ಹಾಲಿವಾಣ ಜಾತ್ರೆಯಲ್ಲಿ ಧರ್ಮ ನಿಂದನೆ, ಪ್ರಾಣಿಬಲಿ ನಿಷೇಧ

KannadaprabhaNewsNetwork | Published : Apr 1, 2024 12:48 AM

ಸಾರಾಂಶ

ಏ.೧ರಿಂದ ೫ ರವರೆಗೆ ಮಲೇಬೆನ್ನೂರು ಪೋಲೀಸ್ ಠಾಣಾ ಸರಹದ್ದಿನ ಹಾಲಿವಾಣ ಗ್ರಾಮದಲ್ಲಿ ಏಳೂರು ಕರಿಯಮ್ಮದೇವಿ ಜಾತ್ರೆ ನಡೆಯಲಿದೆ. ಈ ಹಿನ್ನೆಲೆ ಜಿಲ್ಲಾ ಎಸ್‌ಪಿ ಉಮಾ ಪ್ರಶಾಂತ್ ಮಾರ್ಗದರ್ಶನದಲ್ಲಿ ಹಾಲಿವಾಣ ಗ್ರಾಮದ ಕರಿಯಮ್ಮ ದೇವಾಲಯ ಆವರಣದಲ್ಲಿ ಹರಿಹರ ತಹಸೀಲ್ದಾರ್ ಗುರುಬಸವರಾಜ್ ಅಧ್ಯಕ್ಷತೆಯಲ್ಲಿ ಹೆಚ್ಚುವರಿ ಅಧೀಕ್ಷಕ ವಿಜಯ್‌ಕುಮಾರ್ ಸಂತೋಷ್, ಗ್ರಾಮಾಂತರ ಉಪಾಧೀಕ್ಷಕ ಪ್ರಶಾಂತ್ ಉಪಸ್ಥಿತಿಯಲ್ಲಿ ಸೌಹಾರ್ದ ಸಭೆ ನಡೆಸಲಾಯಿತು.

ಕನ್ನಡಪ್ರಭ ವಾರ್ತೆ, ಮಲೇಬೆನ್ನೂರು

ವೃತ್ತ ನಿರೀಕ್ಷಕ ಸುರೇಶ್ ಸಗರಿ ಪಿಎಸ್‌ಐ ಪ್ರಭು ಕೆಳಗಿನಮನಿ ಅವರು ಸೌಹಾರ್ದ, ಶಾಂತಿಯುತ ಜಾತ್ರೆ ನಡೆಸಲು ಅಗತ್ಯವಾದ ಮಾಹಿತಿ, ಕಾನೂನು ಕಟ್ಟಲೆಗಳ ಮಾಹಿತಿ ನೀಡಿದರು. ದೇವಿ ಜಾತ್ರೆಯನ್ನು ಶಾಂತಿಯುತವಾಗಿ ಆಚರಿಸಬೇಕು, ಪ್ರಾಣಿಬಲಿ ನಿಷೇಧಿಸಲಾಗಿದೆ, ಲೋಕಸಭೆ ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿದ್ದು, ಯಾರೂ ಸಂಹಿತೆ ಉಲ್ಲಂಘಿಸುವಂತಿಲ್ಲ, ಬ್ಯಾನರ್- ಫ್ಲೆಕ್ಸ್ ಹಾಕಲು ಚುನಾವಣಾ ಅಧಿಕಾರಿಗಳಿಂದ ಅನುಮತಿ ಪಡೆಯುವುದು ಕಡ್ಡಾಯ ಎಂಬಿತ್ಯಾದಿ ಸೂಚನೆಗಳನ್ನು ತಿಳಿಸಲಾಯಿತು.

ದೇವಾಲಯ ಆವರಣದಲ್ಲಿ ಮೌಢ್ಯಾಚರಣೆ, ಜಾತ್ರೆ ಸಮಯದಲ್ಲಿ ಅಕ್ರಮ ಮದ್ಯ ಮಾರಾಟ ನಿಷೇಧವಿದೆ. ಕಾನೂನುಬಾಹಿರ ಚಟುವಟಿಕೆಗಳಿಗೆ ಅವಕಾಶವಿಲ್ಲ. ರೌಡಿ, ಮತೀಯ ಗೂಂಡಾಗಳು ಹಬ್ಬದಲ್ಲಿ ಕಾನೂನು ಸುವ್ಯವಸ್ಥೆಗೆ ಧಕ್ಕೆ ತಂದಲ್ಲಿ ಕ್ರಮ ಗ್ಯಾರಂಟಿ. ಮಹಿಳೆಯರು, ಮಕ್ಕಳಿಗೆ ಚುಡಾವಣೆ, ಮದ್ಯಸೇವನೆ ಮಾಡಿ ಅಸಭ್ಯವಾಗಿ ವರ್ತಿಸುವುದು ಕಂಡುಬಂದಲ್ಲಿ ಕಟ್ಟು ನಿಟ್ಟಿನ ಕಾನೂನು ಕ್ರಮ ನಿಶ್ಚಿತ. ಅಲ್ಲದೇ, ಪ್ರಚೋದನಾಕಾರಿ ಪೋಸ್ಟರ್‌ಗಳನ್ನು ಹಾಕುವುದು ಮತ್ತು ಧರ್ಮದ ವಿರುದ್ಧ ಅವಹೇಳನಕಾರಿ ಬರವಣಿಗೆ ನಿಷೇಧವಿದೆ ಎಂದು ಪೋಲೀಸ್ ಅಧಿಕಾರಿಗಳು ಸೂಚನೆ ನೀಡಿದರು.

ಇಲಾಖೆಗಳ ಅಧಿಕಾರಿಗಳು ಹಾಗೂ ದೇವಾಲಯ ವ್ಯಾಪ್ತಿಯ ಏಳು ಗ್ರಾಮಗಳ ಸುಮಾರು ೪೦೦ ಜನ ಗ್ರಾಮಸ್ಥರು ಭಾಗವಹಿಸಿದ್ದರು.

- - - -ಚಿತ್ರ೧:

ಹಾಲಿವಾಣ ಗ್ರಾಮದ ಸೌಹಾರ್ಧ ಸಭೆಯಲ್ಲಿ ತಹಸೀಲ್ದಾರ್ ಗುರುಬಸವರಾಜ್ ಮಾತನಾಡಿದರು.

Share this article