ಹೊಸಕೋಟೆ: ಪುಷ್ಪಾ ಸಿನಿಮಾ ಸ್ಟೈಲ್ ನಲ್ಲಿ ರಕ್ತ ಚಂದನದ ತುಂಡುಗಳನ್ನು ಕಳ್ಳ ಸಾಗಣೆ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಹೊಸಕೋಟೆ ಪೊಲೀಸರು ಬಂಧಿಸಿದ್ದಾರೆ.
ಬೆಂಗಳೂರು ಹೊರವಲಯದ ಮೀಸಲು ಅರಣ್ಯ ಪ್ರದೇಶ ಹಾಗೂ ಆಂಧ್ರಪ್ರದೇಶದ ಗಡಿ ಪ್ರದೇಶಗಳಲ್ಲಿ ಪುಷ್ಪ ಸಿನಿಮಾ ರೀತಿ ರಕ್ತ ಚಂದನ ಕದಿಯಲು ಪ್ರಯತ್ನಿಸಿ ಈಗ ಪೊಲೀಸರ ಅತಿಥಿಯಾಗಿದ್ದಾರೆ. ವಾಹನಗಳಲ್ಲಿ ಮಧ್ಯರಾತ್ರಿ ತಮ್ಮ ತಂಡದೊಂದಿಗೆ ತೆರಳಿ ರಕ್ತ ಚಂದನ ಕದ್ದಿದ್ದಾರೆ. ಅರಣ್ಯ ಅಧಿಕಾರಿಗಳು ಹಾಗೂ ಚೆಕ್ ಪೋಸ್ಟ್ ಗಳಲ್ಲಿರುವ ಅಧಿಕಾರಿಗಳ ಕಣ್ತಪ್ಪಿಸಿ ಶ್ರೀಗಂಧ ಹಾಗೂ ರಕ್ತ ಚಂದನದ ವಾಸನೆ ಬರದಂತೆ ವಾಹನಗಳಲ್ಲಿ ಕೋಳಿ, ಕುರಿಗಳನ್ನು ತುಂಬಿಕೊಂಡು ಮರದ ದಿಮ್ಮಿಗಳ ಮಧ್ಯದಲ್ಲಿ ರಕ್ತ ಚಂದನ ಮತ್ತು ಶ್ರೀಗಂಧದ ತುಂಡುಗಳನ್ನು ಸಾಗಿಸುತ್ತಿದ್ದರು. ಬೆಂಗಳೂರು ಹಾಗೂ ಆಂಧ್ರಪ್ರದೇಶದ ವಿಶಾಖಪಟ್ಟಣದ ಮೂಲದ ಗಿರಾಕಿಗಳಿಗೆ ಮಾರಾಟ ಮಾಡುತ್ತಿದ್ದರು ಎಂದು ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ ತಿಳಿಸಿದರು.
ಕಾರ್ಯಾಚರಣೆಯಲ್ಲಿ ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಪುರುಷೋತ್ತಮ್ ಮಾರ್ಗದರ್ಶನದಲ್ಲಿ ಡಿವೈಎಸ್ಪಿ ಶಂಕರ್ ಗೌಡ ಪಾಟೀಲ್, ಇನ್ಸ್ ಪೆಕ್ಟರ್ ಅಶೋಕ್ ಸೇರಿದಂತೆ ಅಪರಾಧ ವಿಭಾಗದ ಎಲ್ಲಾ ಸಿಬ್ಬಂದಿಗಳನ್ನು ಎಸ್ಪಿ ಮಲ್ಲಿಕಾರ್ಜುನ್ ಬಾಲದಂಡಿ ಅಭಿನಂದಿಸಿದ್ದಾರೆ.ಫೋಟೋ: 19 ಹೆಚ್‌ಎಸ್‌ಕೆ 1ಹೊಸಕೋಟೆ ಪೊಲೀಸರು ರಕ್ತಚಂದನ ತುಂಡುಗಳ್ಳರನ್ನು ಬಂಧಿಸಿ ಮಾಲು ವಶಪಡಿಸಿಕೊಂಡಿದ್ದಾರೆ.