ಕನಕ ಜಯಂತೋತ್ಸವ ಸಮಿತಿಗೆ ಅಧ್ಯಕ್ಷರ ಆಯ್ಕೆ ನಡೆದಿಲ್ಲ

KannadaprabhaNewsNetwork |  
Published : Nov 07, 2025, 01:15 AM IST

ಸಾರಾಂಶ

ಕುರುಬ ಸಮಾಜ ಬಾಂಧವರ ಸಭೆಯನ್ನು ಅ. 22ರಂದು ಪಟ್ಟಣದ ಕನಕದಾಸ ಸಾರ್ವಜನಿಕ ವಿದ್ಯಾಸಂಸ್ಥೆಯಲ್ಲಿ ನಡೆಸಲಾಗಿತ್ತು,

ಕುರುಬ ಸಮಾಜದ ಮುಖಂಡ ಸಿ.ಎಂ. ಶಂಕರ್ ಆರೋಪ

ಕನ್ನಡಪ್ರಭ ವಾರ್ತೆ ನಂಜನಗೂಡು ಕನಕ ಜಯಂತೋತ್ಸವ ಸಮಿತಿಗೆ ಯಾರನ್ನು ಅಧ್ಯಕ್ಷರನ್ನಾಗಿ ನೇಮಿಸಿಲ್ಲ, ಟಿ.ಎಲ್. ಮೋಹನ್ ತನ್ನನ್ನು ಅಧ್ಯಕ್ಷರನ್ನಾಗಿ ಶಾಸಕ ಡಾ. ಯತೀಂದ್ರ ಸಿದ್ದರಾಮಯ್ಯ ನೇಮಿಸಿದ್ದಾರೆ ಎಂದು ಬಿಂಬಿಸಿಕೊಂಡು ಸುಳ್ಳು ಪ್ರಚಾರದಲ್ಲಿ ತೊಡಗಿ ಸಮಾಜವನ್ನು ದಿಕ್ಕು ತಪ್ಪಿಸುತ್ತಿದ್ದಾರೆ ಎಂದು ಕುರುಬ ಸಮಾಜದ ಮುಖಂಡ ಹಾಗೂ ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿ.ಎಂ. ಶಂಕರ್ ಹೇಳಿದರು.ಕುರುಬ ಸಮಾಜ ಬಾಂಧವರ ಸಭೆಯನ್ನು ಅ. 22ರಂದು ಪಟ್ಟಣದ ಕನಕದಾಸ ಸಾರ್ವಜನಿಕ ವಿದ್ಯಾಸಂಸ್ಥೆಯಲ್ಲಿ ನಡೆಸಲಾಗಿತ್ತು, ಸಭೆಯಲ್ಲಿ ಕಳೆದ ಮೂರು ವರ್ಷಗಳಿಂದ ತಾಲೂಕು ಕುರುಬರ ಸಂಘಕ್ಕೆ ಚುನಾವಣೆ ನಡೆಸದಿರುವ ಬಗ್ಗೆ ಚರ್ಚೆಯಾಗಿತ್ತು, ಸಂಘದ ಸಮಿತಿ ಅಸ್ತಿತ್ವಕ್ಕೆ ಬರದಿರುವುದರಿಂದ ಕನಕದಾಸರ ಜಯಂತಿ ಆಚರಣೆ ನಿಂತಿದೆ, ಸಂಘ ನಿಷ್ಕ್ರಿಯಗೊಂಡಿದೆ, ಮುಂದೆ ಶೀಘ್ರವಾಗಿ ಸಂಘದ ಚುನಾವಣೆ ನಡೆಸಬೇಕೆಂದು ತೀರ್ಮಾನ ಕೈಗೊಳ್ಳಲಾಯಿತು ಎಂದು ಸುದ್ದಿಗೋಷ್ಠಿಯಲ್ಲಿ ಅವರು ತಿಳಿಸಿದರು.ಸಭೆಯಲ್ಲಿ ಕನಕ ಜಯಂತೋತ್ಸವ ಸಮಿತಿಗೆ ಅಧ್ಯಕ್ಷರನ್ನು ನೇಮಕ ಮಾಡಿರಲಿಲ್ಲ, ಯತೀಂದ್ರ ಸಿದ್ದರಾಮಯ್ಯರವರ ನೇತೃತ್ವದಲ್ಲಿ ಜಯಂತಿ ಮಹೋತ್ಸವ ಸಮಿತಿ ಅಧ್ಯಕ್ಷರನ್ನು ನೇಮಕ ಮಾಡುವುದಾಗಿ ತಿಳಿಸಿದ್ದಾರೆ, ಆದರೆ ಸಮಾಜದ ಕೆಲವು ಮುಖಂಡರು ಸ್ವಯಂ ಘೋಷಿತವಾಗಿ ಜಯಂತಿ ಮಹೋತ್ಸವ ಸಮಿತಿ ಅಧ್ಯಕ್ಷರೆಂದು ಘೋಷಿಸಿಕೊಂಡು ಸಮಾಜದ ಮುಖಂಡರಾದ ಕೆಂಪಣ್ಣ, ಕುಳ್ಳಯ್ಯ ಹಾಗೂ ಮೋಹನ್ ಸುಳ್ಳು ಪ್ರಚಾರ ನಡೆಸಿ, ಸಮಾಜವನ್ನು ದಿಕ್ಕು ತಪ್ಪಿಸುತ್ತಿದ್ದಾರೆ, ಸಮಾಜದ ಬಂಧುಗಳು ಇದಕ್ಕೆ ಕಿವಿಗೊಡಬಾರದು, ಈ ಬಾರಿ ಕನಕ ಜಯಂತಿ ಅದ್ದೂರಿಯಾಗಿ ನಡೆಯುವುದು ನಿಶ್ಚಿತ, ಆದರೆ ಎಲ್ಲರನ್ನೂ ಒಮ್ಮತವಾಗಿ ಕರೆದುಕೊಂಡು ಹೋಗಿ ಎಂಬುದೇ ನಮ್ಮ ಅಜೆಂಡಾ, ಮುಂದೆ ಮುಖ್ಯಮಂತ್ರಿ ಸಿದ್ದರಾಮಯ್ಯನವರ ದಿನಾಂಕ ಗೊತ್ತುಪಡಿಸಿಕೊಂಡು ಪಟ್ಟಣದಲ್ಲಿ ಅದ್ದೂರಿಯಾಗಿ ಕನಕ ಜಯಂತಿ ಕಾರ್ಯಕ್ರಮವನ್ನು ಆಯೋಜಿಸಲಾಗುವುದು ಎಂದು ಅವರು ಹೇಳಿದರು.ತಾಲೂಕು ಪಂಚಾಯತ್ ಮಾಜಿ ಅಧ್ಯಕ್ಷ ತಮ್ಮೇಣ್ಣೆಗೌಡ ಮಾತನಾಡಿ, ಕನಕ ಜಯಂತೋತ್ಸವ ಸಮಿತಿಯ ಅಧ್ಯಕ್ಷ ಗಾದಿಗೆ ಗೀಕಳ್ಳಿ ಬಿರೇಗೌಡ, ಹುಣಸನಾಳು ಸಿದ್ದರಾಜು ಹಾಗೂ ಮೋಹನ್ ಸೇರಿದಂತೆ ಮೂರು ಮಂದಿ ಅಕಾಂಕ್ಷಿಗಳಿದ್ದಾರೆ, ನ. 8 ರಂದು ತಾಲೂಕು ಕಚೇರಿಯಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದ ಸರಳವಾಗಿ ನಡೆಯುವ ಕನಕ ಜಯಂತಿ ಕಾರ್ಯಕ್ರಮದ ನಂತರ ಶಾಸಕರಾದ ಯತೀಂದ್ರ ಸಿದ್ದರಾಮಯ್ಯ ಹಾಗೂ ದರ್ಶನ್ ಧ್ರುವನಾರಾಯಣ ಅವರ ಸಮ್ಮಖದಲ್ಲಿ ಕನಕ ಜಯಂತೋತ್ಸವ ಸಮಿತಿಗೆ ಅಧ್ಯಕ್ಷರನ್ನು ನೇಮಕ ಮಾಡಲಿದ್ದಾರೆ ಎಂದು ಹೇಳಿದರು.ಮುಖಂಡರಾದ ಕೊಂಗಳ್ಳಿ ಶಂಕರ್, ಬಿರೇಗೌಡ, ಎಚ್.ಎಸ್. ಸುರೇಶ್, ಆನಂದ್, ಗೋವಿಂದರಾಜು, ನಾಗರಾಜು, ಮಹೇಶ್, ರಾಜೇಶ್, ಲೋಕೇಶ್, ಸ್ವಾಮಿ, ಮಹದೇವು, ಸಿದ್ದರಾಜು, ಕುಮಾರ್, ಮಹೇಶ್, ಗೀಕಳ್ಳಿ ಶಿವರಾಜು, ವಿಜಯ್ ಕುಮಾರ್, ಮೊತ್ತ ನಾಗರಾಜು, ರಾಜೇಶ್, ಮಣಿಕಂಠ, ಹುಚ್ಚೇಗೌಡ, ವಿಜಯ್ ಕುಮಾರ್ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

''ದ್ವೇಷ ಮಸೂದೆಯಿಂದ ಭಿನ್ನ ದನಿ ದಮನ ಆಗಲ್ಲ ''
3 ವರ್ಷ ಮೊಮ್ಮಗನಿಗೆ ಬಾರಲ್ಲಿ ಹೆಂಡ ಕುಡಿಸಿದ ಅಜ್ಜ: ಆಕ್ರೋಶ