ನಾಳೆ ಬಾರ್ ಸ್ಥಳಾಂತರಕ್ಕೆ ಒತ್ತಾಯಿಸಿ ರಸ್ತೆ ತಡೆ

KannadaprabhaNewsNetwork |  
Published : Jul 18, 2024, 01:33 AM IST
17ಕೆಡಿವಿಜಿ3-ದಾವಣಗೆರೆ ವಿನೋಬ ನಗರದ 4ನೇ ಮುಖ್ಯರಸ್ತೆ ನಿವಾಸಿಗಳಾದ ಅನುಪಮಾ ರವಿಕುಮಾರ ಇತರರು ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು. | Kannada Prabha

ಸಾರಾಂಶ

ಬಾರ್ ಸ್ಥಳಾಂತರಿಸುವಂತೆ ಅಬಕಾರಿ ಇಲಾಖೆಗೆ ನಿರಂತರ ಮನವಿ ಮಾಡಿದ್ದರೂ ಸ್ಪಂದಿಸಿಲ್ಲ. ಈ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ವಿಶೇಷ‍ವಾಗಿ ಮಕ್ಕಳು, ಹೆಣ್ಣು ಮಕ್ಕಳಿಗೆ, ಸ್ಥಳೀಯ ನಿವಾಸಿಗಳಿಗೆ ಸಮಸ್ಯೆ ಆಗಿರುವ ಬಾರ್ ಸ್ಥಳಾಂತರಿಸುವಂತೆ ಒತ್ತಾಯಿಸಿ ಜುಲೈ 19ರಂದು ನಗರದ ವಿನೋಬ ನಗರದ 3ನೇ ಮುಖ್ಯರಸ್ತೆಯ ಕೆಎಸ್ ವೈನ್ ಲ್ಯಾಂಡ್ ಎದುರು ಸ್ಥಳೀಯ ನಿವಾಸಿಗಳು ಪ್ರತಿಭಟಿಸಲಿದ್ದಾರೆ.

- ವಿನೋಬ ನಗರ 4ನೇ ಮುಖ್ಯ ರಸ್ತೆಯಲ್ಲಿ ತಪ್ಪದ ಕುಡುಕರ ಕಾಟ: ಅನುಪಮ

- - - ಕನ್ನಡಪ್ರಭ ವಾರ್ತೆ, ದಾವಣಗೆರೆ

ಬಾರ್ ಸ್ಥಳಾಂತರಿಸುವಂತೆ ಅಬಕಾರಿ ಇಲಾಖೆಗೆ ನಿರಂತರ ಮನವಿ ಮಾಡಿದ್ದರೂ ಸ್ಪಂದಿಸಿಲ್ಲ. ಈ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ವಿಶೇಷ‍ವಾಗಿ ಮಕ್ಕಳು, ಹೆಣ್ಣು ಮಕ್ಕಳಿಗೆ, ಸ್ಥಳೀಯ ನಿವಾಸಿಗಳಿಗೆ ಸಮಸ್ಯೆ ಆಗಿರುವ ಬಾರ್ ಸ್ಥಳಾಂತರಿಸುವಂತೆ ಒತ್ತಾಯಿಸಿ ಜುಲೈ 19ರಂದು ನಗರದ ವಿನೋಬ ನಗರದ 3ನೇ ಮುಖ್ಯರಸ್ತೆಯ ಕೆಎಸ್ ವೈನ್ ಲ್ಯಾಂಡ್ ಎದುರು ಸ್ಥಳೀಯ ನಿವಾಸಿಗಳು ಪ್ರತಿಭಟಿಸಲಿದ್ದಾರೆ.

ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಿನೋಬ ನಗರ ನಿವಾಸಿ ಅನುಮಪ ರವಿಕುಮಾರ ಅವರು, ಮದ್ಯಪಾನ ಮಾಡಿದ ವ್ಯಕ್ತಿಗಳು ರಸ್ತೆಯಲ್ಲೇ ಎಚ್ಚರವಿಲ್ಲದೇ ಬಿದ್ದಿರುತ್ತಾರೆ. ರಸ್ತೆಯ ಎರಡೂ ಕಡೆ ತೂರಾಡಿಕೊಂಡು ನಡೆಯುವುದು, ವಾಹನ ಚಾಲನೆ ಮಾಡುವುದು, ಕುಡಿದ ನಶೆಯಲ್ಲಿ ಅಕ್ಕಪಕ್ಕದಲ್ಲಿ ವಾಸದ ಮನೆಗಳ ಮುಂದೆ ಮೂತ್ರ ವಿಸರ್ಜನೆ, ವಾಂತಿ ಮುಂತಾದ ಅಸಭ್ಯತೆ ತೋರುತ್ತಿದ್ದಾರೆ ಎಂದು ದೂರಿದರು.

ಈ ಎಲ್ಲದರ ಬಗ್ಗೆ ಅಬಕಾರಿ ಇಲಾಖೆ ಗಮನಕ್ಕೆ ತಂದರೂ ಬಾರ್ ಸ್ಥಳಾಂತರಕ್ಕೆ ಏಕೆ ಮುಂದಾಗಿಲ್ಲ? ಬಡಾವಣೆ ಪೊಲೀಸ್ ಠಾಣೆಯಲ್ಲಿ ಸ್ವತಃ ಮದ್ಯದಂಗಡಿ ಮಾಲೀಕರೇ ಮದ್ಯದಂಗಡಿ ಸ್ಥಳಾಂತರಿಸುವುದಾಗಿ ಲಿಖಿತ ರೂಪದಲ್ಲಿ ಪತ್ರ ನೀಡಿದ್ದರು. ಆದರೂ, ಸಹ ಅಬಕಾರಿ ಇಲಾಖೆ ಮದ್ಯದಂಗಡಿ ಸ್ಥಳಾಂತರಿಸದೇ ಪರವಾನಿಗೆ ನವೀಕರಿಸುತ್ತಿದ್ದಾರೆ. ಈ ಕಾರಣಕ್ಕೆ ವಿನೋಬ ನಗರ ಮುಖ್ಯ ರಸ್ತೆಯ ಕೆಎಸ್‌ ವೈನ್ ಲ್ಯಾಂಡ್ ಸ್ಥಳಾಂತರಿಸಬೇಕು. ಬೆಳಗ್ಗೆ 10.30ಕ್ಕೆ ಬಾರ್ ಮುಂಭಾಗದಲ್ಲಿ ರಸ್ತೆ ನಡೆದು, ಪ್ರತಿಭಟನೆ ನಡೆಲಾಗುವುದು ಎಂದು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಸ್ಥಳೀಯ ನಿವಾಸಿಗಳಾದ ವಿಜಯಲಕ್ಷ್ಮೀ ನಿರಂಜನ, ಭಾಗೀರಥಿ ಪಾಂಡುರಂಗ, ಸರೋಜ ವಿಜಯಕುಮಾರ, ಶಂಷದ್ ಸೈಯದ್ ಸೈಫುಲ್ಲಾ, ನಿವೇದಿತಾ ಸಚ್ಚಿನ್, ವಿಜಯಮ್ಮ ಶೀಲವಂತ್ ಇತರರು ಇದ್ದರು.

- - -

ಬಾಕ್ಸ್‌ * ಮದ್ಯಪಾನಿಗಳಿಂದ ನಿತ್ಯ ಕಿರಿಕಿರಿಮದ್ಯದಂಗಡಿಯಿಂದಾಗಿ ವಿನೋಬ ನಗರ, ಯಲ್ಲಮ್ಮ ನಗರ, ಶಾಂತಿ ನಗರಕ್ಕೆ ಹೋಗಿ, ಬರುವ ನಿವಾಸಿಗಳಿಗೆ ತೀವ್ರ ತೊಂದರೆಯಾಗುತ್ತಿದೆ. ಕುಡುಕರು ಮನೆ, ಅಂಗಡಿಯ ಮುಂದೆ ಮಲ- ಮೂತ್ರ ವಿಸರ್ಜನೆ ಮಾಡುತ್ತಿದ್ದಾರೆ. ಅಪ್ರಾಪ್ತ ಮಕ್ಕಳು, ಯುವತಿಯರು, ಮಹಿಳೆಯರ ಜೊತೆ ಅನುಚಿತವಾಗಿ ವರ್ತಿಸುತ್ತಿದ್ದಾರೆ. ಮನೆಗಳ ಮುಂದೆ ವಾಹನ ನಿಲ್ಲಿಸಿ, ಜೋರಾಗಿ ಅವಾಚ್ಯವಾಗಿ, ಕೆಟ್ಟ ಪದಗಳಿಂದ ಮಾತನಾಡುವುದು, ಜಗಳವಾಡುವುದು ನಿತ್ಯ ನಡೆಯುತ್ತಿದೆ. ಇದರಿಂದ ನಿವಾಸಿಗಳಿಗೆ ಕಿರಿಕಿರಿಯಾಗುತ್ತಿದೆ ಎಂದು ಕಿಡಿಕಾರಿದರು.

- - - -17ಕೆಡಿವಿಜಿ3:

ದಾವಣಗೆರೆಯಲ್ಲಿ ಬಾರ್‌ ಸ್ಥಳಾಂತರಕ್ಕೆ ಆಗ್ರಹಿಸಿ ವಿನೋಬ ನಗರದ 4ನೇ ಮುಖ್ಯ ರಸ್ತೆ ನಿವಾಸಿಗಳಾದ ಅನುಪಮಾ ರವಿಕುಮಾರ ಇತರರು ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕೋಗಿಲು ನಿರಾಶ್ರಿತರಿಗೆ 5ರ ನಂತರ ವಸತಿ ಭಾಗ್ಯ
ಹೊಸ ವರ್ಷಕ್ಕೆ ಶೇ.40 ಮದ್ಯ ಮಾರಾಟ ಹೆಚ್ಚಳ!