ರಾಮನಗರ: ಜಿಲ್ಲಾ ಕೇಂದ್ರ ನಗರದ ಬ್ಲ್ಯಾಕ್ ಸ್ಪಾಟ್‌ಗಳಲ್ಲಿ ನಾಗರಿಕರು ತ್ಯಾಜ್ಯ ವಿಲೇವಾರಿ ಮಾಡುವುದಕ್ಕೆ ಕಡಿವಾಣ ಹಾಕಲು ನಗರಸಭೆ ವೇಸ್ಟ್ ಟು ಆರ್ಟ್, ವೇಸ್ಟ್ ಟು ವಂಡರ್ ಎಂಬ ವಿನೂತನ ಕಾರ್ಯಕ್ಕೆ ಮುಂದಾಗಿದೆ.
ಈ ಹಿನ್ನೆಲೆಯಲ್ಲಿ ನಗರಸಭೆ ನೈರ್ಮಲ್ಯ ಕಾಪಾಡುವ ನಿಟ್ಟಿನಲ್ಲಿ ನಗರದಲ್ಲಿರುವ ಬ್ಲ್ಯಾಕ್ ಸ್ಪಾಟ್ ಗಳನ್ನು ತ್ಯಾಜ್ಯ ಮುಕ್ತಗೊಳಿಸಲು ಅವುಗಳನ್ನು ಸೌಂದರ್ಯೀಕರಣಗೊಳಿಸಿ ನಾಗರಿಕರ ಗಮನ ಸೆಳೆಯುವ ಹೊಸ ಪ್ರಯತ್ನ ಇದಾಗಿದೆ.
ಈಗಾಗಲೇ ನಗರದ 15 ಬ್ಲ್ಯಾಕ್ ಸ್ಪಾಟ್ ಗಳ ಸೌಂದರ್ಯೀಕರಣಗೊಳಿಸಲು ಉದ್ದೇಶಿಸಲಾಗಿದೆ. ಸ್ವಚ್ಛತೆ ಕಾರ್ಯ ಕೈಗೊಂಡಿರುವ ಆ ಸ್ಥಳಗಳಲ್ಲಿ ಹಳೆಯ ಟೈರ್, ಟೈಲ್ಸ್ , ಹಾಲೋ ಬ್ಲಾಕ್ಸ್ ಸೇರಿದಂತೆ ಉಪಯೋಗಕ್ಕೆ ಬಾರದ ವಸ್ತುಗಳನ್ನು ಬಳಸಿಕೊಂಡು ಅದಕ್ಕೆ ಬಣ್ಣ ಬಣ್ಣದಿಂದ ಅಲಂಕಾರ ಮಾಡಿ ಅದರೊಳಗೆ ಗಿಡಗಳನ್ನು ನೆಟ್ಟು ಬೆಳೆಸುವುದು.ಸಾರ್ವಜನಿಕರಿಗೆ ಕುಳಿತುಕೊಳ್ಳಲು ಆಸನ ವ್ಯವಸ್ಥೆ ಮಾಡಿರುವುದು. ಸ್ವಚ್ಛತೆ ಹಾಗೂ ದಂಡ ವಿಧಿಸುವ ಬಗ್ಗೆ ಜಾಗೃತಿ ಮೂಡಿಸುವ ಫಲಕಗಳನ್ನು ಅಳವಡಿಸುವುದು ಸೇರಿದಂತೆ ಇನ್ನೂ ಹಲವು ವಿಶಿಷ್ಟ ರೀತಿಯಲ್ಲಿ ಆಕರ್ಷಣೆ ಮತ್ತು ಸೌಂದರ್ಯೀಕರಣ ಮಾಡಲಾಗುತ್ತಿದೆ.
ಬ್ಲ್ಯಾಕ್ ಸ್ಪಾಟ್‌ಗಳನ್ನು ಸುಂದರಗೊಳಿಸುವ ಕೆಲಸಕ್ಕೆ ನಗರಸಭೆ ನೇಮಿಸಿರುವ ಸ್ವಚ್ಛತೆಯ ರಾಯಭಾರಿ ಚಿತ್ರಾರಾವ್ ಅವರ ತಂಡ, ಎನ್ನೆಸ್ಸೆಸ್ ವಿದ್ಯಾರ್ಥಿಗಳ ತಂಡ ಹಾಗೂ ನಗರಸಭೆಯ ಕಮ್ಯುನಿಟಿ ಮೊಬಿಲೈಸರ್‌ಗಳು ತೊಡಗಿದ್ದಾರೆ ಎಂದು ನಗರಸಭೆ ಪರಿಸರ ವಿಭಾಗದ ಎಇಇ ಸುಬ್ರಹ್ಮಣ್ಯ ಕನ್ನಡಪ್ರಭಕ್ಕೆ ಪ್ರತಿಕ್ರಿಯೆ ನೀಡಿದರು.
ಕಸದ ತಿಪ್ಪೆ ತೆರವು, ಸೂಚನಾ ಫಲಕ ಅಳವಡಿಕೆ
ಆ ಸ್ಥಳಗಳಲ್ಲಿ ಸಿಸಿಟಿವಿ ಕ್ಯಾಮರಾ ಅಳವಡಿಸಿ ಕಸ ಎಸೆಯುವವರ ಮೇಲೆ ನಿಗಾ ಕೂಡ ಇಡಲಾಗಿತ್ತು. ಆಗಲೂ ನಿಯಂತ್ರಣಕ್ಕೆ ಬರದಿದ್ದಾಗ ಕಾರ್ಯಾಚರಣೆಗೆ ಇಳಿದ ನಗರಸಭೆ ಸಿಬ್ಬಂದಿ ಕಸ ಎಸೆಯಲು ಬರುವ ನಾಗರಿಕರಿಗೆ ಗುಲಾಬಿ ಹೂ ನೀಡಿದರು. ಆನಂತರ ದಂಡಾಸ್ತ್ರ ಪ್ರಯೋಗ ಪ್ರಾರಂಭಿಸಿದ್ದಾರೆ. ಇಷ್ಟಾದರೂ ರಾತ್ರಿ ಕಳೆದು ಬೆಳಗಾಗುವುದೊರಳಗೆ ಬ್ಲ್ಯಾಕ್ ಸ್ಪಾಟ್ ಗಳಲ್ಲಿ ಕಸದ ರಾಶಿ ತುಂಬಿರುತ್ತದೆ. ಈಗ ನಗರಸಭೆ ಬ್ಲ್ಯಾಕ್ ಸ್ಪಾಟ್ ಗಳ ಸೌಂದರ್ಯೀಕರಣ ಹೆಚ್ಚಿಸಿ ಕಸ ಮುಕ್ತಗೊಳಿಸಲು ಮುಂದಾಗಿದೆ.
ಬ್ಲ್ಯಾಕ್ ಸ್ಪಾಟ್‌ಗಳು ಎಲ್ಲೆಲ್ಲಿವೆ ?
ಕೋಟ್ ................
- ಕೆ.ಶೇಷಾದ್ರಿ, ಅಧ್ಯಕ್ಷರು, ನಗರಸಭೆ, ರಾಮನಗರ
ಕೋಟ್ .............ಸ್ವಚ್ಛ ರಾಮನಗರ ಸಾಕಾರಗೊಳಿಸುವ ನಿಟ್ಟಿನಲ್ಲಿ ಇದೀಗ ಮೊದಲ ಹೆಜ್ಜೆ ಇಡುತ್ತಿದ್ದೇವೆ. ಇದನ್ನು ಮೊದಲ ಆದ್ಯತೆಯಾಗಿಯೂ ಪರಿಗಣಿಸಿದ್ದೇವೆ. ಬೀದಿ ಬದಿಯಲ್ಲಿ ಕಸ ಎಸೆಯುವುದು ನಿಯಂತ್ರಣ ಬಾರದ ಸ್ಥಳಗಳನ್ನು ಗುರುತಿಸಲಾಗಿದೆ. ಈ ಸ್ಥಳಗಳನ್ನು ನಿರುಪಯುಕ್ತ ವಸ್ತುಗಳನ್ನು ಬಳಸಿ ಸುಂದರಗೊಳಿಸುವ ಪರಿಕಲ್ಪನೆಗೆ ಮುಂದಾಗಿದ್ದೇವೆ.
- ಜಯಣ್ಣ, ಆಯುಕ್ತರು, ನಗರಸಭೆ, ರಾಮನಗರ19ಕೆಆರ್ ಎಂಎನ್ 3,4,5,6.ಜೆಪಿಜಿ
3.ಲೂರ್ದು ಮಾತಾ ಚರ್ಚ್ ಎದುರು ಮೊದಲು4.ಲೂರ್ದು ಮಾತಾ ಚರ್ಚ್ ಆನಂತರ
5.ಕೆ.ಶೇಷಾದ್ರಿ (ಶಶಿ), ಅಧ್ಯಕ್ಷರು,ನಗರಸಭೆ, ರಾಮನಗರ.6.ಜಯಣ್ಣ, ಆಯುಕ್ತರು, ನಗರಸಭೆ, ರಾಮನಗರ.