ರಕ್ತದಾನ ಪುಣ್ಯದ ಕೆಲಸ: ಡಾ.ಎಚ್‌ಬಿ ತಳ್ಳಳ್ಳಿ

KannadaprabhaNewsNetwork |  
Published : Oct 02, 2026, 01:30 AM IST
01ಕೆಪಿಎಲ್ ಎನ್ ಜಿ01 | Kannada Prabha

ಸಾರಾಂಶ

ರಾಷ್ಟ್ರೀಯ ಸ್ವಯಂ ಪ್ರೇರಿತ ರಕ್ತದಾನ ದಿನದ ಅಂಗವಾಗಿ ಏರ್ಪಡಿಸಿದ ರಕ್ತದಾನ ಕಾರ್ಯಕ್ರಮವು ಕೇವಲ ಕಾರ್ಯಕ್ರಮವಾಗಿರದೇ ಪುಣ್ಯದ ಕೆಲಸವಾಗಿದೆ ಎಂದು ತಾಲೂಕು ವೈದ್ಯಾಧಿಕಾರಿ ಡಾ.ಎಚ್.ಬಿ. ತಳ್ಳಳ್ಳಿ ಹೇಳಿದರು.

ಕನ್ಧಡಪ್ರಭ ವಾರ್ತೆ ಲಿಂಗಸುಗೂರು

ರಾಷ್ಟ್ರೀಯ ಸ್ವಯಂ ಪ್ರೇರಿತ ರಕ್ತದಾನ ದಿನದ ಅಂಗವಾಗಿ ಏರ್ಪಡಿಸಿದ ರಕ್ತದಾನ ಕಾರ್ಯಕ್ರಮವು ಕೇವಲ ಕಾರ್ಯಕ್ರಮವಾಗಿರದೇ ಪುಣ್ಯದ ಕೆಲಸವಾಗಿದೆ ಎಂದು ತಾಲೂಕು ವೈದ್ಯಾಧಿಕಾರಿ ಡಾ.ಎಚ್.ಬಿ. ತಳ್ಳಳ್ಳಿ ಹೇಳಿದರು.

ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಯೂತ್ ರೆಡ್ ಕ್ರಾಸ್ ಘಟಕ ಹಾಗೂ ಹಟ್ಟಿ ಚಿನ್ನದ ಗಣಿ ಕಂಪನಿ ನಿ. ಆಸ್ಪತ್ರೆ ಹಟ್ಟಿ ಅವರ ಸಹಯೋಗದಲ್ಲಿ ರಾಷ್ಟ್ರೀಯ ಸ್ವಯಂ ಪ್ರೇರಿತ ರಕ್ತದಾನ ದಿನದ ಅಂಗವಾಗಿ ಏರ್ಪಡಿಸಿದ್ದ ಸ್ವಯಂ ಪ್ರೇರಿತ ರಕ್ತದಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ವಿಜ್ಞಾನ ಎಷ್ಟೇ ಮುಂದುವರೆದರೂ ಕೃತಕ ರಕ್ತ ಉತ್ಪಾದನೆ ಸಾಧ್ಯವಾಗಿಲ್ಲ. ಮಾನವ ದೇಹದಲ್ಲಿ ಉತ್ಪಾದನೆಯಾದ ರಕ್ತವನ್ನು ದಾನ ಮಾಡಬಹುದು. ರಕ್ತದಾನ ಮಾಡುವುದರಿಂದ ಜೀವ ಉಳಿಸಿದ ಸಾರ್ಥಕತೆಯ ಜತೆಗೆ ಆರೋಗ್ಯ ವೖದ್ದಿಯಾಗುವುದು. ಹೃದಯಾಘಾತ, ಕೊಲೆಸ್ಟ್ರಾಲ್ ನಿಯಂತ್ರಣ ಸಹಿತ ಮುಂತಾದ ಅನುಕೂಲಗಳು ರಕ್ತದಾನದಿಂದ ಲಭಿಸುತ್ತವೆ. ವಿದ್ಯಾರ್ಥಿಗಳು, ಯುವಸಮುದಾಯದವರಲ್ಲಿ ರಕ್ತದಾನದ ಮಹತ್ವದ ಕುರಿತು ಅರಿವು ಮೂಡಿಸುವ ಜವಾಬ್ದಾರಿ ನಮ್ಮ ಮೇಲಿದೆ ಎಂದರು.

ರೆಡ್‌ಕ್ರಾಸ್ ಘಟಕದ ಸಂಯೋಜಕ ಆಂಜನೇಯ ರಾಮತ್ನಾಳ ಮಾತನಾಡಿ, ರಕ್ತ ಮಾರಾಟಕ್ಕಿಲ್ಲ, ಆದರೆ ರಕ್ತದಾನ ಮಾಡಬಹುದು. ದಯವೇ ಧರ್ಮದ ಮೂಲ ಎಂಬ ಮಾತನ್ನು ಅರಿತು ದಯೆ ಅಂತಃಕರಣದಿಂದ ರಕ್ತದಾನ ಮಾಡಿ ಜೀವ ಉಳಿಸುವ ಶಕ್ತಿ ವಿದ್ಯಾರ್ಥಿಗಳಲ್ಲಿ ಮೂಡಲಿ ಎನ್ನುವ ಕಾರಣದಿಂದ ರಾಷ್ಟ್ರೀಯ ಸ್ವಯಂ ಪ್ರೇರಿತ ರಕ್ತದಾನ ದಿನದಂದು ವಿದ್ಯಾರ್ಥಿಗಳಲ್ಲಿ ಜಾಗೃತಿ ಉಂಟು ಮಾಡಲು ಈ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.

ಪ್ರಾಂಶುಪಾಲ ಡಾ. ವೆಂಕಟನಾರಾಯಣ ಮಾತನಾಡಿದರು. ಹಟ್ಟಿ ಚಿನ್ನದ ಗಣಿ ಕಂಪನಿ ನಿ. ಆಸ್ಪತ್ರೆಯ ಹಿರಿಯ ವೖದ್ಯಾಧಿಕಾರಿ ಡಾ. ಆನಂದ ಎಂ. ಕೆ ಅಧ್ಯಕ್ಷತೆ ವಹಿಸಿದ್ದರು. ಅಪರ ಜಿಲ್ಲಾ ಆರೋಗ್ಯ ಶಿಕ್ಷಣ ಅಧಿಕಾರಿ ಪ್ರಾಣೇಶ ಜೋಶಿ ಐಕ್ಯೂಎಸಿ ಸಂಯೋಜಕ ಡಾ. ಸಂಗನಗೌಡ ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಹನುಮಂತಪ್ಪ ಹಾಗೂ ಸಹಾಯಕ ಪ್ರಾಧ್ಯಾಪಕ ದೊಡ್ಡಬಸಪ್ಪ ಹುಡೇದಗಡ್ಡಿ ಶಾಮೀದ್ ಅಲಿ ಡಾ. ಹುಲಗಪ್ಪ ಬುದ್ದಿನ್ನಿ ಡಾ. ಮಹಾದೇವಪ್ಪ ನಾಗರಾಳ ಸೇರಿದಂತೆ ಇತರರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕನ್ನಡ ಜೀವಂತ ಭಾಷೆಯಾಗಿಸಲು ಸಂಕಲ್ಪ: ಮೀರಾ ಶಿವಲಿಂಗಯ್ಯ
ಮೈಕ್ರೋ ಫೈನಾನ್ಸ್ ಕಿರುಕುಳ ತಪ್ಪಿಸಿ: ಮಹಾಲಿಂಗೇಗೌಡ