ರಕ್ತದಾನ ಮೌಲ್ಯಯುತವಾದದ್ದು, ಪ್ರತಿಯೊಬ್ಬರೂ ರಕ್ತದ ಗುಂಪು ತಿಳಿಯಬೇಕು: ಆಲಂಗೂರು ಮಂಜುನಾಥ್

KannadaprabhaNewsNetwork |  
Published : Apr 20, 2025, 01:53 AM IST
19ಕೆಎಂಎನ್ ಡಿ13 | Kannada Prabha

ಸಾರಾಂಶ

ಎಲ್ಲರಿಗೂ ರಕ್ತದ ಬಣ್ಣ ತಿಳಿದಿರುತ್ತದೆ. ಆದರೆ, ಪ್ರತಿಯೊಬ್ಬರಿಗೂ ತಮ್ಮ ದೇಹದ ರಕ್ತ ಯಾವ ಗುಂಪಿಗೆ ಸೇರಿದೆ ಎಂದು ತಿಳಿದಿರಬೇಕಾಗಿದೆ. ದೇಹದಲ್ಲಿ ರಕ್ತದ ಕೊರತೆಯಾದರೆ ಆರೋಗ್ಯದಲ್ಲಿ ಏರುಪೇರಾಗುತ್ತದೆ. ಇಂತಹ ಸಂದರ್ಭದಲ್ಲಿ ರೋಗಿಗಳಿಗೆ ಅವಶ್ಯಕವಾಗಿರುವ ರಕ್ತವನ್ನು ನೀಡಲು ರಕ್ತದಾನ ಮಾಡುವುದು ಅಗತ್ಯ.

ಕನ್ನಡಪ್ರಭ ವಾರ್ತೆ ಹಲಗೂರು

ದಾನಕ್ಕಿಂತ ರಕ್ತದಾನ ಮೌಲ್ಯಯುತವಾಗಿದೆ. ಪ್ರತಿಯೊಬ್ಬರು ತಮ್ಮ ರಕ್ತದ ಗುಂಪು ತಿಳಿದು ರಕ್ತದಾನ ಮಾಡಿ ರೋಗಿಯ ಜೀವ ಉಳಿಸುವಂತೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಅಲಂಗೂರ್ ಮಂಜುನಾಥ್ ವಿದ್ಯಾರ್ಥಿಗಳಿಗೆ ಕರೆ ನೀಡಿದರು.

ಲಯನ್ಸ್ ಕ್ಲಬ್‌ನಿಂದ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ರಕ್ತದ ಗುಂಪು ತಪಾಸಣೆ ಮಾಡುವ ಕಾರ್ಯಕ್ರಮದಲ್ಲಿ ಮಾತನಾಡಿ, ನಿಮಗೆ ಯಾರೇ ಹತ್ತಿರದವರಿರಲಿ ಅಥವಾ ಸ್ನೇಹಿತರಾಗಲಿ ತೊಂದರೆಯಲ್ಲಿದ್ದಾಗ ಅವರಿಗೆ ಉಪಯೋಗವಾಗುವಂತಹ ವಸ್ತುಗಳನ್ನು ದಾನ ಮಾಡಬಹುದು. ರಕ್ತದಾನದಿಂದ ಮಾತ್ರ ಜೀವ ಉಳಿಸುವ ಕಾರ್ಯ ಮಾಡಬಹುದು ಎಂದರು.

ಎಲ್ಲರಿಗೂ ರಕ್ತದ ಬಣ್ಣ ತಿಳಿದಿರುತ್ತದೆ. ಆದರೆ, ಪ್ರತಿಯೊಬ್ಬರಿಗೂ ತಮ್ಮ ದೇಹದ ರಕ್ತ ಯಾವ ಗುಂಪಿಗೆ ಸೇರಿದೆ ಎಂದು ತಿಳಿದಿರಬೇಕಾಗಿದೆ. ದೇಹದಲ್ಲಿ ರಕ್ತದ ಕೊರತೆಯಾದರೆ ಆರೋಗ್ಯದಲ್ಲಿ ಏರುಪೇರಾಗುತ್ತದೆ. ಇಂತಹ ಸಂದರ್ಭದಲ್ಲಿ ರೋಗಿಗಳಿಗೆ ಅವಶ್ಯಕವಾಗಿರುವ ರಕ್ತವನ್ನು ನೀಡಲು ರಕ್ತದಾನ ಮಾಡುವುದು ಅಗತ್ಯ ಎಂದರು.

ತುರ್ತು ಸಮಯದಲ್ಲಿ ರೋಗಿಯ ರಕ್ತದ ಗುಂಪು ತಿಳಿದಿದ್ದರೆ ಬಹುಬೇಗ ಜೀವ ಉಳಿಸಲು ಸಹಾಯವಾಗುತ್ತದೆ. ಈಗ ಒಬ್ಬ ವ್ಯಕ್ತಿಯು ತನ್ನ ಜೀವನ ರೂಪಿಸುವ ಹುದ್ದೆಗೆ ಸೇರಲು ಶೈಕ್ಷಣಿಕ ದಾಖಲೆ ಜೊತೆಗೆ ಶಾರೀರಿಕ ದಾಖಲೆ ನೀಡುವುದು ಅನಿವಾರ್ಯವಾಗಿದೆ. ಲಯನ್ಸ್ ಸಂಸ್ಥೆ ವಿದ್ಯಾರ್ಥಿಗಳ ರಕ್ತದ ಗುಂಪು ಪರೀಕ್ಷೆಗೆ ಮುಂದಾಗಿರುವುದು ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಲಯನ್ಸ್ ಕ್ಲಬ್‌ ಅಧ್ಯಕ್ಷ ಎನ್.ಕೆ.ಕುಮಾರ್ ಮಾತನಾಡಿ, ಸಂಸ್ಥೆ ವತಿಯಿಂದ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ ಎಲ್ಲಾ ವಿದ್ಯಾರ್ಥಿಗಳಿಗೂ ಸಹ ರಕ್ತದ ಗುಂಪನ್ನು ತಪಾಸಣೆ ನಡೆಸಿ ಅವರಿಗೆ ಅವರ ರಕ್ತದ ಗುಂಪಿನ ಗುರುತಿನ ಚೀಟಿ ನೀಡಿದರು.

ಈ ವೇಳೆ ಕಾಲೇಜಿನ ಗುರುಪ್ರಸಾದ್, ಸೀಮಾ ಕೌಸರ್, ತಾರಾ ಜಯಲಕ್ಷ್ಮಿ, ಲಯನ್ಸ್ ಕ್ಲಬ್ಬ್ ಡಿ.ಎಲ್.ಮಾದೇಗೌಡ, ಎಲ್. ಶಿವರಾಜು ಮತ್ತು ಹಲಗೂರು ಪ್ರಾಥಮಿಕ ಆರೋಗ್ಯ ಕೇಂದ್ರದ ಪ್ರಯೋಗ ಶಾಲಾ ತಾಂತ್ರಿಕ ಅಧಿಕಾರಿ ಸಿ.ಸುನೀಲ್ ಕುಮಾರ್, ಲಕ್ಷ್ಮಣ್ ಹಿರೇಕುರುಬರ್, ರತ್ನಮ್ಮ ಪಿ, ತೇಜ್ ಮತ್ತು ಸಮುದಾಯ ಆರೋಗ್ಯ ಅಧಿಕಾರಿಗಳು ಇತರರು ಇದ್ದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ