ಕನ್ನಡಪ್ರಭ ವಾರ್ತೆ ಹೊನ್ನಾಳಿ
ತಾಲೂಕು ಬಿಜೆಪಿ ವತಿಯಂದ ಮಂಗಳವಾರ ಹೊನ್ನಾಳಿ ಮತ್ತು ನ್ಯಾಮತಿ ಅವಳಿ ತಾಲೂಕುಗಳಲ್ಲಿ ಸರ್ಕಾರದ ವೈಫಲ್ಯ ಖಂಡಿಸಿ ಪ್ರತಿಭಟನೆ ಹಾಗೂ ಬಂದ್ ಕಾರ್ಯಕ್ರಮ ನಡೆಸಿದ ಸಂದರ್ಭದಲ್ಲಿ ಹೊನ್ನಾಳಿಯಲ್ಲಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹಾಗೂ ಬಯಲು ಸೀಮೆ ಪ್ರದೇಶಾಭಿವೃದ್ದಿ ಮಂಡಳಿ ಅಧ್ಯಕ್ಷ ಎಚ್.ಬಿ.ಮಂಜಪ್ಪ ಅವರು ಬಂದ್‌ನಿಂದ ಒಂದು ಊರಿನಿಂದ ಇನ್ನೊಂದು ಊರಿಗೆ ಹೋಗುವ ಪ್ರಯಾಣಿಕರು, ಮಹಿಳೆಯರು, ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತದೆ ಎಂದು ಹೇಳಿ ಬಸ್‌ಗಳನ್ನು ಹೋಗಲು ಬಿಡುವಂತೆ ತಿಳಿಸಿ ಹೊಟೇಲ್, ಅಂಗಡಿಗಳನ್ನು ತೆರೆಯುವಂತೆ ಹೇಳಿದಾಗ ಮುಖಂಡ ಎಂ.ಎಸ್. ಪಾಲಾಕ್ಷಪ್ಪ ಹಾಗೂ ಎಚ್.ಬಿ.ಮಂಜಪ್ಪ ನಡುವೆ ತೀವ್ರ ವಾಗ್ದಾಳಿ, ತಳ್ಳಾಟ ನಡೆದು, ಪಾಲಾಕ್ಷಪ್ಪ ಅವರು ತನ್ನ ಮೇಲೆ ಎಚ್.ಬಿ.ಮಂಜಪ್ಪ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಿದರು. ಈ ಕುರಿತು ಶಾಸಕ ಡಿ.ಜಿ.ಶಾಂತನಗೌಡ ಅವರ ನೇತೃತ್ವದಲ್ಲಿ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು.
ಬಿಜಿಪಿಯವರು ಕೇವಲ ಪ್ರಚಾರಕ್ಕಾಗಿ ಈ ರೀತಿ ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತಿದ್ದು, ಕೇವಲ ಹೊನ್ನಾಳಿ, ನ್ಯಾಮತಿ ಮಾತ್ರವಲ್ಲ ಇಡೀ ರಾಜ್ಯದಲ್ಲಿ ರಸ್ತೆಗಳು ಗುಂಡಿಗಳಿಂದ ಕೊಡಿವೆ, ಶಿವಮೊಗ್ಗ ಮುಖ್ಯ ರಸ್ತೆಗೆ 40 ಕೋಟಿ ರು. ಹಾಕಲಾಗಿದೆ. ಇದೀಗ ಮಳೆಗಾಳ ಮುಗಿದಿದ್ದು, ಈಗ ತಾತ್ಕಲಿಕವಾಗಿ ರಸ್ತೆ ಗುಂಡಿಗಳನ್ನು ಮುಚ್ಚಲು ಕ್ರಮಕೈಗೊಳ್ಳಲಾಗಿದೆ. ಇದಕ್ಕೆ 5 ಕೋಟಿ ರು. ಹಣ ಬಿಡುಗಡೆ ಕೂಡ ಆಗಿದೆ ಎಂದು ಸ್ಪಷ್ಟಪಡಿಸಿದರು.ಇದೇ ರೇಣುಕಾಚಾರ್ಯ ಅವರ ಅಧಿಕಾರವಾಧಿಯಲ್ಲಿ ಕೂಲಂಬಿ, ಕರ್ಕಿ ರಸ್ತೆ, ಸಾಸ್ವೇಹಳ್ಳಿ ಯಿಂದ ನಲ್ಲೂರು ರಸ್ತೆಗಳು ಕಳಪೆ ಕಾಮಗಾರಿಯ ಫಲವಾಗಿ ಇಂದಿಗೂ ಗುಂಡಿಗಳಿಂದ ತುಂಬಿವೆ ಇದನ್ನು ಕೇಳುವವರು ಯಾರು ಎಂದು ಶಾಸಕ ಶಾಂತನಗೌಡ ಪ್ರಶ್ನೆ ಮಾಡಿದರು.
ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹಾಗೂ ಬಯಲು ಸೀಮೆ ಪ್ರದೇಶಾಭಿವೃದ್ದಿ ಮಂಡಳಿ ಆಧ್ಯಕ್ಷ ಎಚ್.ಬಿ.ಮಂಜಪ್ಪ. ಬೆಜಿಪಿಯುವರು ಬೆಳಿಗ್ಗೆ 6 ರಿದ ಸಂಜೆ 6ರವಗೆ ಬಂದ್ ಮಾಡಿ ಬೇರೆ ಬೇರೆ ಊರುಗಳಿಗೆ ತೆರಳುವ ಬಸ್ ಹಾಗೂ ಇತರೆ ವಾಹಗಳನ್ನು ತಡೆದು ನಿಲ್ಲಿಸಿದರೆ ಅನೇಕ ತುರ್ತು ಕೆಲಸಗಳಿಗೆ ಹೋಗುತ್ತಿರುವ ಜನರಿಗೆ, ಮಹಿಳೆಯರ ಪಾಡೇನು. ಅವರ ಪರಿಸ್ಥಿತಿ ಏನಾಗಬೇಕು ಎಂದರು.