ಜೀವ ಉಳಿಸಲು ರಕ್ತದಾನ ಅತ್ಯಗತ್ಯ: ಡಾ. ಅಜಯರಾಜು

KannadaprabhaNewsNetwork |  
Published : Nov 14, 2026, 02:30 AM IST
ಕಾರ್ಯಕ್ರಮದಲ್ಲಿ ಸಾಧಕರನ್ನು ಸನ್ಮಾನಿಸಲಾಯಿತು.  | Kannada Prabha

ಸಾರಾಂಶ

ಒಬ್ಬ ದಾನಿ ರಕ್ತದಾನ ಮಾಡುವುದರಿಂದ ಮೂವರ ಜೀವವನ್ನು ಉಳಿಸಬಹುದು. ಸಂಕಷ್ಟದಲ್ಲಿರುವವರ ಪ್ರಾಣ ರಕ್ಷಿಸಲು ಪ್ರತಿಯೊಬ್ಬರೂ ರಕ್ತದಾನದ ಕುರಿತ ಭಯವನ್ನು ದೂರಮಾಡಿ ಸ್ವಯಂಪ್ರೇರಿತರಾಗಿ ಮುಂದೆ ಬರಬೇಕು.

ಕನ್ನಡಪ್ರಭ ವಾರ್ತೆ ಗದಗ

ಒಬ್ಬ ದಾನಿ ರಕ್ತದಾನ ಮಾಡುವುದರಿಂದ ಮೂವರ ಜೀವವನ್ನು ಉಳಿಸಬಹುದು. ಸಂಕಷ್ಟದಲ್ಲಿರುವವರ ಪ್ರಾಣ ರಕ್ಷಿಸಲು ಪ್ರತಿಯೊಬ್ಬರೂ ರಕ್ತದಾನದ ಕುರಿತ ಭಯವನ್ನು ದೂರಮಾಡಿ ಸ್ವಯಂಪ್ರೇರಿತರಾಗಿ ಮುಂದೆ ಬರಬೇಕು ಎಂದು ಗದಗ ಐಎಂಎ ಅಧ್ಯಕ್ಷ ಡಾ. ಅಜಯರಾಜು ಹೇಳಿದರು.

ಗದಗ ನಗರದ ನಗರದ ಹಳೇ ಸರಾಫ್ ಬಜಾರ್‌ನ ಜಗದಂಬಾ ದೇವಸ್ಥಾನದ ಸಹಸ್ರಾರ್ಜುನ ಸಮುದಾಯ ಭವನದಲ್ಲಿ, ಸಹಸ್ರಾರ್ಜುನ ಜಯಂತಿ ಅಂಗವಾಗಿ ಎಸ್‌ಎಸ್‌ಕೆ ಸಮಾಜ ಪಂಚ ಕಮಿಟಿ, ತರುಣ ಸಂಘ, ಮಹಿಳಾ ಮಂಡಳ, ಐಎಂಎ ಬ್ಲಡ್ ಬ್ಯಾಂಕ್, ಜಿಲ್ಲಾ ಕುಟುಂಬ ಕಲ್ಯಾಣ ಇಲಾಖೆಯ ಜಿಲ್ಲಾ ಅಂಧತ್ವ ನಿವಾರಣಾ ವಿಭಾಗ ಹಾಗೂ ಕೆ.ಎಚ್. ಪಾಟೀಲ ವೈದ್ಯಕೀಯ ವಿಜ್ಞಾನ ಸಂಸ್ಥೆ (ಜಿಮ್ಸ್) ಸಹಯೋಗದಲ್ಲಿ ಆಯೋಜಿಸಿದ್ದ ಉಚಿತ ಆರೋಗ್ಯ ಮತ್ತು ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.

ಮತ್ತೋರ್ವ ಅತಿಥಿ ಡಾ. ರಾಜಶೇಖರ ಪವಾಡಶೆಟ್ಟರ ಮಾತನಾಡಿ, ರಕ್ತದಾನದ ಬಗ್ಗೆ ಜನರಲ್ಲಿ ಇನ್ನಷ್ಟು ಜಾಗೃತಿ ಮೂಡಿಸಬೇಕಾಗಿದೆ. ರಕ್ತದಾನದ ಮೂಲಕ ಇನ್ನೊಬ್ಬರ ಜೀವ ಉಳಿಸುವುದು ನಿಜವಾದ ಮಾನವೀಯತೆ ಎಂದರು. ಪಂಚ ಕಮಿಟಿ ಗೌರವ ಕಾರ್ಯದರ್ಶಿ ವಿನೋದ ಶಿದ್ಲಿಂಗ ಪ್ರಾಸ್ತಾವಿಕವಾಗಿ ಮಾತನಾಡಿದರು.

ಸಹಸ್ರಾರ್ಜುನ ಜಯಂತಿ ಉಪ-ಸಮಿತಿ ಚೇರ್ಮನ್ ಪ್ರಕಾಶ ಬಾಕಳೆ ಸಾಂದರ್ಭಿಕವಾಗಿ ಮಾತನಾಡಿದರು. ಮಹಿಳಾ ಮಂಡಳದ ಅಧ್ಯಕ್ಷೆ ಸ್ನೇಹಲತಾ ಕಬಾಡಿ ನೇತ್ರ ತಪಾಸಣೆಯ ಕುರಿತು ಮಾತನಾಡಿ, ನಗರದ ಸಂಘ-ಸಂಸ್ಥೆಗಳು ತಮ್ಮ ಪ್ರತಿ ಕಾರ್ಯಕ್ರಮದಲ್ಲೂ ರಕ್ತದಾನದ ಮಹತ್ವದ ಬಗ್ಗೆ ಜಾಗೃತಿ ಮೂಡಿಸಬೇಕು ಎಂದು ಸಲಹೆ ನೀಡಿದರು.

ಜಿಮ್ಸ್ ಆಸ್ಪತ್ರೆಯ ಡಾ. ಹರ್ಷಿತಾ ಮತ್ತು ಡಾ. ರವಿ 127 ಜನರ ನೇತ್ರ ತಪಾಸಣೆ ನಡೆಸಿದರು. ಈ ಪೈಕಿ ಜಿಲ್ಲಾ ಅಂಧತ್ವ ನಿವಾರಣಾ ವಿಭಾಗದ ವತಿಯಿಂದ 52 ಜನರಿಗೆ ಉಚಿತ ಕನ್ನಡಕ ವಿತರಿಸಲಾಯಿತು ಹಾಗೂ 25 ಜನರಿಗೆ ಶಸ್ತ್ರಚಿಕಿತ್ಸೆಗೆ ಶಿಫಾರಸು ಮಾಡಲಾಯಿತು. ನಿವೃತ್ತ ಡಿಎಚ್‌ಒ ಡಾ. ಪಾಂಡುರಂಗಸಾ ಕಬಾಡಿ 48 ಜನರಿಗೆ ಬಿಪಿ ಮತ್ತು ಶುಗರ್ ತಪಾಸಣೆ ನಡೆಸಿದರು. ಇದೇ ಸಂದರ್ಭ ಶಿಬಿರದಲ್ಲಿ ಸೇವೆ ಸಲ್ಲಿಸಿದ ಡಾ. ಅಜಯರಾಜು, ಡಾ. ರಾಜಶೇಖರ ಪವಾಡಶೆಟ್ಟರ, ಡಾ. ಹರ್ಷಿತಾ ಹಾಗೂ ಡಾ. ರವಿ ಅವರನ್ನು ಸನ್ಮಾನಿಸಲಾಯಿತು.

ಸಮಾಜದ ಅಧ್ಯಕ್ಷ ಫಕೀರಸಾ ಬಾಂಡಗೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ರಾಜು ಬದಿ, ರೋಟರಿ ಕ್ಲಬ್ ಮಾಜಿ ಅಧ್ಯಕ್ಷ ದತ್ತುಸಾ ಬೇವಿನಕಟ್ಟಿ, ಶ್ರೀನಿವಾಸ ಬಾಂಡಗೆ, ಪರಶುರಾಮ ಬದಿ, ಶಂಕರಸಾ ಕಲಬುರ್ಗಿ, ವಿಶ್ವನಾಥಸಾ ಸೋಳಂಕಿ, ಷಣ್ಮುಖ ಪೂಜಾರಿ, ನಾಗರಾಜ ಖೋಡೆ, ರೇಣುಕಾ ಕಲಬುರ್ಗಿ, ಸುಮನ ಖಟವಟೆ, ಕಸ್ತೂರಿಬಾಯಿ ಬಾಂಡಗೆ, ಹೇಮಾಬಾಯಿ ಬೇವಿನಕಟ್ಟಿ, ಭಾವನಾ ಬಾಂಡಗೆ ಸೇರಿದಂತೆ ಸಮಾಜದ ಮುಖಂಡರು ಉಪಸ್ಥಿತರಿದ್ದರು. ಬಾಬು ಬಾಕಳೆ ನಿರೂಪಿಸಿದರು ಹಾಗೂ ಶ್ರೀಕಾಂತ ಬಾಕಳೆ ವಂದಿಸಿದರು.ರಕ್ತಕ್ಕೆ ಪರ್ಯಾಯವಾಗಿ ಕೃತಕ ವಸ್ತುವನ್ನು ತಯಾರಿಸಲು ಸಾಧ್ಯವಿಲ್ಲ, ಮನುಷ್ಯನ ರಕ್ತವನ್ನು ಮನುಷ್ಯನೇ ನೀಡಬೇಕು. ಒಬ್ಬ ವ್ಯಕ್ತಿಯ ರಕ್ತದಾನವು ಮೂರು ಕುಟುಂಬಗಳ ಕಣ್ಣೀರನ್ನು ಒರೆಸಿ, ಹೊಸ ಬದುಕು ನೀಡುವ ಶಕ್ತಿ ಹೊಂದಿದೆ. ಭಯ ಬಿಟ್ಟು ರಕ್ತದಾನ ಮಾಡಿ, ಮಾನವೀಯತೆ ಮೆರೆಯಿರಿ.

ಡಾ. ಅಜಯರಾಜು, ಅಧ್ಯಕ್ಷರು, ಐಎಂಎ ಗದಗ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಕ್ಕಳ ಸರ್ವತೋಮುಖ ಪ್ರಗತಿಗೆ ಶ್ರಮಿಸಿ
ಎಸಿಯಾಗಿ ಪದೋನ್ನತಿ ಹೊಂದಿದ ತಹಸೀಲ್ದಾರ್‌ ಬೋಸಗಿ