ರಕ್ತದಾನ ಪುಣ್ಯದ ಕಾರ್ಯ: ಡಾ. ಆಜ್ಞಾ ನಾಯಕ

KannadaprabhaNewsNetwork |  
Published : Feb 04, 2025, 12:30 AM IST
ಕಲ್ಲಬ್ಬೆಯಲ್ಲಿ ನಾಮಧಾರಿ ಸಂಘದಿಂದ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ರಕ್ತದಾನಿಗಳಿಗೆ ಪ್ರಮಾಣಪತ್ರ ವಿತರಿಸಲಾಯಿತು. | Kannada Prabha

ಸಾರಾಂಶ

ವಿದ್ಯಾರ್ಥಿಗಳು ಶಿಕ್ಷಣದ ಜತೆಯಲ್ಲಿ ಕೃಷಿ, ಸಾಮಾಜಿಕ ಸೇವೆ, ಸ್ಪರ್ಧಾತ್ಮಕ ಪರೀಕ್ಷೆ ಎದುರಿಸುವಲ್ಲೂ ಮುಂಚೂಣಿಯಲ್ಲಿರಬೇಕು.

ಕುಮಟಾ: ಸ್ವಯಂಪ್ರೇರಿತರಾಗಿ ರಕ್ತದಾನದಂಥ ಪುಣ್ಯದ ಕಾರ್ಯವನ್ನು ಗ್ರಾಮೀಣ ಭಾಗದಲ್ಲಿ ಹಮ್ಮಿಕೊಂಡು ಯಶಸ್ವಿಗೊಳಿಸಿದ ನಾಮಧಾರಿ ಸಂಘಟನೆಯ ಕಾರ್ಯ ಎಲ್ಲರಿಗೆ ಮಾದರಿಯಾಗಿದೆ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ. ಆಜ್ಞಾ ನಾಯಕ ತಿಳಿಸಿದರು.ಕಲ್ಲಬ್ಬೆಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಮೂರೂರು- ಕಲ್ಲಬ್ಬೆಯ ಆರ್ಯ ಈಡಿಗ ನಾಮಧಾರಿ ಸಂಘದಿಂದ ಹಮ್ಮಿಕೊಂಡಿದ್ದ ರಕ್ತದಾನ ಶಿಬಿರದಲ್ಲಿ ರಕ್ತದಾನ ಮಾಡಿವರಿಗೆ ಪ್ರಮಾಣಪತ್ರ ವಿತರಿಸಿ ಮಾತನಾಡಿದರು. ಅಧ್ಯಕ್ಷತೆ ವಹಿಸಿದ್ದ ನಾಮಧಾರಿ ಸಂಘದ ಅಧ್ಯಕ್ಷ ಗಣಪತಿ ನಾಯ್ಕ, ಪ್ರಥಮ ಬಾರಿಗೆ ಈ ವಲಯದಲ್ಲಿ ರಕ್ತದಾನ ಶಿಬಿರ ಆಯೋಜನೆ ಯಶಸ್ವಿಯಾಗಿದ್ದು ಖುಷಿ ಮತ್ತು ಸಾರ್ಥಕತೆ ತಂದಿದೆ. ತುರ್ತು ಸಂದರ್ಭದಲ್ಲಿ ರಕ್ತಕ್ಕೆ ಪರ್ಯಾಯ ಜೀವದ್ರವ್ಯ ಬೇರೆ ಇಲ್ಲ. ವಿದ್ಯಾರ್ಥಿಗಳು ಶಿಕ್ಷಣದ ಜತೆಯಲ್ಲಿ ಕೃಷಿ, ಸಾಮಾಜಿಕ ಸೇವೆ, ಸ್ಪರ್ಧಾತ್ಮಕ ಪರೀಕ್ಷೆ ಎದುರಿಸುವಲ್ಲೂ ಮುಂಚೂಣಿಯಲ್ಲಿರಬೇಕು. ಮುಂದಿನ ವೃತ್ತಿ ಜೀವನ ಕಾಲಘಟ್ಟದಲ್ಲಿ ಸಾಮಾಜಿಕ ಚಟುವಟಿಕೆಗಳಲ್ಲಿಯೂ ಸಕ್ರಿಯರಾಗಬೇಕು ಎಂದರು. ನಾಮಧಾರಿ ಸಂಘದ ಅಧ್ಯಕ್ಷ ಗಣಪತಿ ನಾಯ್ಕ, ಕಲ್ಲಬ್ಬೆ ಪಂಚಾಯಿತಿ ಅಧ್ಯಕ್ಷೆ ಭಾರತಿ ನಾಯ್ಕ, ವೈದ್ಯಾಧಿಕಾರಿ ಡಾ. ವಿಜೇತ ಸಹಿತ ೧೫ ಮಂದಿ ಯುವಕರು ರಕ್ತದಾನ ಮಾಡಿದರು. ಉನ್ನತ ವ್ಯಾಸಂಗಕ್ಕಾಗಿ ತೆರಳುತ್ತಿರುವ ಕಲ್ಲಬ್ಬೆ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ವಿಜೇತ ಅವರನ್ನು ಸನ್ಮಾನಿಸಲಾಯಿತು. ಬಳಿಕ ಬೊಗರಿಬೈಲದ ಸಮುದಾಯ ಭವನದಲ್ಲಿ ಕಾರ್ಯಕ್ರಮ ಮುಂದುವರಿಸಿ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿಯಲ್ಲಿ ಉತ್ತಮ ಅಂಕ ಗಳಿಸಿದ ೧೭ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು. ಕಾರ್ಯಕ್ರಮವನ್ನು ಅಘನಾಶಿನಿ ಪ್ರೌಢಶಾಲೆ ಮುಖ್ಯಶಿಕ್ಷಕಿ ಮಮತಾ ಆರ್. ನಾಯ್ಕ ಉದ್ಘಾಟಿಸಿದರು. ಪೂಜಾ ಸಂಗಡಿಗರು ಪ್ರಾರ್ಥಿಸಿದರು. ಜಯಂತ ನಾಯ್ಕ ಪ್ರಾಸ್ತಾವಿಕವಾಗಿ ಮಾತನಾಡಿದರು. ರಮಣ ನಾಯ್ಕ, ತಿಮ್ಮಪ್ಪ ನಾಯ್ಕ, ನಾಗೇಂದ್ರ ನಾಯ್ಕ, ಕೃಷ್ಣ ನಾಯ್ಕ, ಜನಾರ್ದನ ನಾಯ್ಕ ಇತರರು ಇದ್ದರು. ವಿನಾಯಕ ನಾಯ್ಕ ನಿರ್ವಹಿಸಿದರು.

ಜಮೀನಿಗೆ ಕೃಷಿ ಇಲಾಖೆ ತಾಂತ್ರಿಕ ವ್ಯವಸ್ಥಾಪಕರ ಭೇಟಿ

ಗೋಕರ್ಣ: ಮಿರ್ಜಾನ ಹೋಬಳಿಯ ಐಗಳಕುರ್ವೆ ಗ್ರಾಮದಲ್ಲಿ ಉದ್ದು, ಶೇಂಗಾ ಬೆಳೆದ ಪ್ರದೇಶಕ್ಕೆ ಕೃಷಿ ಇಲಾಖೆ ಸಹಾಯಕ ತಾಂತ್ರಿಕ ವ್ಯವಸ್ಥಾಪಕ ಕೆ. ಮಂಜುನಾಥ ಹೊರಕೇರಿ ಅವರು ಭೇಟಿ ನೀಡಿ ಪರಿಶೀಲಿಸಿದರು.

ಉದ್ದಿನ ಬೆಳೆಗೆ ಅಲ್ಲಲ್ಲಿ ಎಲೆ ತಿನ್ನುವ ಮತ್ತು ಕಾಂಡಕೊರಕ ಹುಳುವಿನ ಬಾಧೆ ಕಂಡುಬಂದಿದೆ. ಈ ಕುರಿತು ರೈತರಿಂದ ಮಾಹಿತಿ ಪಡೆದರು.ಈ ಕೀಟವನ್ನು ಹತೋಟಿ ಮಾಡಲು ಜೈವಿಕ ಕೀಟನಾಶಕವಾದ ಅಜಾಡಿರಿಕ್ಷನ್(ಬೇವಿನ ಎಣ್ಣಿ) ೩ ಎಂಎಲ್ ಒಂದು ನೀರಿಗೆ ಬೇರಿಸಿ ಸಿಂಪಡಿಸಬೇಕು.ರಾಸಾಯನಿಕ ಕೀಟನಾಶಕಗಳಾದ ಕ್ಲೋರೊಪೆರಿಪಸ್ ೨೦ ಇಸಿ. ೧.೫- ೨ ಎಂಎಲ್ ಒಂದು ನೀರಿಗೆ ಬೇರಿಸಿ ಮಿಶ್ರಣ ಮಾಡಿ ಎಲೆ ಮತ್ತು ಕಾಂಡಗಳ ಮೇಲೆ ಸಿಂಪಡಿಸುವುದರಿಂದ ಕೀಟವನ್ನು ಹತೋಟಿ ಮಾಡಬಹುದು ಎಂದು ಸಲಹೆ ನೀಡಿದರು.ಈ ವೇಳೆ ರೈತರಾದ ರಾಮಚಂದ್ರ ಪಟಗಾರ, ಉದಯ ದೇಶಭಂಡಾರಿ ಮಾತನಾಡಿ, ಕೃಷಿ ಇಲಾಖೆಯಿಂದ ಶೇಂಗಾ ಮತ್ತು ಉದ್ದಿನ ಬೀಜ ಸಹಾಯಧನದಲ್ಲಿ ಪಡೆದು ಬಿತ್ತನೆ ಮಾಡಿದ್ದೇವೆ. ಜಮೀನಿನ ಸುತ್ತಲೂ ತಂತಿ ಬೇಲಿ ಅಳವಡಿಸಿ ಬಿತ್ತನೆ ಮಾಡಲಾಗಿದೆ. ಬೆಳೆಯು ಚೆನ್ನಾಗಿ ಬಂದಿದೆ ಎಂದರು.ರೈತರಾದ ಸುರೇಶ ದೇಶಬಂಡಾರಿ, ಮೋಹನ ಬಾಗ್ಲು ಪಟಗಾರ, ರೋಹಿದಾಸ ದೇಶಬಂಡಾರಿ, ಕೃಷಿ ಇಲಾಖೆ ಸಿಬ್ಬಂದಿ ಉಪಸ್ಥಿತರಿದ್ದರು.

PREV

Recommended Stories

ಮಲೆನಾಡು, ಕರಾವಳಿಯಲ್ಲಿ ಮಳೆ : ಜನಜೀವನ ಅಸ್ತವ್ಯಸ್ತ
ಚಿತ್ತಾಪುರದಲ್ಲಿ ನ.2ರಂದು ಪಥ ಸಂಚಲನ: ಅನುಮತಿ ಕೋರಿ ಹೊಸದಾಗಿ ಅರ್ಜಿ