ಕನ್ನಡಪ್ರಭ ವಾರ್ತೆ ಬೆಂಗಳೂರು
ಕೊಳವೆಬಾವಿಗಳ ಸಮರ್ಪಕ ನಿರ್ವಹಣೆ ಇಲ್ಲದ ಕಾರಣ, ಅವುಗಳಲ್ಲಿ ನೀರಿನ ಮಟ್ಟ ಕಡಿಮೆಯಾದರೂ ನೀರನ್ನು ಮೇಲೆತ್ತಲಾಗುತ್ತಿದೆ. ಅದರಿಂದ ಮೋಟಾರುಗಳು ಹಾಳಾಗುವುದಲ್ಲದೆ, ಕೊಳವೆಬಾವಿಗಳಲ್ಲೂ ಸಮಸ್ಯೆ ಉಂಟಾಗುತ್ತದೆ. ಹೀಗಾಗಿ ಕೃತಕ ಬುದ್ಧಿಮತ್ತೆ ಮತ್ತು ಆಧುನಿಕ ತಂತ್ರಜ್ಞಾನ ಅಳವಡಿಸಿದರೆ ನೀರಿನ ಮಟ್ಟ ಕಡಿಮೆಯಾದರೆ ಮೋಟಾರುಗಳು ಕಾರ್ಯನಿರ್ವಹಿಸಿಸುವುದಿಲ್ಲ. ಅದರಿಂದ ಮೋಟಾರು ಹಾಳಾಗುವುದನ್ನು ತಡೆಯಬಹುದಾಗಿದೆ. ಅಂತಹ ತಂತ್ರಜ್ಞಾವನ್ನು ಇದೀಗ ಚಿನ್ನಪ್ಪ ಗಾರ್ಡ್‌ನ್‌ನ ಕೊಳವೆಬಾವಿಗೆ ಅಳವಡಿಸಲಾಗಿದ್ದು, ಮುಂದಿನ ದಿನಗಳಲ್ಲಿ ಎಲ್ಲ ಕೊಳವೆಬಾವಿಗಳಿಗೂ ಅದನ್ನು ಅಳವಡಿಸಲಾಗುತ್ತದೆ ಎಂದು ಜಲಮಂಡಳಿ ಅಧಿಕಾರಿಗಳು ತಿಳಿಸಿದ್ದಾರೆ.