ಕನ್ನಡಪ್ರಭ ವಾರ್ತೆ ದಾವಣಗೆರೆ
ನಗರದ ಶ್ರೀ ಜಯದೇವ ವೃತ್ತದಲ್ಲಿ ಸಿಪಿಐ ರಾಜ್ಯ ಮಂಡಳಿ ಕರೆಯ ಮೇರೆಗೆ ಪಕ್ಷದ ರಾಜ್ಯ ಸಮಿತಿ ಕರೆಯ ಮೇರೆಗೆ ಪ್ರತಿಭಟನಾ ದಿನವಾಗಿ ಆಚರಿಸಿದ ಮುಖಂಡರು, ಕಾರ್ಯಕರ್ತರು ಸಾಮಾಜಿಕ ನ್ಯಾಯ ಮತ್ತು ಸಮಾನತೆಗೆ ಒತ್ತಾಯಿಸಿ, ದಲಿತರ, ಆದಿವಾಸಿ, ಅಲ್ಪಸಂಖ್ಯಾತರು, ಮಹಿಳೆಯರ ಮೇಲಿನ ದೌರ್ಜನ್ಯ ಖಂಡಿಸಿ ಘೋಷಣೆ ಕೂಗಿದರು.
ಇದೇ ವೇಳೆ ಮಾತನಾಡಿದ ಸಿಪಿಐ ಜಿಲ್ಲಾ ಕಾರ್ಯದರ್ಶಿ ಆವರಗೆರೆ ಚಂದ್ರು, ದಲಿತ, ಆದಿವಾಸಿ, ಅಲ್ಪಸಂಖ್ಯಾತ ಮತ್ತು ಮಹಿಳೆಯರ ಮೇಲಿನ ದೌರ್ಜನ್ಯ ಖಂಡಸಿ, ಸಿಪಿಐ ರಾಜ್ಯವ್ಯಾಪಿ ಕರೆಯ ಮೇರೆಗೆ ಹೋರಾಟ ಹಮ್ಮಿಕೊಳ್ಳಲಾಗಿದೆ. ದೇಶದ ಇತಿಹಾಸದಲ್ಲಿ ಶತ ಶತಮಾನಗಳಿಂದಲೂ ದಬ್ಬಾಳಿಕೆ, ಅಸ್ಪೃಶ್ಯತೆ, ಶೋಷಣೆಗೆ ಬಲಿಯಾದ ದಲಿತ, ಆದಿವಾಸಿ, ಅಲ್ಪಸಂಖ್ಯಾತ ಸಮುದಾಯ, ಮಹಿಳೆಯರು ಇಂದಿಗೂ ದೌರ್ಜನ್ಯಗಳಿಂದ ಮುಕ್ತರಾಗಿಲ್ಲ ಎಂದರು.ಇಂದಿಗೂ ದೌರ್ಜನ್ಯ, ಶೋಷಣೆಗಳು ಇಂದಿಗೂ ನಿರಂತರ ಮುಂದುವರಿಯುತ್ತಿವೆ. ಭಾರತದಲ್ಲಿ ಸನಾತನ ಸಾಮಾಜಿಕ ವ್ಯವಸ್ಥೆಯು ಮನುಸ್ಮೃತಿಯ ಆದಾರದಲ್ಲಿ ವರ್ಣಾಶ್ರಮ ಪದ್ಧತಿಯನ್ನು ಸ್ಥಿರಗೊಳಿಸಿ, ಮನುಷ್ಯರನ್ನು ಶ್ರೇಷ್ಟ ಮತ್ತು ಕನಿಷ್ಟ ಎಂಬುದಾಗಿ ವಿಭಜಿಸಿದೆ. ಆಳುವ ಸರ್ಕಾರಗಳು ಪರೋಕ್ಷವಾಗಿ ಇಂತಹ ಘಟನೆಗಳಿಗೆ ಬೆಂಬಲ ನೀಡುತ್ತಿವೆ. ಇಂತಹದ್ದನ್ನು ಮೊದಲು ಸರ್ಕಾರಗಳು ಕೈಬಿಟ್ಟು, ಸಂವಿಧಾನಬದ್ಧವಾಗಿ ಎಲ್ಲರಿಗೂ ನ್ಯಾಯ ಒದಗಿಸಬೇಕು ಎಂದು ಒತ್ತಾಯಿಸಿದರು.
ದೇಶದ ಇತಿಹಾಸದಲ್ಲಿ ಶತಶತಮಾನಗಳಿಂದಲೂ ದಬ್ಬಾಳಿಕೆ, ಅಸ್ಪೃಶ್ಯತೆ ಮತ್ತು ಶೋಷಣೆಗಳಿಗೆ ಬಲಿಯಾದ ದಲಿತ, ಆದಿವಾಸಿ ಮತ್ತು ಮಹಿಳಾ ಸಮುದಾಯಗಳು ಇಂದಿಗೂ ಈ ದೌರ್ಜನ್ಯಗಳಿಂದ ಬಿಡುಗಡೆಯಾಗಿಲ್ಲ. ಬದಲಿಗೆ ಇಂದಿಗೂ ಕೂಡ ಅವುಗಳು ಹವ್ಯಾಹತವಾಗಿ ಮುಂದುವರಿಯುತ್ತಿವೆ, ಭಾರತದಲ್ಲಿ ಸನಾತನ ಸಾಮಾಜಿಕ ವ್ಯವಸ್ಥೆಯು ಮನುಸ್ಮತಿಯ ಆಧಾರದಲ್ಲಿ ಅಂದರೆ, ವರ್ಣಾಶ್ರಮ ಪದ್ಧತಿಯನ್ನು ಸ್ಥಿರಗೊಳಿಸಿ ಮನುಷ್ಯರನ್ನು ಶ್ರೇಷ್ಠ ಮತ್ತು ಕನಿಷ್ಠ ಎಂದು ವಿಭಜಿಸಿದೆ ಎಂದು ಆರೋಪಿಸಿದರು.
ಸಿಪಿಐ ಮುಖಂಡರಾದ ಪಿ.ಷಣ್ಮುಖಸ್ವಾಮಿ, ಐರಣಿ ಚಂದ್ರು, ಕೆ.ಬಾನಪ್ಪ, ಸಿದ್ದಲಿಂಗೇಶ, ಶೇಖರ ನಾಯಕ, ನರೇಗಾ ರಂಗನಾಥ, ಕೆರೇನಹಳ್ಳಿ ರಾಜು, ಬೆಳಲಗೆರೆ ರುದ್ರಮ್ಮ, ಎ.ತಿಪ್ಪೇಶ, ಜಿ.ಯಲ್ಲಪ್ಪ, ಸರೋಜಾ, ಕೆ.ಜಿ.ಶಿವಮೂರ್ತಿ, ಚಿನ್ನಪ್ಪ, ರಮೇಶ ಸಿ.ದಾಸರ್, ಹರ್ಷ, ಗದಿಗೇಶ ಪಾಳೇದ, ಎಚ್.ಎಸ್.ಚಂದ್ರು, ಜಯಪ್ಪ, ಮಹೇಶ, ನಾಗಪ್ಪ ಇತರರು ಇದ್ದರು.