ಕನ್ನಡಪ್ರಭ ವಾರ್ತೆ ರಾಯಚೂರು
ಸ್ಥಳೀಯ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಕೃಷಿ ತಾಂತ್ರಿಕ ಮಹಾವಿದ್ಯಾಲಯ ಹಾಗೂ ಭಾರತೀಯ ಕೃಷಿ ಇಂಜಿನಿಯರ್‌ಗಳ ಸಂಘದ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಆಹಾರ ನಷ್ಟ ಮತ್ತು ಆಹಾರ ವ್ಯರ್ಥ ಕುರಿತು ಅಂತಾರಾಷ್ಟ್ರೀಯ ಜಾಗೃತಿ ಕಾರ್ಯಕ್ರಮ–2026’ ಕ್ಕೆ ಚಾಲನೆ ನೀಡಿ ಮಾತನಾಡಿದರು. ಆಹಾರ ನಷ್ಟ ಮತ್ತು ವ್ಯರ್ಥವು ದೇಶದ ಆಹಾರ ಭದ್ರತೆ, ರೈತರ ಆದಾಯ, ಪರಿಸರ ಹಾಗೂ ಆರ್ಥಿಕತೆಯ ಮೇಲೆ ಪರಿಣಾಮ ಬೀರುವ ಗಂಭೀರ ಸಮಸ್ಯೆಯಾಗಿದೆ. ಕೃಷಿ ಉತ್ಪನ್ನಗಳು ಕೊಯ್ಲಿನಿಂದ ಗ್ರಾಹಕರ ತಟ್ಟೆ ತಲುಪುವವರೆಗೆ ವಿವಿಧ ಹಂತಗಳಲ್ಲಿ ನಷ್ಟವಾಗುತ್ತಿದ್ದು, ಇದನ್ನು ವೈಜ್ಞಾನಿಕ ಹಾಗೂ ತಾಂತ್ರಿಕ ವಿಧಾನಗಳ ಮೂಲಕ ಕಡಿಮೆ ಮಾಡಬೇಕು ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಭಾರತೀಯ ಕೃಷಿ ಇಂಜಿನಿಯರ್‌ಗಳ ಸಂಘದ ಜಿಲ್ಲಾಧ್ಯಕ್ಷ ಅಧ್ಯಕ್ಷ ಡಾ. ಉದಯಕುಮಾರ್ ನಿಡೋಣಿ ಮಾತನಾಡಿ, ಆಹಾರ ನಷ್ಟ ತಡೆಗೆ ಸುಧಾರಿತ ಕೊಯ್ಲು ತಂತ್ರಜ್ಞಾನ, ವೈಜ್ಞಾನಿಕ ಸಂಗ್ರಹಣೆ, ಶೀತ ಸರಪಳಿ ವ್ಯವಸ್ಥೆ, ಸೂಕ್ತ ಪ್ಯಾಕೇಜಿಂಗ್ ಮತ್ತು ಪರಿಣಾಮಕಾರಿ ಸಾರಿಗೆ ವ್ಯವಸ್ಥೆಗಳನ್ನು ಅಳವಡಿಸಿಕೊಳ್ಳಬೇಕು ಎಂದರು.ಮನೆಗಳು, ಹೋಟೆಲ್‌ಗಳು, ಶಾಲೆಗಳು ಹಾಗೂ ಸಾರ್ವಜನಿಕ ಸಮಾರಂಭಗಳಲ್ಲಿ ಅಗತ್ಯವಿರುವಷ್ಟು ಮಾತ್ರ ಆಹಾರ ತಯಾರಿಸುವುದು ಅಗತ್ಯ. ಉಳಿದ ಆಹಾರವನ್ನು ಸಮರ್ಪಕವಾಗಿ ಸಂಗ್ರಹಿಸಿ ಅಗತ್ಯವಿರುವವರಿಗೆ ಹಂಚುವ ಮೂಲಕ ಆಹಾರ ವ್ಯರ್ಥ ತಡೆಗಟ್ಟಬಹುದು. ಹಾಳಾಗುವ ಆಹಾರವನ್ನು ಸಾಧ್ಯವಾದಷ್ಟು ಮರುಬಳಕೆ ಅಥವಾ ಸೂಕ್ತ ರೀತಿಯಲ್ಲಿ ನಿರ್ವಹಿಸುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಮಹಾವಿದ್ಯಾಲಯದ ಪ್ರಾಧ್ಯಾಪಕ ಡಾ.ಯೇಸಪ್ಪ, ವಿವಿಧ ವಿಭಾಗಗಳ ಪ್ರಮುಖರು, ಬೋಧಕ-ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿಗಳು ಇದ್ದರು.