ಹರಿಹರದಲ್ಲಿ ಕಾಂಗ್ರೆಸ್‌ ವಿರುದ್ಧ ಬಿಜೆಪಿ ಉಗ್ರ ಪ್ರತಿಭಟನೆ

KannadaprabhaNewsNetwork |  
Published : Jul 24, 2026, 12:45 AM IST
23 HRR. 02 & 2 Aಹರಿಹರದ ಬಿಜೆಪಿ ಕಾರ್ಯಕರ್ತರು ಶಾಸಕ ಬಿ.ಪಿ ಹರೀಶ್ ಅವರ ಮೇಲೆ, ಕೋಳಿ ಮೊಟ್ಟೆಯಿಂದ ಹಲ್ಲೆ ನಡೆಸಿರುವ ಕಾಂಗ್ರೇಸ್ ಕಾರ್ಯಕರ್ತರ ವಿರುದ್ದ ಪ್ರತಿಭಟಿಸಿ ತಹಶೀಲ್ದಾರ ಮೂಲಕ  ರಾಜ್ಯಪಾಲರಿಗೆ ಮನವಿ ಪತ್ರ ಸಲ್ಲಿಸಿದರು.  | Kannada Prabha

ಸಾರಾಂಶ

ಬೆಂಗಳೂರಿನ ಕಾಂಗ್ರೆಸ್ ಕಚೇರಿಗೆ ಮುತ್ತಿಗೆ ಹಾಕುವ ಕಾರ್ಯಕ್ರಮದ ಸಂದರ್ಭದಲ್ಲಿ ಶಾಸಕ ಬಿ.ಪಿ.ಹರೀಶ್ ಅವರ ಮೇಲೆ, ಕೋಳಿಮೊಟ್ಟೆಗಳಿಂದ ಹಲ್ಲೆ ನಡೆಸಿರುವ ಕಾಂಗ್ರೆಸ್ ಕಾರ್ಯಕರ್ತರ ಮೇಲೆ ಸರ್ಕಾರ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ, ಇಲ್ಲಿನ ಬಿಜೆಪಿ ಕಾರ್ಯಕರ್ತರು ಗುರುವಾರ ಸುರಿಯುವ ಮಳೆಯಲ್ಲಿಯೇ ಪ್ರತಿಭಟಿಸಿದ್ದಾರೆ.

- ಶಾಸಕ ಬಿ.ಪಿ ಹರೀಶ್ ಮೇಲೆ ಕೋಳಿಮೊಟ್ಟೆ ಎಸೆತಕ್ಕೆ ಖಂಡನೆ । ಮನವಿ ಅರ್ಪಣೆ

- - -

ಕನ್ನಡಪ್ರಭ ವಾರ್ತೆ ಹರಿಹರ

ಬೆಂಗಳೂರಿನ ಕಾಂಗ್ರೆಸ್ ಕಚೇರಿಗೆ ಮುತ್ತಿಗೆ ಹಾಕುವ ಕಾರ್ಯಕ್ರಮದ ಸಂದರ್ಭದಲ್ಲಿ ಶಾಸಕ ಬಿ.ಪಿ.ಹರೀಶ್ ಅವರ ಮೇಲೆ, ಕೋಳಿಮೊಟ್ಟೆಗಳಿಂದ ಹಲ್ಲೆ ನಡೆಸಿರುವ ಕಾಂಗ್ರೆಸ್ ಕಾರ್ಯಕರ್ತರ ಮೇಲೆ ಸರ್ಕಾರ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ, ಇಲ್ಲಿನ ಬಿಜೆಪಿ ಕಾರ್ಯಕರ್ತರು ಗುರುವಾರ ಸುರಿಯುವ ಮಳೆಯಲ್ಲಿಯೇ ಪ್ರತಿಭಟಿಸಿದರು.

ರಾಜ್ಯ ಸರ್ಕಾರ ಹಾಗೂ ಹಲ್ಲೆ ನಡೆಸಿದ ಕಾಂಗ್ರೆಸ್‌ ಕಾರ್ಯಕರ್ತರ ವಿರುದ್ಧ ಧಿಕ್ಕಾರ ಕೂಗಿ, ಆಕ್ರೋಶ ವ್ಯಕ್ತಪಡಿಸಲಾಯಿತು. ಬಳಿಕ ತಹಸೀಲ್ದಾರ್ ಮೂಲಕ ರಾಜ್ಯಪಾಲರು, ರಾಷ್ಟ್ರಪತಿ ಹಾಗೂ ಪ್ರಧಾನಿಗೆ ಮನವಿ ಸಲ್ಲಿಸಲಾಯಿತು. ನಗರದ ಬಿಜೆಪಿ ಕಾರ್ಯಾಲಯದಿಂದ ಹೊರಟ ಪ್ರತಿಭಟನಾ ಮೆರವಣಿಗೆಯಲ್ಲಿ ಕಾರ್ಯಕರ್ತರು, ರಾಜ್ಯ ಸರ್ಕಾರ ವಿರುದ್ಧ ಧಿಕ್ಕಾರ ಕೂಗುತ್ತ ಹರಪನಹಳ್ಳಿ ವೃತ್ತಕ್ಕೆ ಆಗಮಿಸಿದರು. ಮಾನವ ಸರಪಳಿ ನಿರ್ಮಿಸಿ, ರಸ್ತೆ ತಡೆ ನಡೆಸಿ ಆಕ್ರೋಶ ಹೊರಹಾಕಿದರು.

ಪ್ರತಿಭಟನೆ ನೇತೃತ್ವ ವಹಿಸಿದ್ದ ನಗರ ಬಿಜೆಪಿ ಘಟಕ ಅಧ್ಯಕ್ಷ ಅಜಿತ್ ಸಾವಂತ್ ಮಾತನಾಡಿ, ರಾಜ್ಯದ ಆಡಳಿತ ಚುಕ್ಕಾಣಿ ಹಿಡಿದಿರುವ ಕಾಂಗ್ರೆಸ್ ಅಭಿವೃದ್ಧಿ ಶೂನ್ಯ ಸರ್ಕಾರವಾಗಿದೆ. ಕೇವಲ ಗ್ಯಾರಂಟಿಗಾಗಿ ಹಣ ಹೊಂದಿಸುತ್ತ ಕಾಲ ಕಳೆಯುತ್ತಿದೆ. ಹೀಗಾಗಿ ರಾಜ್ಯ ಆರ್ಥಿಕ ಬರಗಾಲ ಎದುರಿಸುವಂತಾಗಿದೆ. ಅಧಿಕಾರದ ಮದದಲ್ಲಿರುವ ಕಾಂಗ್ರೆಸ್ ಕಾರ್ಯಕರ್ತರ ದುರ್ವರ್ತನೆಗೆ ಬೇಸತ್ತ ಬಿಜೆಪಿ ಬುಧವಾರ ಪ್ರತಿಭಟಿಸಲು ಮುಂದಾದಾಗ ಕೈ ಕಾರ್ಯಕರ್ತರು ನಮ್ಮ ಶಾಸಕ ಬಿ.ಪಿ. ಹರೀಶ್ ಮೇಲೆ ಮೊಟ್ಟೆ ಎಸೆದು ತಮ್ಮ ಹೇಯ, ನೀಚ ಸಂಸ್ಕೃತಿ ಎತ್ತಿತೋರಿಸಿದ್ದಾರೆ. ಅದನ್ನು ನಾವಿಂದು ಖಂಡಿಸುತ್ತಿದ್ದೇವೆ. ರಾಜ್ಯಪಾಲರು ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.

ಜಿಲ್ಲಾ ಬಿಜೆಪಿ ಮಾಜಿ ಅಧ್ಯಕ್ಷ ಹನಗವಾಡಿ ವೀರೇಶ ಮಾತನಾಡಿ, ಕೊತ್ವಾಲ ಶಿಷ್ಯಂದಿರು ಹಾಗೂ ಕಾಂಗ್ರೆಸ್ ಕಾರ್ಯಕರ್ತರು ನಮ್ಮ ಶಾಸಕ ಬಿ.ಪಿ. ಹರೀಶ್ ಮೇಲೆ ಮೊಟ್ಟೆ ಎಸೆದು ಹಲ್ಲೆ ನಡೆಸಿದ್ದಾರೆ. ನಾವು ಸಹಿಸುವುದಿಲ್ಲ. ಈ ಕುರಿತು ರಾಜ್ಯದ ಎಲ್ಲ ಮಂಡಲಗಳಲ್ಲಿ ಪ್ರತಿಭಟನೆ ನಡೆಸಿದ್ದು. ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದರು.

ಜಿಲ್ಲಾ ಬಿಜೆಪಿ ನೂತನ ಅಧ್ಯಕ್ಷ ಮೆಳ್ಳೆಕಟ್ಟಿ ನಾಗರಾಜ ಮಾತನಾಡಿ, ಕಾಂಗ್ರೆಸ್ ತನ್ನ ನೀಚ ಪ್ರವೃತ್ತಿ ಕೈಬಿಟ್ಟು ಅಭಿವೃದ್ಧಿಯತ್ತ ಗಮನಹರಿಸಲಿ. ಬಿಜೆಪಿ ಕಾರ್ಯಕರ್ತರೇನು ಕೈಕಟ್ಟಿ ಕುಳಿತಿಲ್ಲ. ಕಾಂಗ್ರೆಸ್ಸಿಗರು ಎಚ್ಚರದಿಂದ ಇರಬೇಕೆಂದು ಗುಡುಗಿದರು.

ಗ್ರಾಮಾಂತರ ಘಟಕದ ಅಧ್ಯಕ್ಷ ಲಿಂಗರಾಜ ಹಿಂಡಸಘಟ್ಟ, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಅಣ್ಣೇಶ ಐರಣಿ. ಕಡ್ಲೇಬಾಳು ಧನಂಜಯ. ಲಕ್ಷ್ಮಣ, ತಾಲೂಕು ಕಾರ್ಯದರ್ಶಿಗಳಾದ ತುಳಜಪ್ಪ ಭೂತೆ, ಮಂಜಾನಾಯ್ಕ, ಜಿಲ್ಲಾ ಉಪಾಧ್ಯಕ್ಷೆ ಅಶ್ವಿನಿ ಕೃಷ್ಣ, ಜಿಲ್ಲಾ ರೈತ ಮೋರ್ಚಾ ಅಧ್ಯಕ್ಷ ಚಂದ್ರಶೇಖರ್ ಪೂಜಾರ್, ಮುಖಂಡರಾದ ರಾಜನಹಳ್ಳಿ ಶಿವಕುಮಾರ್, ಬಾತಿ ಚಂದ್ರಶೇಖರ್, ರಾಜು ರೋಖಡೆ, ಆಟೋ ಹನುಮಂತಪ್ಪ, ರಾಘವೇಂದ್ರ ಉಪಾಧ್ಯಾಯ, ಸಂತೋಷ್ ಗುಡಿಮನಿ, ವೀರೇಶ್ ಅಜ್ಜಣ್ಣನವರ, ಯೋಗೀಶ್ ಆರ್.ಎಲ್, ಮಾರುತಿ ಶೆಟ್ಟಿ, ಗಿರೀಶ್, ವಾಸು ಚಂದಾಪೂರ, ಹಾಲೇಶ ಸಾಲಕಟ್ಟಿ, ಗಂಗಾಧರ ದುರಗೋಜಿ, ರಾಜು ಖಿರೋಜಿ, ಫೋಟೋ ಸಂತೋಷ, ಪಾಪಣ್ಣ, ರವಿ ರಾಯ್ಕರ್, ನಂದಿಗಾವಿ ರಮೇಶ, ಜಿಗಳಿ ಹನುಮಗೌಡ, ನಾಗರಾಜ ಭಂಡಾರಿ, ಮೋತಿಲಾಲ್ ಖಿರೋಜಿ, ರೂಪಾ ಕಾಟ್ವೆ, ರೂಪಾ ಶಶಿಕಾಂತ್, ಸಾಕ್ಷಿ ಶಿಂಧೆ, ಅಶ್ವಿನಿ, ರಶ್ಮೀ ಮೆಹರ್ವಾಡೆ, ಸುಧಾ ಸೋಳಂಕಿ, ಅಂಬುಜಾ ಕಾಟ್ವೆ ಸೇರಿದಂತೆ, ಮುಖಂಡರು ಕಾರ್ಯಕರ್ತರು ಇದ್ದರು.

- - -

-23HRR. 02 & 2 A:

ಬೆಂಗಳೂರಲ್ಲಿ ಶಾಸಕ ಬಿ.ಪಿ ಹರೀಶ್ ಮೇಲೆ ಕಾಂಗ್ರೆಸ್ ಕಾರ್ಯಕರ್ತರು ಕೋಳಿಮೊಟ್ಟೆಯಿಂದ ಹಲ್ಲೆ ನಡೆಸಿದ ನಡೆ ವಿರುದ್ಧ ಹರಿಹರದದಲ್ಲಿ ಬಿಜೆಪಿ ಕಾರ್ಯಕರ್ತರು ಪ್ರತಿಭಟಿಸಿ ತಹಸೀಲ್ದಾರ್‌ಗೆ ಮನವಿ ಸಲ್ಲಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಜಿ ರಾಮ್‌ ಜಿ ಯೋಜನೆ ಲಾಭ ಪಡೆಯಿರಿ: ಸಂದೇಶ್‌
ದುಬೈ ವಿಶ್ವ ಕನ್ನಡ ಸಂಸ್ಕೃತಿ ಸಮ್ಮೇಳನಕ್ಕೆ ತೆರಳುತ್ತಿರುವ ಡಾ.ಕಿಕ್ಕೇರಿ ಕೃಷ್ಣಮೂರ್ತಿ