ಳಾಗಡ್ಡಿ, ಗಾಯತ್ರಿ ರಾಯ್ಕರ, ಫಕ್ಕೀರಮ್ಮ ಛಲವಾದಿ, ವಿನಯ್ ಹಿರೇಮಠ, ಬಿಜೆಪಿ ಮುಖಂಡರಾದ ಮುರಿಗೆಪ್ಪ ಶೆಟ್ಟರ, ಸುರೇಶ ಉದ್ಯೋಗಣ್ಣವರ, ಬಸವರಾಜ ಹಾವನೂರ, ನಂದೀಶ ವೀರನಗೌಡ್ರ, ವಿನಾಯಕ ಕಂಬಳಿ, ಜ್ಯೋತಿ ಕುದರಿಹಾಳ, ಸಿದ್ಧಲಿಂಗಪ್ಪ ಪಟ್ಟಣಶೆಟ್ಟಿ, ಪ್ರಶಾಂತ ಯಾದವಾಡ, ಜಿತೇಂದ್ರ ಸುಣಗಾರ ಸೇರಿದಂತೆ ಬಿಜೆಪಿ ಹಲವು ಮುಖಂಡರು ಉಪಸ್ಥಿತರಿದ್ದರು.11ರಿಂದ ಷಷ್ಠಿ ವರ್ಧಂತಿ ಉತ್ಸವ, ಕುಂಭಮೇಳ

ರಾಣಿಬೆನ್ನೂರು: ತಾಲೂಕಿನ ಕೊಡಿಯಾಲ ಗ್ರಾಮದ ನಾಗಬನ ಮತ್ತು ಮೂಲದುರ್ಗಾ ಪರಮೇಶ್ವರಿ ದೇವಸ್ಥಾನದಲ್ಲಿ ಮೇ 11 ಮತ್ತು 12ರಂದು ಷಷ್ಠಿ ವರ್ಧಂತಿ ಉತ್ಸವ, ಕುಂಭಮೇಳ ಜರುಗಲಿದೆ.ಮೇ 11ರಂದು ಸಂಜೆ 4ಕ್ಕೆ ಗ್ರಾಮದ ದುಂಡಿ ಬಸವೇಶ್ವರ ದೇವಸ್ಥಾನದ ಬಳಿಯಿಂದ ಹೊರಡಲಿರುವ ದುರ್ಗಾದೇವಿಯ ಅಂಬಾರಿ ಉತ್ಸವ ಹಾಗೂ ಸುಮಂಗಲಿಯರ ಪೂರ್ಣ ಕುಂಭಮೇಳ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಮೂಲದುರ್ಗಾದೇವಿ ದೇವಸ್ಥಾನ ತಲುಪಲಿದೆ. ಮೇ 12ರಂದು ಬೆಳಗ್ಗೆ 8.30ರಿಂದ ನಿರ್ವಿಘ್ನ ಯಾಗ, ಪಂಚವಿಂಶತಿ ಕಲಶಾರಾಧನೆ, ಪ್ರಧಾನ ಯಾಗ, ಕುಂಭಾಭಿಷೇಕ, ದುರ್ಗಾ ಸಹಸ್ರನಾಮ, ಕದಳಿ ಯಾಗ ಜರುಗುವುದು. ಸಂಜೆ 5ರಿಂದ ನಾಗದೇವರಿಗೆ ನಾಗ ತನು ತರ್ಪಣ, ಪ್ರಸನ್ನ ಪೂಜೆ, ಪ್ರಸಾದ ವಿತರಣೆ ಜರುಗಲಿದೆ ಎಂದು ಪ್ರಕಟಣೆ ತಿಳಿಸಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅಧಿವೇಶನ ಮುಗಿದ ಬಳಿಕ ಡಿಕೆಶಿಗೆ ಶುಭಸುದ್ದಿ : ಇಕ್ಬಾಲ್
ಬೆಳಗಾವೀಲೂ ‘ಕೈ’ ಡಿನ್ನರ್‌ ಸಭೆಗೆ ಬಿವೈವಿ ಕಿಡಿ