ಕನ್ನಡಪ್ರಭವಾರ್ತೆ ತುರುವೇಕೆರೆ
ಪಟ್ಟಣದ ಕನ್ನಡ ಭವನದಲ್ಲಿ ಭಾರತೀಯ ರೆಡ್ ಕ್ರಾಸ್ ತಾಲೂಕು ಘಟಕ ದಿಂದ ಹಮ್ಮಿಕೊಂಡಿದ್ದ ರೆಡ್ ಕ್ರಾಸ್ ದಿನಾಚರಣೆಯಲ್ಲಿ ಮಾತನಾಡಿದ ಅವರು, ರಕ್ತದಾನದ ಬಗ್ಗೆ ಯುವಕರಲ್ಲಿ ಅರಿವು ಮೂಡಿಸಿ ಸ್ವಯಂ ಪ್ರೇರಿತ ರಕ್ತದಾನ ನೀಡುವಂತೆ ಪ್ರೇರೇಪಿಸಬೇಕಿದೆ. ರೆಡ್ ಕ್ರಾಸ್ ಸಂಸ್ಥೆ ಮೂಲ ಉದ್ದೇಶ ತುರ್ತು ಸಂದರ್ಭದಲ್ಲಿ ಅವಶ್ಯಕರಿಗೆ ರಕ್ತದಾನ ನೀಡುವುದಾಗಿದೆ ಎಂದರು. ನಿವೃತ್ತ ಪ್ರಾಧ್ಯಾಪಕ ಪ್ರೊ. ಪುಟ್ಟರಂಗಪ್ಪ ಮಾತನಾಡಿ ಸೇವೆಗಾಗಿ ಇರುವ ಸಂಸ್ಥೆಯೇ ಭಾರತೀಯ ರೆಡ್ ಕ್ರಾಸ್ ಸಂಸ್ಥೆ. ರಾಷ್ಟ್ರದಲ್ಲಿ ರಾಷ್ಟ್ರಪತಿಗಳು ಅಧ್ಯಕ್ಷರಾಗಿದ್ದರೆ. ರಾಜ್ಯದಲ್ಲಿ ರಾಜ್ಯಪಾಲರು ಅಧ್ಯಕ್ಷರಾಗಿರುತ್ತಾರೆ. ರೆಡ್ ಕ್ರಾಸ್ ಸಂಸ್ಥೆ ತನ್ನ ಸೇವೆಯಿಂದಾಗಿ ಮೂರು ಬಾರಿ ನೋಬೆಲ್ ಪ್ರಶಸ್ತಿ ಲಭಿಸಿದೆ. ಆದ್ದರಿಂದ ತಾಲೂಕು ರೆಡ್ ಕ್ರಾಸ್ ಸಂಸ್ಥೆ ಹೆಚ್ಚಿನ ಸೇವಾಕಾರ್ಯ ಕೈಗೊಳ್ಳಲಿ ಹಾಗೂ ತಾಲೂಕಿನಲ್ಲಿಯೂ ಬ್ಲಡ್ ಬ್ಯಾಂಕ್ ತೆರೆಯಲಿ ಎಂದು ಹಾರೈಸಿದರು. ಈ ಸಂದರ್ಭದಲ್ಲಿ ಅತೀ ಹೆಚ್ಚು ಬಾರಿ ರಕ್ತದಾನ ಮಾಡಿದ ಲ. ಟಿ.ಸಿ. ಸುನಿಲ್ ಬಾಬು, ಕೆ.ಎಸ್.ಶ್ರೀನಿವಾಸ್ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳಾದ ಶಶಾಂಕ್, ಶೋಭಿತ್ ರವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಚೇರ್ಮನ್ ಡಿ.ಕೆ.ನಾಗರಾಜಯ್ಯ, ಸ್ವಾಗತ ಸಮಿತಿ ಗೀತಾ ಸುರೇಶ್, ಲ.ಶಿವಾನಂದ ಸೇರಿದಂತೆ ರೆಡ್ ಕ್ರಾಸ್ ಸಂಸ್ಥೆ ಹಾಗೂ ವಿವಿಧ ಸಂಸ್ಥೆಯ ಪದಾಧಿಕಾರಿಗಳು ಇದ್ದರು.