ಕೊಪ್ಪಳ: ರಕ್ತದಾನ ಹಾಗೂ ನೇತ್ರದಾನ ಶ್ರೇಷ್ಠ ಎಂದು ಪಿಡಿಒ ಜಯಲಕ್ಷ್ಮಿ ಹೇಳಿದರು.
ಜಿಲ್ಲಾ ಅಂಧತ್ವ ನಿವಾರಣ ಘಟಕದ ಅಧಿಕಾರಿ ಡಾ. ಪ್ರಕಾಶ ಎಚ್. ಮಾತನಾಡಿ, ಕಾಲಕಾಲಕ್ಕೆ ನೇತ್ರ ತಪಾಸಣೆ ಮಾಡಿಸಿಕೊಳ್ಳುವುದು ಅತ್ಯಂತ ಅವಶ್ಯವಾಗಿದೆ. ಅದರಂತೆ ಸಾರ್ವಜನಿಕರು ತಮ್ಮ ನೇತ್ರಗಳನ್ನು ದಾನ ಮಾಡುವುದು ಮತ್ತು ಅಂಗಾಂಗಳನ್ನು ದಾನ ಮಾಡುವುದು ಅವಶ್ಯಕವಾಗಿದೆ ಎಂದರು.
ಕಾರ್ಯಕ್ರಮ ಉದ್ಘಾಟನೆಯನ್ನು ಗ್ರಾಪಂ ಉಪಾಧ್ಯಕ್ಷೆ ಸುಶೀಲಮ್ಮ ಬಳಗಾನೂರ ನೆರವೇರಿಸಿದರು. ಪ್ರಾಥಮಿಕ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ. ವಿದ್ಯಾಶ್ರೀ ಪಿ.ಕೆ. ಅಧ್ಯಕ್ಷತೆ ವಹಿಸಿದ್ದರು. ಭಾರತೀಯ ರೆಡ್‌ಕ್ರಾಸ್ ಸಂಸ್ಥೆಯ ಕಾರ್ಯದರ್ಶಿ ಡಾ. ಶ್ರೀನಿವಾಸ ಹ್ಯಾಟಿ, ನಿರ್ದೇಶಕರಾದ ಡಾ. ಶಿವನಗೌಡ ಪಾಟೀಲ್, ಡಾ. ವೀರಯ್ಯ ಹಿರೇಮಠ, ಡಾ. ಅನಿತಾ, ಡಾ. ರಾಧಾಕೃಷ್ಣ ರಡ್ಡಿ, ಎಪಿಎಂಸಿ ಮಾಜಿ ಅಧ್ಯಕ್ಷ ಶರಣಪ್ಪ ಸಜ್ಜನ್, ಗ್ರಾಪಂ ಸದಸ್ಯರಾದ ಪಂಪಾಪತಿ ಹಳ್ಳಿಗುಡಿ, ಈರಣ್ಣ ಮಾಳೇಕೊಪ್ಪ, ಕೊಟ್ರೇಶ ಹಳ್ಳಿಕೇರಿ, ಸುನಂದಮ್ಮ ಆರೇರ ಇದ್ದರು. ಸಂಸ್ಥೆಯ ನಿರ್ದೇಶಕ ಡಾ. ಮಂಜುನಾಥ ಸಜ್ಜನ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿ, ನೇತ್ರ ತಪಾಸಣೆಯ ಫಲಾನುಭವಿಗಳು, ಗ್ರಾಪಂ ಸಿಬ್ಬಂದಿ ಇದ್ದರು. ೨೧೦ ಫಲಾನುಭವಿಗಳು ಕಣ್ಣಿನ ಪರೀಕ್ಷೆ ಮಾಡಿಸಿಕೊಂಡರು. ಇದರಲ್ಲಿ ೫೦ಕ್ಕೂ ಹೆಚ್ಚು ಜನ ನೇತ್ರ ಶಸ್ತ್ರಚಿಕಿತ್ಸೆಗೆ ಆಯ್ಕೆಯಾದರು. ಉಳಿದ ಫಲಾನುಭವಿಗಳು ಕನ್ನಡಕಗಳಿಗೆ ಆಯ್ಕೆಯಾದರು. ಭಾರತೀಯ ರೆಡ್‌ಕ್ರಾಸ್ ಸಂಸ್ಥೆಯ ಪಿಆರ್‌ಒ .ದೇವೇಂದ್ರಪ್ಪ ಹಿಟ್ನಾಳ ಕಾರ್ಯಕ್ರಮ ನಿರೂಪಿಸಿದರು.