)
ಶಿವಮೊಗ್ಗ: ಸ್ನೇಹಿತರ ಜೊತೆಗೆ ಇದ್ದಾಗ ರೌಡಿಶೀಟರ್ ಮೇಲೆ ದುರ್ಷರ್ಮಿಗಳು ಮಾರಕಾಸ್ತ್ರಗಳಿಂದ ದಾಳಿ ನಡೆಸಿ ಹತ್ಯೆ ಮಾಡಿರುವ ಘಟನೆ ಭಾನುವಾರ ನಡೆದಿದೆ. ಶಿವಮೊಗ್ಗ ತಾಲೂಕಿನ ರಾಮಿನಕೊಪ್ಪ ಬಳಿ ಈ ಘಟನೆ ನಡೆದಿದ್ದು, ಶಿವಮೊಗ್ಗ ನಗರದ ಸಿಗೇಹಟ್ಟಿ- ಭಾರತಿ ಕಾಲೋನಿ ನಿವಾಸಿಯಾದ ಕುಳ್ಳಿ ಕಿರಣ್ (32) ಕೊಲೆಯಾದ ರೌಡಿಶೀಟರ್ ಎಂದು ಗುರುತಿಸಲಾಗಿದೆ.
ಘಟನಾ ಸ್ಥಳ ಹಾಗೂ ಆಸ್ಪತ್ರೆಗೆ ಪೊಲೀಸರು ಭೇಟಿ ಪರಿಶೀಲನೆ ನಡೆಸಿದ್ದಾರೆ. ವೈಯಕ್ತಿಕ ಹಣಕಾಸು ವ್ಯವಹಾರದ ಹಿನ್ನೆಲೆ ಕೊಲೆ ನಡೆದ ಶಂಕೆ ಇದೆ ಎಂದು ಶಿವಮೊಗ್ಗ ಎಸ್ಪಿ ನಿಖಿಲ್ ತಿಳಿಸಿದ್ದಾರೆ. ಘಟನೆ ಸಂಬಂಧ ಶಿವಮೊಗ್ಗದ ತುಂಗಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಿರಣ್ ಹತ್ಯೆ ಆರೋಪಿಗಳ ಬಂಧನಕ್ಕೆ ತಂಡ ರಚನೆ: ಎಸ್ಪಿಶಿವಮೊಗ್ಗ: ಕೊಲೆಯಾದ ಕಿರಣ್ ಜೊತೆ ಹಣಕಾಸಿನ ವಿಚಾರಕ್ಕೆ ಮಾತುಕತೆ ಮಾಡಿ, ಬಳಿಕ ದಾಳಿ ಮಾಡಿದ್ದಾರೆ. ಬೈಕ್ ನಲ್ಲಿ ಬಂದಂತ 2-3 ಜನ ದಾಳಿ ಮಾಡಿದ ಮಾಹಿತಿ ಲಭ್ಯವಾಗಿದೆ. ಕೇಸ್ ಸಂಬಂಧ ಟೀಮ್ ಮಾಡಿದ್ದೇವೆ. ಆರೋಪಿಗಳನ್ನು ಬಂಧನ ಮಾಡುತ್ತೇವೆ ಎಂದು ಎಸ್ಪಿ ಬಿ.ನಿಖಿಲ್ ಹೇಳಿದರು.ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಿವಮೊಗ್ಗದ ತುಂಗಾನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕೊಲೆ ನಡೆದಿದೆ. ರಾಮಿನಕೊಪ್ಪದಲ್ಲಿ ಕುಳ್ಳಿ ಕಿರಣ್ ಎಂಬ ವ್ಯಕ್ತಿಯ ಕೊಲೆಯಾಗಿದೆ. ಮಾರಕಾಸ್ತ್ರಗಳಿಂದ ಮುಖ- ಎದೆಯ ಭಾಗಕ್ಕೆ ಹಲ್ಲೆ ಮಾಡಿ, ಕೊಲೆ ಮಾಡಲಾಗಿದೆ. ಕೊಲೆಯಾದ ಕಿರಣ್ ಮೇಲೆ 6 ಕೇಸ್ ಗಳಿವೆ. ಕೊಲೆ ಯತ್ನ, ಕೊಲೆ ಪ್ರಕರಣಗಳಲ್ಲಿ ಈತ ಆರೋಪಿಯಾಗಿದ್ದ. ದೊಡ್ಡಪೇಟೆ ಠಾಣಾ ವ್ಯಾಪ್ತಿಯಲ್ಲಿ ಹೆಚ್ಚು ಸಕ್ರಿಯನಾಗಿದ್ದ. ಇತ್ತೀಚಿಗೆ ಬೇರೆ ಜಿಲ್ಲೆಗಳಿಗೂ ಹೋಗಿ ಬರುತ್ತಿದ್ದ. ಕಿರಣ್ ಗಡಿಪಾರು ಸಂಬಂಧವೂ ಇಲಾಖೆಯಿಂದಲೂ ಕ್ರಮ ಆಗುತ್ತಿತ್ತು. ಶೀಘ್ರದಲ್ಲೇ ಆರೋಪಿಗಳನ್ನು ಬಂಧಿಸುತ್ತೇವೆ. ಆರೋಪಿಗಳು ಸಿಕ್ಕ ನಂತರ ಕೊಲೆ ಬಗ್ಗೆ ಹೆಚ್ಚು ಮಾಹಿತಿ ತಿಳಿಯುತ್ತೇ ಎಂದು ತಿಳಿಸಿದರು.