ಕನ್ನಡಪ್ರಭ ವಾರ್ತೆ ಆನವಟ್ಟಿ
ಬುಧವಾರ ಆನವಟ್ಟಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಪಾಲ್ಗೊಂಡು ಮಾತನಾಡಿ, ಬಿಜೆಪಿ ಶಿಸ್ತಿನ ಪಕ್ಷವಾದರೂ ಕೂಡ, ಕಳೆದ ವಿಧಾನಸಭಾ ಚುನಾವಣೆಯಲ್ಲಿ ಪಕ್ಷದ ಕೆಲವರು ಬಂಡಾಯದ ಬಾವುಟ ಹಾರಿಸಿ, ಸ್ವಾರ್ಥ ಸಾಧನೆಗಾಗಿ ನಮೋ ವೇದಿಕೆ ಸೃಷ್ಠಿಸಿ, ಪಕ್ಷದ ಅಭ್ಯರ್ಥಿಯ ಸೋಲಿಗೆ ಕಾರಣರಾದ ನಮೋ ವೇದಿಕೆಯ ಮುಂಚೂಣಿ ಮುಖಂಡರಿಗೆ, ಬಿಜೆಪಿ ಪಕ್ಷದ ಜಿಲ್ಲಾ ಹಂತದಿಂದ ಬೂತ್ ಮಟ್ಟದವರೆಗೆ ವಿವಿಧ ಅಧಿಕಾರಗಳನ್ನು ನೀಡಿ, ಲೋಕಸಭಾ ಚುನಾವಣೆ ಮಾಡಲು ಹೊರಟಿರುವ ಬಿಜೆಪಿ ಪಕ್ಷದ ನಾಯಕರ ನಡೆಯನ್ನು ಕಾರ್ಯಕರ್ತರು ಖಂಡಿಸಿದ್ದಾರೆ ಎಂದು ತಿಳಿಸಿದರು.
ಈಗಾಗಲೇ ಚಂದ್ರಗುತ್ತಿ, ಉಳುವಿ, ಸೊರಬ, ತಾಳಗುಪ್ಪ ಹಾಗೂ ಆನವಟ್ಟಿ ಭಾಗದ ಮಹಾ ಶಕ್ತಿಕೇಂದ್ರಗಳಲ್ಲಿ ಸಮಾನ ಮನಸ್ಕರರ ಸಭೆ ನಡೆಸಲಾಗಿದ್ದು. ನಮೋ ವೇಧಿಕೆಯವರನ್ನು ಮುಂದಿಟ್ಟುಕೊಂಡು ಮತ ಕೇಳಲು ಮುಂದಾದರೆ, ಪಕ್ಷದ ನಿಷ್ಠಾವಂತ ಕಾರ್ಯಕರ್ತರು ಮುಜುಗರಕ್ಕೀಡಾಗಬೇಕಾಗುತ್ತದೆ ಎಂಬ ಅಭಿಪ್ರಾಯವ್ಯಕ್ತವಾಗಿದೆ ಎಂದರು.ಮಲ್ಲಿಕಾರ್ಜುನ ವೃತ್ತಿಕೊಪ್ಪ ಮಾತನಾಡಿ, ಸೊರಬ ತಾಲೂಕಿನಿಂದ ಬೈಂದೂರು ವರೆಗೂ ಒಬಿಸಿ ಮತದಾರರು ಕುಮಾರ್ ಬಂಗಾರಪ್ಪ ಅವರನ್ನು ಬೆಂಬಲಿಸುತ್ತಲೇ ಬಂದಿದ್ದಾರೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಕುಮಾರ್ ಬಂಗಾರಪ್ಪ ಅವರ ಸತತ ಪ್ರಯತ್ನದಿಂದಾಗಿ ಸೊರಬ, ಸಾಗರ, ಹೊಸನಗರ, ತೀರ್ಥಹಳ್ಳಿ, ಬೈಂದೂರು ಭಾಗಗಳಲ್ಲಿ ಬಿಜೆಪಿ ಅಭ್ಯರ್ಥಿಗೆ ಅತಿ ಹೆಚ್ಚಿನ ಮತ ಬರಲು ಕಾರಣವಾಯಿತು. ಈಗಲೂ ಸಹ ಈ ಭಾಗಗಳ ಒಬಿಸಿ ಮತದಾರರು ಬಿಜೆಪಿ ಪಕ್ಷ, ಕುಮಾರ್ ಬಂಗಾರಪ್ಪ ಅವರನ್ನು ಹೇಗೆ ನಡೆಸಿಕೊಳ್ಳುತ್ತಿದೆ ಎಂಬುದರ ಮೇಲೆ ಮತ ನಿರ್ಣಯ ಮಾಡಲು ಕಾಯುತ್ತಿದ್ದಾರೆ. ಒಂದು ವೇಳೆ ಪಕ್ಷದಲ್ಲಿ ಕುಮಾರ್ ಬಂಗಾರಪ್ಪ ಅವರನ್ನು ಕಡೆಗಣಿಸಿದರೆ ಪಕ್ಷದ ಅಭ್ಯರ್ಥಿಯ ಸೋಲು ಖಚಿತ ಎಂದು ಎಚ್ಚರಿಕೆ ನೀಡಿದರು.