ರಾಜ್ಯಪಾಲರ ಅವಹೇಳನ ಮಾಡಿದ ಕಾಂಗ್ರೆಸ್‌ ವಿರುದ್ಧ ಮಂಗಳೂರಲ್ಲಿ ಬಿಜೆಪಿ ರಸ್ತೆತಡೆ ಪ್ರತಿಭಟನೆ

KannadaprabhaNewsNetwork |  
Published : Aug 29, 2024, 12:53 AM IST
ಮಂಗಳೂರಿನ ಪಿವಿಎಸ್‌ನಲ್ಲಿ ಬಿಜೆಪಿ ರಸ್ತೆತಡೆ ಪ್ರತಿಭಟನೆ  | Kannada Prabha

ಸಾರಾಂಶ

ಪಿವಿಎಸ್‌ನಲ್ಲಿ ರಸ್ತೆ ತಡೆ ನಡೆಸಿದಾಗ ಸಂಸದರು, ಶಾಸಕರು, ಬಿಜೆಪಿ ಮುಖಂಡರ ಸಹಿತ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿ ಬಳಿಕ ಬಿಡುಗಡೆಗೊಳಿಸಿದರು.

ಕನ್ನಡಪ್ರಭ ವಾರ್ತೆ ಮಂಗಳೂರು

ದೇಶದ್ರೋಹಿ ಹೇಳಿಕೆ ನೀಡಿ ಗೌರವಾನ್ವಿತ ರಾಜ್ಯಪಾಲರನ್ನು ಅವಹೇಳನ ಮಾಡಿದ ಕಾಂಗ್ರೆಸಿಗರ ವಿರುದ್ಧ ದೂರು ನೀಡಿದರೂ ಯಾವುದೇ ಕ್ರಮಕೈಗೊಳ್ಳದ ವ್ಯವಸ್ಥೆಯ ಲೋಪವನ್ನು ವಿರೋಧಿಸಿ ಬಿಜೆಪಿ ಮಂಗಳೂರು ನಗರ ದಕ್ಷಿಣ ಮಂಡಲದ ಯುವ ಮೋರ್ಚಾ ನೇತೃತ್ವದಲ್ಲಿ ಬುಧವಾರ ಇಲ್ಲಿನ ಪಿವಿಎಸ್‌ ವೃತ್ತ ಬಳಿ ರಸ್ತೆ ತಡೆ ಸಹಿತ ಬೃಹತ್ ಪ್ರತಿಭಟನೆ ನಡೆಯಿತು.

ಈ ಸಂದರ್ಭ ಮಾತನಾಡಿದ ದ.ಕ. ಸಂಸದ ಕ್ಯಾಪ್ಟನ್‌ ಬ್ರಿಜೇಶ್‌ ಚೌಟ, ರಾಜ್ಯ ಸರ್ಕಾರದ ಆಡಳಿತ ಎಷ್ಟು ಹದಗೆಟ್ಟಿದೆ ಎಂದರೆ, ಕಳ್ಳರು ಪೊಲೀಸ್‌ಗೆ ಬೈಯ್ಯುವ ಪರಿಸ್ಥಿತಿ ನಿರ್ಮಾಣವಾಗಿದೆ. ರಾಜ್ಯ ಕಾಂಗ್ರೆಸ್‌ಗೆ ಬಾಂಗ್ಲಾ, ಪಾಕಿಸ್ತಾನ ಮಾದರಿ ಬಗ್ಗೆಯೇ ವಿಶೇಷ ಪ್ರೀತಿ ಎನ್ನುವಂತಾಗಿದೆ. ರಾಜ್ಯಪಾಲರ ಮೇಲೆ ಅಗೌರವ ತೋರುವ ಕಾಂಗ್ರೆಸ್‌ ವರ್ತನೆಯನ್ನು ಸಹಿಸಲು ಸಾಧ್ಯವೇ ಇಲ್ಲ ಎಂದರು. ಸಂವಿಧಾನ ವಿರುದ್ಧ ವರ್ತಿಸುತ್ತಿರುವ ವಿಧಾನ ಪರಿಷತ್‌ ಸದಸ್ಯ ಐವನ್‌ ಡಿಸೋಜಾ ಮೇಲೆ ಸ್ವಯಂ ಆಗಿ ಪೊಲೀಸರು ಕೇಸು ದಾಖಲಿಸಬೇಕು. ಅವರ ವಿರುದ್ಧ ಇನ್ನೂ ಕೇಸು ದಾಖಲಿಸುವ ಧೈರ್ಯವನ್ನು ಪೊಲೀಸರು ತೋರಿಸುತ್ತಿಲ್ಲ. ಪೊಲೀಸರು ಕೇಸು ದಾಖಲಿಸುವ ವರೆಗೆ ವಿವಿಧ ಹಂತಗಳಲ್ಲಿ ಬಿಜೆಪಿ ಹೋರಾಟ ನಡೆಸಲಿದೆ ಎಂದರು.

ಕೋರ್ಟ್‌ನಲ್ಲೂ ಕೇಸ್‌: ದಕ್ಷಿಣ ಶಾಸಕ ವೇದವ್ಯಾಸ್ ಕಾಮತ್‌ ಮಾತನಾಡಿ, ರಾಜ್ಯ ಸರ್ಕಾರ ನಮ್ಮ ಪ್ರತಿಭಟನೆಯನ್ನು ಹತ್ತಿಕ್ಕಲು ಪೋಲಿಸ್ ಇಲಾಖೆಯನ್ನು ಬಳಸಿಕೊಂಡು ಬೆದರಿಸುವ ಪ್ರಯತ್ನ ಮಾಡುತ್ತಿದೆ. ಆದರೆ ಇಂತಹ ಬೆದರಿಕೆಗಳೆಲ್ಲ ಜಗ್ಗುವ ಮಾತೇ ಇಲ್ಲ. ಐವನ್ ಡಿಸೋಜಾರಂತಹ ದೇಶ ವಿರೋಧಿ ಹೇಳಿಕೆ ನೀಡಿರುವ ಕಾಂಗ್ರೆಸ್ ನಾಯಕರನ್ನು ನ್ಯಾಯಾಲಯದ ಕಟಕಟೆಗೆ ತಂದೇ ತರುತ್ತೇವೆ. ಹಾಗಾಗಿ ಪೊಲೀಸರೇ, ನೀವು ನ್ಯಾಯದ ಪರವಾಗಿ ಕಾರ್ಯನಿರ್ವಹಿಸಿ. ಇಂತಹ ದುಷ್ಟ ಹಾಗೂ ಭ್ರಷ್ಟ ಸರಕಾರವನ್ನು ನಂಬಿ ನಿಮ್ಮ ಕರ್ತವ್ಯಕ್ಕೆ ಮೋಸ ಮಾಡಬೇಡಿ ಎಂದು ಎಚ್ಚರಿಸಿದರು. ನಂತರ ಪಿವಿಎಸ್‌ನಲ್ಲಿ ರಸ್ತೆ ತಡೆ ನಡೆಸಿದಾಗ ಸಂಸದರು, ಶಾಸಕರು, ಬಿಜೆಪಿ ಮುಖಂಡರ ಸಹಿತ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿ ಬಳಿಕ ಬಿಡುಗಡೆಗೊಳಿಸಿದರು.

ಪ್ರತಿಭಟನೆಯಲ್ಲಿ ಯುವ ಮೋರ್ಚಾ ಜಿಲ್ಲಾಧ್ಯಕ್ಷ ನಂದನ್ ಮಲ್ಯ, ಮಂಡಲದ ಅಧ್ಯಕ್ಷ ರಮೇಶ್ ಕಂಡೆಟ್ಟು, ಮಂಡಲದ ಯುವ ಮೋರ್ಚಾ ಅಧ್ಯಕ್ಷ ಅಶ್ವಿತ್ ಕೊಟ್ಟಾರಿ, ಮುಖಂಡರಾದ ರಾಜಗೋಪಾಲ ರೈ, ಪ್ರೇಮಾನಂದ ಶೆಟ್ಟಿ, ವಸಂತ ಪೂಜಾರಿ, ಪೂರ್ಣಿಮಾ ರಾವ್‌, ಮಂಜುಳಾ ರಾವ್‌, ಅರುಣ್‌ ಶೇಟ್‌, ಯತೀಶ್‌ ಆರ್ವಾರ್‌, ಸಂಜಯ ಪ್ರಭು

PREV

Recommended Stories

ರಾಜ್ಯದಲ್ಲಿ 5 - 6 ದಿನ ಮಳೆ ಇಳಿಮುಖ : 26ರಿಂದ ಮತ್ತೆ ಮಳೆ
ಎಮ್ಮೆ ಕೊಡಿಸುವುದಾಗಿ ಪ್ರೇಮ್‌ಗೆ ವಂಚನೆ : ₹4.75 ಲಕ್ಷ ಮೋಸ