ಕನ್ನಡಪ್ರಭ ವಾರ್ತೆ ಮುಂಡರಗಿ
ನರೇಂದ್ರ ಮೋದಿಯವರು ಸತತವಾಗಿ ಮೂರನೇ ಬಾರಿಗೆ ದೇಶದ ಪ್ರಧಾನ ಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಹಿನ್ನೆಲೆಯಲ್ಲಿ ಭಾನುವಾರ ಸಂಜೆ ಮುಂಡರಗಿ ಹೇಮರಡ್ಡಿ ಮಲ್ಲಮ್ಮ ವೃತ್ತದಲ್ಲಿ ಬಿಜೆಪಿ ಕಾರ್ಯಕರ್ತರು ಪಟಾಕಿ ಸಿಡಿಸಿ ಪರಸ್ಪರ ಸಿಹಿ ಹಂಚಿ ವಿಜಯೋತ್ಸವ ಆಚರಿಸಿದರು.ಈ ಸಂದರ್ಭದಲ್ಲಿ ಬಿಜೆಪಿ ಮುಂಡರಗಿ ಮಂಡಲದ ಅಧ್ಯಕ್ಷ ಹೇಮಗಿರೀಶ ಹಾವಿನಾಳ ಮಾತನಾಡಿ, ಮೂರನೇಯ ಅವಧಿಗೆ ನರೇಂದ್ರ ಮೋದಿ ಪ್ರಧಾನ ಮಂತ್ರಿಯಾಗುತ್ತಿದ್ದು, ದೇಶವನ್ನು ಆರ್ಥಿಕವಾಗಿ ಉನ್ನತ ಮಟ್ಟಕ್ಕೆ ತೆಗೆದುಕೊಂಡು ಹೋಗುವುದರ ಜತೆಗೆ ಅನೇಕ ಹೊಸ ಹೊಸ ಯೋಜನೆಗಳು ಜಾರಿಗೊಳ್ಳಲಿವೆ. ದೇಶ ಇನ್ನಷ್ಟು ಪ್ರಗತಿ ಪಥದತ್ತ ಮುನ್ನಡೆಯಲಿದೆ. ಹಾವೇರಿ ಕ್ಷೇತ್ರದಲ್ಲಿ ಬಸವರಾಜ ಬೊಮ್ಮಾಯಿ ಆಯ್ಕೆ ಮಾಡಿದ್ದಕ್ಕಾಗಿ ಮತದಾರರಿಗೆ ತುಂಬು ಹೃದಯದ ಧನ್ಯವಾದ ಹೇಳಿದರು.
ಮುಖಂಡರಾದ ಕೊಟ್ರೇಶ ಅಂಗಡಿ, ಕುಮಾರಸ್ವಾಮಿ ಹಿರೇಮಠ, ಪಾಲಾಕ್ಷಿ ಗಣದಿನ್ನಿ, ಪವಿತ್ರ ಕಲ್ಲಕುಟಿಗರ ಮಾತನಾಡಿ, ಎರಡು ಬಾರಿ ಪ್ರಧಾನಮಂತ್ರಿಯಾಗಿ ಉತ್ತಮ ಆಡಳಿತ ನಡೆಸಿದ್ದಕ್ಕಾಗಿ ವಿವಿಧ ಪಕ್ಷದ ನಾಯಕರು ಕೂಡಾ ಮೋದಿಯವರ ಉತ್ತಮ ನಾಯಕತ್ವ ಹಾಗೂ ಆಡಳಿತ ವೈಖರಿಯನ್ನು ಮೆಚ್ಚಿ ಪ್ರಸ್ತುತ ಸಂದರ್ಭದಲ್ಲಿ ಅವರಿಗೆ ಬೆಂಬಲಿಸಿ ಮತ್ತೆ ದೇಶದಲ್ಲಿ ಬಿಜೆಪಿ ಆಡಳಿತಕ್ಕೆ ಬರಲು ಕಾರಣವಾಗಿದ್ದಾರೆ ಎಂದರು.ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ಕರಬಸಪ್ಪ ಹಂಚಿನಾಳ, ಶಿವಪ್ಪ ಚಿಕ್ಕಣ್ಣವರ, ಎಸ್.ವಿ. ಪಾಟೀಲ, ಪ್ರಶಾಂತ ಗುಡದಪ್ಪನವರ, ಎಸ್.ಎಸ್. ಗಡ್ಡದ, ಯಲ್ಲಪ್ಪ ಗಣಾಚಾರಿ, ವಿ.ಎಸ್. ಘಟ್ಟಿ, ಮಂಜು ಮುಧೋಳ, ಶ್ರೀನಿವಾಸ ಅಬ್ಬಿಗೇರಿ, ಎಚ್. ವಿರೂಪಾಕ್ಷಗೌಡ, ಮರಿಯಪ್ಪ ರಾಮೇನಹಳ್ಲಿ, ಬಿ.ಕೆ. ಪಾಟೀಲ, ದೇವಪ್ಪ ಇಟಗಿ, ಜ್ಯೋತಿ ಹಾನಗಲ್, ಪುಷ್ಪಾ ಉಕ್ಕಲಿ, ಅರುಣಾ ಪಾಟೀಲ, ಮೀನಾ, ಶಂಕರ ಉಳ್ಳಾಗಡ್ಡಿ, ರಮೇಶ ಹುಳಕಣ್ಣವರ, ಸುರೇಶ ಬಾರಿಗಿಡದ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.
ಮೋದಿ ಪ್ರಮಾಣವಚನ: ಗಿಡ ನೆಟ್ಟು ಸಂಭ್ರಮಕನ್ನಡಪ್ರಭ ವಾರ್ತೆ ಗದಗದೇಶದ ನೆಚ್ಚಿನ ಪ್ರಧಾನಮಂತ್ರಿ ನರೇಂದ್ರ ಮೋದಿ 3 ನೇ ಬಾರಿಗೆ ಪ್ರಧಾನಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಹಿನ್ನೆಲೆಯಲ್ಲಿ ಗದಗ ನಗರದ ಗಂಜಿ ಬಸವೇಶ್ವರ ದೇವಸ್ಥಾನದ ಆವರಣದಲ್ಲಿ ಬಿಜೆಪಿ ರೈತ ಮೋರ್ಚಾ ಗದಗ ನಗರ ಮಂಡಲ ವತಿಯಿಂದ, ಅಧ್ಯಕ್ಷ ಶಂಕರ ಕರಬಿಷ್ಠಿ ಅವರ ನೇತೃತ್ವದಲ್ಲಿ ಸಸಿ ನೆಟ್ಟು ಸಂತಸ ಪಡಲಾಯಿತು.
ಈ ಸಂದರ್ಭದಲ್ಲಿ ಗುರುಶಾಂತಗೌಡ ಮರೀಗೌಡ್ರ, ಬಸಪ್ಪ ಪಡಗದ, ಬಸವರಾಜ ಹುಬ್ಬಳ್ಳಿ, ಶಿವಪ್ಪ ಮುಳ್ಳಾಳ, ಸಿದ್ಧಲಿಂಗನಗೌಡ ಉಮಚಗಿ, ಪ್ರಭು ಕಲಬಂಡಿ, ಸಿದ್ದಿಂಗಪ್ಪ ಗಾಣಿಗೇರ, ಲಕ್ಷ್ಮಣ ವಾಲ್ಮೀಕಿ, ಶರಣಗೌಡ ಮರೀಗೌಡ್ರ, ನಾಗು ಹುಂಬಿ, ಇಮಾಮಸಾಬ್ ಉಮಚಗಿ, ತೋಟಯ್ಯ ವಿಭೂತಿಮಠ, ಬಸವರಾಜ ಬಟ್ಟೂರ ಹಾಗೂ ಸೇರಿ ಪ್ರಮುಖರು ಉಪಸ್ಥಿತರಿದ್ದರು.