ಬಿಜೆಪಿ ಕತೆ ಈಗಾಗಲೇ ಮುಗಿದುಹೋಗಿದೆ‌: ಸಚಿವ ಶರಣ ಪ್ರಕಾಶ್ ಪಾಟೀಲ್

KannadaprabhaNewsNetwork | Updated : Nov 12 2023, 01:01 AM IST

ಸಾರಾಂಶ

ಅಧಿಕಾರ ಸಿಕ್ಕಾಗ 40 ಪರ್ಸೆಂಟ್ ಸರ್ಕಾರ ಮಾಡಿದ್ರು, ಜನರ ಹಣ ಲೂಟಿ ಮಾಡಿದ್ರು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಬಿಜೆಪಿಯವರು ಯಾರನ್ನಾದರೂ ಅಧ್ಯಕ್ಷರನ್ನ ಮಾಡಿಕೊಳ್ಳಲಿ. ಬಿಜೆಪಿ ಕತೆ ಈಗಾಗಲೇ ಮುಗಿದುಹೋಗಿದೆ‌. ಅವರು ಮತ್ತೆ ಎಂದೂ ಗೆಲುವು ಸಾಧಿಸುವುದಿಲ್ಲ ಎಂದು ವೈದ್ಯಕೀಯ ಸಚಿವ ಶರಣ ಪ್ರಕಾಶ್ ಪಾಟೀಲ್ ಛೇಡಿಸಿದರು.

ಶಿವಮೊಗ್ಗದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಹಿಂದೆ ಬಿಜೆಪಿಯವರು ಕಾಂಗ್ರೆಸ್‌ ಶಾಸಕರನ್ನು ಖರೀದಿ ಮಾಡಿ ಸರ್ಕಾರ ಮಾಡಿದ್ದರು. ಕೇಂದ್ರ ಸರ್ಕಾರ ದೇಶದಲ್ಲಿ ಅದೇಷ್ಟೋ ಚುನಾಯಿತ ಸರ್ಕಾರ ಕೆಡವಿದೆ. ಜನ ಬಿಜೆಪಿಯನ್ನ ತಿರಸ್ಕಾರ ಮಾಡಿದ್ದಾರೆ. ಬಿಜೆಪಿಯವರಿಗೆ ತಕ್ಕ ಪಾಠ ಕಲಿಸಿದ್ದಾರೆ. ಅವರ ಕಥೆ ಮುಗಿದುಹೋಗಿದೆ. ಅವರು ಮತ್ತೆ ಗೆಲುವು ಪಡೆಯುವುದು ಕನಸಿನ ಮಾತು ಎಂದರು.

ಅಧಿಕಾರ ಸಿಕ್ಕಾಗ 40 ಪರ್ಸೆಂಟ್ ಸರ್ಕಾರ ಮಾಡಿದ್ರು, ಜನರ ಹಣ ಲೂಟಿ ಮಾಡಿದ್ರು. ಪರಿಣಾಮ ಜನ ಅವರಿಗೆ ಚುನಾವಣೆಯಲ್ಲಿ ಬಿಜೆಪಿಗೆ ತಕ್ಕ ಪಾಠ ಕಲಿಸಿದ್ದಾರೆ. ಬಿಜೆಪಿ ಪರ್ಸೆಂಟ್ ಸರ್ಕಾರ ಅಂತಾನೆ ಹೆಸರಾಗಿತ್ತು. ಇನ್ನು ಪಿಎಸ್ಐ ಹಗರಣ ಬಯಲು ಮಾಡಿದ್ದೇ ಸಚಿವ ಪ್ರಿಯಾಂಕ್‌ ಖರ್ಗೆ. ಪಿಎಸ್ಐ ಹಗರಣ ಆಗಿದ್ದೆ ಬಿಜೆಪಿ ಅವಧಿಯಲ್ಲಿ. ಕೆಇಎ ಅಕ್ರಮ ಸಂಬಂಧ ಈಗಾಗಲೇ ಆರೋಪಿಯನ್ನು ಬಂಧಿಸಲಾಗಿದೆ. ಆರೋಪಿ ಆರ್‌.ಡಿ. ಪಾಟೀಲ್‌ಗೆ ಸಚಿವ ಪ್ರಿಯಾಂಕಾ ಖರ್ಗೆ ಸಂಬಂಧ ಇದೆ ಎಂಬ ಬಿಜೆಪಿ ಆರೋಪ ಸುಳ್ಳು ಎಂದು ಪ್ರಶ್ನೆಯೊಂದಿಗೆ ಉತ್ತರಿಸಿದರು.

ಸಿಮ್ಸ್ ಆಸ್ಪತ್ರೆ ಹಾಗೂ ಕಾಮಗಾರಿ ಬಗ್ಗೆ ಪರಿಶೀಲನೆ ಮಾಡಿದ್ದೇವೆ. ಶಿವಮೊಗ್ಗದಲ್ಲಿ ಕಿದ್ವಾಯಿ ಬ್ರಾಂಚ್ ಆರಂಭಿಸಲು ಶಂಕುಸ್ಥಾಪನೆ ಆಗಿದೆ. 18 ತಿಂಗಳು ಕಾಲಾವಕಾಶ ಕೋರಿದ್ದಾರೆ. ಬೇಗ ಕಾರ್ಯನಿರ್ವಹಿಸಲಿದೆ. ಇಲ್ಲಿ ಹಲವಾರು ಸಮಸ್ಯೆಗಳು ಇರುವುದಾಗಿ ತಿಳಿದುಬಂದಿದೆ. ಸಿಬ್ಬಂದಿ ಕೊರತೆ ಇರೋದು ಗೊತ್ತಾಗಿದೆ. ಸಮಸ್ಯೆ ಬಗೆಹರಿಸಲು ಶೀಘ್ರದಲ್ಲೇ ಕ್ರಮ ಕೈಗಳುವುದಾಗಿ ಹೇಳಿದರು.

ಪ್ರತಿವರ್ಷ ಔಷಧಿಗಾಗಿ ₹20 ಕೋಟಿ ಖರ್ಚಾಗುತ್ತಿದೆ. ಯಾವುದೇ ಔಷಧಗಳ ಕೊರತೆ ಸದ್ಯಕ್ಕೆ ಇಲ್ಲ. ಸಿಮ್ಸ್ ನಲ್ಲಿ ವೈದ್ಯರ ಕೊರತೆ ಇಲ್ಲ, ಸಿಬ್ಬಂದಿ ಕೊರತೆ ಇದೆ. ಸೂಪರ್ ಸ್ಪೆಷಾಲಿಟಿ ವ್ಯವಸ್ಥೆ ಇಲ್ಲಿ ಇಲ್ಲ. ವ್ಯವಸ್ಥೆ ಆಗಬೇಕಿದೆ ಎಂದರು.

- - -

ಕೋಟ್‌ ಸರ್ಕಾರಿ ಆಸ್ಪತ್ರೆ ವೈದ್ಯರು ನಿಗದಿಪಡಿಸಿದ ವೇಳೆಯವರೆಗೂ ಕಾರ್ಯನಿರ್ವಹಿಸಬೇಕು. ಇಲ್ಲದಿದ್ದರೆ ಕೂಡಲೇ ಕ್ರಮ ಜರುಗಿಸಲಾಗುವುದು

- ಡಾ. ಶರಣ ಪ್ರಕಾಶ ಪಾಟೀಲ್‌, ಸಚಿವ

- - -

(-ಫೋಟೋ: ಶರಣ ಪ್ರಕಾಶ್ ಪಾಟೀಲ್, ಸಚಿವ)

Share this article