ಕನ್ನಡಪ್ರಭ ವಾರ್ತೆ ಮಂಡ್ಯ
ಬಳಿಕ ಮಾತನಾಡಿದ ಎಚ್.ಆರ್.ಅರವಿಂದ್, ಹಿರಿಯ ನಾಗರಿಕರ ಆಶೀರ್ವಾದದಿಂದ ಜಿಲ್ಲೆಯ ಸುಪುತ್ರ ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಉತ್ತಮ ಆಡಳಿತ ನೀಡಿದರು. ಜನಪರ ಯೋಜನೆಗಳನ್ನು ಜಾರಿ ಮಾಡಿದ್ದನ್ನು ಎಂದೂ ಮರೆಯಲಾರೆವು ಎಂದರು.
ಅವರ ಪುತ್ರ ನಮ್ಮ ನಾಯಕ ಬಿ.ಎಸ್.ವಿಜಯೇಂದ್ರ ಅವರು ತಂದೆ ಹಾದಿಯಲ್ಲಿ ಸಾಗಲಿ, ಜನಾಶೀರ್ವಾದದಿಂದ ರಾಜಕೀಯ ಭವಿಷ್ಯ ಉಜ್ವಲವಾಗಿ, ಮುಖ್ಯಮಂತ್ರಿ ಸ್ಥಾನ ಲಭಿಸಲಿ, ಯುವಜನತೆ ಹೊಸ ಬದಲಾವಣೆಗೆ ಮುಂದಾಗಿದ್ದಾರೆ ಎಂದು ನುಡಿದರು.ಮುಂದಿನ ದಿನಗಳಲ್ಲಿ ಮಂಡ್ಯ ಜಿಲ್ಲೆಯ ಅಭಿವೃದ್ಧಿಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ವಿಜಯೇಂದ್ರ ಅವರು ಕೊಡುಗೆ ನೀಡಲಿದ್ದಾರೆ ಎಂಬ ಆಶಾಭಾವನೆ ನಮ್ಮದಾಗಿದೆ. ಅವರು ರಾಜಕೀಯ ಶಕ್ತಿಯಾಗಿ ಬಹು ಎತ್ತರಕ್ಕೆ ಬೆಳೆಯಲಿ ಎಂದು ಶುಭ ಹಾರೈಸಿದರು.
ದೇವಾಲಯದಲ್ಲಿ ಪೂಜೆ, ಸ್ವಚ್ಛತೆ ಅಭಿಯಾನ:ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹುಟ್ಟುಹಬ್ಬದ ಅಂಗವಾಗಿ ನಗರದ ಶ್ರೀ ಚಾಮುಂಡೇಶ್ವರಿ ದೇವಾಲಯದಲ್ಲಿ ಜಿಲ್ಲಾ ಬಿಜೆಪಿ ಒಬಿಸಿ ಘಟಕದಿಂದ ದೇವಾಲಯ ಸ್ವಚ್ಚತೆ, ವಿಶೇಷ ಪೂಜೆ ಹಾಗೂ ಸಸಿ ನೆಡುವ ಕಾರ್ಯಕ್ರಮ ನಡೆಯಿತು.
ಮುಂದಿನ ದಿನಗಳಲ್ಲಿ ವಿಜಯೇಂದ್ರ ಅವರಿಗೆ ಬಿಜೆಪಿ ಪಕ್ಷವನ್ನು ಮತ್ತಷ್ಟು ಸಂಘಟನೆ ಮಾಡಲು ಶಕ್ತಿ, ಆರೋಗ್ಯ, ಆಯಸ್ಸು ನೀಡುವಂತೆ ನಾಡದೇವತೆ ಶ್ರೀ ಚಾಮುಂಡೇಶ್ವರಿ ದೇವಿಯಲ್ಲಿ ವಿಶೇಷ ಪೂಜೆ ಸಲ್ಲಿಸಿ ಸಾರ್ವಜನಿಕರಿಗೆ ಸಿಹಿ ವಿತರಿಸಿ, ರಸ್ತೆ ಅಂಚಿನಲ್ಲಿ ಸಸಿಗಳನ್ನು ನೆಡುತ್ತಿದ್ದೇವೆ ಎಂದು ತಿಳಿಸಿದರು.ಜಿಲ್ಲಾ ಬಿಜೆಪಿ ಕಾರ್ಯದರ್ಶಿ ವಿವೇಕ್, ನಗರಾಧ್ಯಕ್ಷ ವಸಂತ್‌ಕುಮಾರ್, ಆರ್.ವಾಸು, ಆನಂದ್, ನಗರಸಭಾ ಮಾಜಿ ಸದಸ್ಯರಾದ ಪ್ರಸನ್ನ, ಶಿವಕುಮಾರ್‌ಕೆಂಪಯ್ಯ, ಲಕ್ಷ್ಮಣ್‌ಗೌಡ, ಯೋಗೇಶ್, ನಂದೀಶ್ ಮತ್ತಿತರರಿದ್ದರು.