ದಾರುಲ್ ಮುಸ್ತಫಾ ದಶಮಾನೋತ್ಸವ ಪ್ರಚಾರಾರ್ಥ ರಕ್ತದಾನ ಶಿಬಿರ

KannadaprabhaNewsNetwork |  
Published : Jan 20, 2026, 01:15 AM IST
ರಕ್ತದಾನ ಶಿಬಿರ | Kannada Prabha

ಸಾರಾಂಶ

ಶಿಬಿರದಲ್ಲಿ ಸುಮಾರು 33 ಮಂದಿ ರಕ್ತದಾನ ಮಾಡಿದರು. ಕಾರ್ಯಕ್ರಮವನ್ನು ಕಣಚೂರು ಮೆಡಿಕಲ್ ಕಾಲೇಜು ಬ್ಲಡ್ ವಿಭಾಗಾಧಿಕಾರಿ ವೆಂಕಟ್ ರಾಜ್ ಉದ್ಘಾಟಿಸಿದರು.

ಬಂಟ್ವಾಳ: ದಾರುಲ್ ಮುಸ್ತಫಾ ಅಕಾಡೆಮಿ ನಚ್ಚಬೆಟ್ಟು ಸಂಸ್ಥೆಯ ದಶಮಾನೋತ್ಸವ ಪ್ರಚಾರಾರ್ಥ ಸಾರ್ವಜನಿಕ ರಕ್ತದಾನ ಶಿಬಿರವು ಲಯನ್ಸ್ ಕ್ಲಬ್ ಸಹಭಾಗಿತ್ವದಲ್ಲಿ ಸಂಸ್ಥೆಯ ಸಭಾಂಗಣದಲ್ಲಿ ನಡೆಯಿತು.ಶಿಬಿರದಲ್ಲಿ ಪಾಲ್ಗೊಂಡು ಮಾತನಾಡಿದ ಲಯನ್ಸ್ ಕ್ಲಬ್ ಮಂಗಳೂರು ಇದರ ಅಧ್ಯಕ್ಷ ಅಲ್ಪನ್ ಅವರು, ರಕ್ತದಾನ ಮಹಾದಾನವಾಗಿದೆ. ರಕ್ತಕ್ಕೆ ಬೇಡಿಕೆ ರಾಜ್ಯದಾದ್ಯಂತ ತೀವ್ರವಾಗಿರುವಾಗ ಇಂತಹ ಸಂಘ ಸಂಸ್ಥೆಗಳು ಸ್ವಯಂಪ್ರೇರಿತ ರಕ್ತದಾನ ಮಾಡುವುದು ಪ್ರಶಂಸನೀಯ ಎಂದು ಅಭಿಪ್ರಾಯಪಟ್ಟರು.ಶಿಬಿರದಲ್ಲಿ ಸುಮಾರು 33 ಮಂದಿ ರಕ್ತದಾನ ಮಾಡಿದರು. ಕಾರ್ಯಕ್ರಮವನ್ನು ಕಣಚೂರು ಮೆಡಿಕಲ್ ಕಾಲೇಜು ಬ್ಲಡ್ ವಿಭಾಗಾಧಿಕಾರಿ ವೆಂಕಟ್ ರಾಜ್ ಉದ್ಘಾಟಿಸಿದರು. ಅಕ್ಷಯ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಕರೀಂ ಕದ್ಕಾರ್, ಲತೀಫ್ ಪರ್ತಿಪ್ಪಾಡಿ, ರಾಫೀ ಅಹ್ಸನಿ, ಮಅ್‌ರೂಪ್ ಸುಲ್ತಾನಿ, ನೌಶಾದ್ ಸುಲ್ತಾನಿ, ಅಶ್ರಫ್ ವಳಚ್ಚಿಲ್, ಇಸ್ಮಾಯಿಲ್ ಹನೀಫಿ ಮುಂತಾದವರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

‘ಕಾಮ’ಚಂದ್ರರಾವ್‌ ಐಪಿಎಸ್‌ - ಪೊಲೀಸ್‌ ಸಮವಸ್ತ್ರದಲ್ಲೇ ಕಚೇರಿಯಲ್ಲಿ ಮಹಿಳೆಯರ ಜತೆ ಸರಸ
ಪವಿತ್ರಾಗೌಡಗೆ ಮನೆ ಊಟ ಪ್ರಶ್ನಿಸಿಹೈಕೋರ್ಟ್‌ಗೆ ರಾಜ್ಯ ಸರ್ಕಾರ ಅರ್ಜಿ