ಗಜೇಂದ್ರಗಡ: ಮತಕ್ಷೇತ್ರದ ರಸ್ತೆಗಳ ಅಭಿವೃದ್ಧಿಗೆ ಆದ್ಯತೆ ನೀಡಿದ್ದು, ಗ್ರಾಮಗಳಿಂದ ಹಿಡಿದು ರಾಜ್ಯ ಹೆದ್ದಾರಿ ರಸ್ತೆಗಳ ದುರಸ್ತಿ ಹಾಗೂ ನಿರ್ಮಾಣಕ್ಕೆ ಈಗಾಗಲೇ ನೀಲನಕ್ಷೆ ಹಾಕಿಕೊಳ್ಳಲಾಗಿದೆ ಎಂದು ರಾಜ್ಯ ಖನಿಜ ನಿಗಮದ ಅಧ್ಯಕ್ಷ, ಶಾಸಕ ಜಿ.ಎಸ್. ಪಾಟೀಲ ಹೇಳಿದರು.
ಹಳ್ಳಿಯಿಂದ ದಿಲ್ಲಿವರೆಗೆ ಅಭಿವೃದ್ಧಿ ಆಗಬೇಕಾದರೆ ರಸ್ತೆಗಳು ನಿರ್ಮಾಣ ಮುಖ್ಯವಾಗಿದ್ದು, ಗೋಗೇರಿ ಗ್ರಾಮ ಸೇರಿ ತಾಲೂಕಿನ ಅನೇಕ ಗ್ರಾಮ ರಸ್ತೆ ನಿರ್ಮಾಣದಿಂದ ಹಿಡಿದು ರಾಜ್ಯ ಹೆದ್ದಾರಿಗಳ ನಿರ್ಮಾಣಕ್ಕೆ ಈಗಾಗಲೇ ನೀಲನಕ್ಷೆ ಸಿದ್ಧಪಡಿಸಲಾಗುತ್ತಿದೆ. ಈ ದೆಸೆಯಲ್ಲಿ ಬಹುವರ್ಷಗಳ ಬೇಡಿಕೆಯಾಗಿದ್ದ ಸಿಂದನೂರ-ಹೆಮ್ಮಡಗಾ ರಾಜ್ಯ ಹೆದ್ದಾರಿ ದುರಸ್ತಿಗೆ ಭೂಮಿ ಪೂಜೆ ನೆರವೇರಿಸಲಾಗಿದ್ದು, ತ್ವರತಿಗತಿಯಲ್ಲಿ ಹಾಗೂ ಗುಣಮಟ್ಟದ ಕಾಮಗಾರಿ ನಡೆಸಲು ಗುತ್ತಿಗೆದಾರರಿಗೆ ಸೂಚಿಸಲಾಗಿದೆ. ವಾಹನ ಚಲಾಯಿಸುವಾಗ ಎಚ್ಚರಿಕೆ ಮೊದಲ ಆದ್ಯತೆಯನ್ನಾಗಿ ವಾಹನ ಸವಾರರು ಪರಿಗಣಿಸಿದರೆ ಅಪಘಾತಗಳ ಸಂಖ್ಯೆಯನ್ನು ಕ್ಷೀಣಿವಾಗುತ್ತದೆ ಎಂದರು.
ರೈತ ಕೆರೆಗೆ ಬಾಗೀನ ಅರ್ಪಿಸಿದ ಶಾಸಕ ಪಾಟೀಲ್ತಾಲೂಕಿನ ನಾಗರಸಕೊಪ್ಪ ಗ್ರಾಮದ ದ್ಯಾಮಮ್ಮನ ದೇವಿ ಸಮುದಾಯ ಭವನ ನಿರ್ಮಾಣಕ್ಕೆ ಅಂದಾಜು ₹ ೫ ಲಕ್ಷ ವೆಚ್ಚದ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದ ಬಳಿಕ ಗ್ರಾಮದ ರೈತ ಕೆರೆಗೆ ಶಾಸಕ ಜಿ.ಎಸ್. ಪಾಟೀಲ ಬಾಗೀನ ಅರ್ಪಿಸಿದರು. ಇದಕ್ಕೂ ಮುನ್ನ ಗೋಗೇರಿ ಗ್ರಾಮದ ಹೊಸ ಬಡಾವಣೆಯ ಕೆರೆಗೆ ಬಾಗೀನ ಅರ್ಪಿಸಿದರು. ಈ ವೇಳೆ ಶರಣಪ್ಪ ಕೊಡಗಾನೂರ, ಮುತ್ತಣ್ಣ ಲ್ಯಾವಕ್ಕಿ, ಮೌನೇಶ ಬಡಿಗೇರ, ಹೊಳೆಯಪ್ಪ ದಮ್ಮೂರ, ಶಂಕ್ರಪ್ಪ ಬಡಿಗೇರ, ಈರಣ್ಣ ಸೊಬರದ, ಕಳಕಪ್ಪ ನರಿ, ಮುತ್ತಣ್ಣ ಗುಜ್ಜಲರ, ವೀರಭದ್ರಯ್ಯ ಹಿರೇಮಠ, ತಾರಾಸಿಂಗ್ ರಾಠೋಡ ಸೇರಿದಂತೆ ಇತರರು ಇದ್ದರು
ಈ ಸಂದರ್ಭದಲ್ಲಿ ಗಜೇಂದ್ರಗಡ ಪುರಸಭೆ ಸದಸ್ಯ ಶಿವರಾಜ ಘೋರ್ಪಡೆ, ಸಿದ್ದಣ್ಣ ಬಂಡಿ, ಕೆ.ಎಸ್.ಕೊಡತಗೇರಿ, ಮಲ್ಲಿಕಾರ್ಜುನ ಗಾರಗಿ, ವಿ.ಬಿ. ಸೋಮನಕಟ್ಟಿಮಠ, ಹನಮಂತಪ್ಪ ಹೊರಪೇಟಿ, ಇಮಾಮಸಾಬ್ ಬಾಗವಾನ, ಮುತ್ತಣ್ಣ ಭೋಸಲೆ, ಹೇಮಾಪತಿ ಭೋಸಲೆ, ಕಟ್ಟೇಪ್ಪ ಮಾದರ, ಮೋನೇಶಪ್ಪ ಭೋಸಲೆ, ಮುತ್ತಪ್ಪ ಹೊಸಮನಿ, ರಾಮನಗೌಡ ಗೌಡ್ರ, ಹನಮಂತ ಮಾದರ ಸೇರಿ ಇತರರು ಇದ್ದರು.