ಮನೆಗೊಂದು ಗ್ರಂಥಾಲಯ ಅನುಷ್ಠಾನ ಸಮಾರಂಭ
ಮನೆಯಲ್ಲಿ ಭಕ್ತಿಗಾಗಿ ದೇವರ ಕೋಣೆ ಕಟ್ಟುವ ಜೊತೆಗೆ ಜ್ಞಾನಕ್ಕಾಗಿ ಗ್ರಂಥಾಲಯ ಕೊಠಡಿ ಕಟ್ಟುವ ಮೂಲಕ ಮುಂದಿನ ಪೀಳಿಗೆಗೆ ಪುಸ್ತಕ ಸಂಸ್ಕೃತಿ ಉಳಿಸಬೇಕು ಎಂದು ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷೆ ಡಾ. ಮಾನಸ ಅಭಿಪ್ರಾಯಪಟ್ಟರು ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕನ್ನಡ ಪುಸ್ತಕ ಪ್ರಾಧಿಕಾರ ಬೆಂಗಳೂರು, ಜಿಲ್ಲಾ ಜಾಗೃತಿ ಸಮಿತಿಯಿಂದ ಪಟ್ಟಣದ ದಂತ ವೈದ್ಯ ಡಾ. ಜಿ. ಸಿ. ಶರತ್ ಅವರ ನಿವಾಸದಲ್ಲಿ ನಡೆದ ಮನೆಗೊಂದು ಗ್ರಂಥಾಲಯ ಅನುಷ್ಠಾನ ಸಮಾರಂಭ ಉದ್ಘಾಟಿಸಿ ಮಾತನಾಡಿ ಡಾ.ಬಿ.ಆರ್.ಅಂಬೇಡ್ಕರ್ ಹಾಗೂ ಬಸವೇಶ್ವರ ಪ್ರೇರಣೆಯಿಂದ ಈ ಕಾಯ೯ಕ್ರಮ ಅನುಷ್ಠಾನ ಗೊಳಿಸಲಾಗುತ್ತಿದೆ. ಮುಖ್ಯಮಂತ್ರಿ ನಿವಾಸದಿಂದ ಆರಂಭಿಸಿ ರಾಜ್ಯಾದ್ಯಂತ ಒಂದು ಲಕ್ಷ ಮನೆಗಳಲ್ಲಿ ಗ್ರಂಥಾಲಯ ಅನುಷ್ಠಾನ ನಡೆಸಲಾಗುವುದು ಎಂದು ಹೇಳಿದರು. ಕನ್ನಡ ಪುಸ್ತಕ ಕೊಳ್ಳುವವರು, ಓದುವವರು ಇಲ್ಲ ಎಂಬ ಕೊರಗು ಹೆಚ್ಚಾಗಿದೆ, ಇದಕ್ಕೆ ಸಕಾರಾತ್ಮಕ ಪರಿಹಾರ ಕಂಡು ಕೊಳ್ಳ ಬೇಕು. ಈಗಾಗಲೇ ಪ್ರಾಧಿಕಾರದಿಂದ ''''''''ಅಂಗಳದಲ್ಲಿ ತಿಂಗಳ ಪುಸ್ತಕ '''''''' ಕಾರ್ಯಕ್ರಮ ನಡೆಯುತ್ತಿದೆ. ಕನಿಷ್ಠ ಪಕ್ಷ ನೂರು ಮನೆಗಳಲ್ಲಿ ನೂರು ಪುಸ್ತಕಗಳ ಪರಿಚಯ ಹಾಗೂ ಸಂವಾದ ನಡೆಸುವ ಉದ್ದೇಶ ಇದೆ ಎಂದು ಹೇಳಿದರು. ಜಿಲ್ಲಾ ಜಾಗೃತ ಸಮಿತಿ ಸಂಚಾಲಕ ಮಂಜುನಾಥ ಸ್ವಾಮಿ ಮಾತನಾಡಿ ಪುಸ್ತಕ ಪ್ರೀತಿ ಮರೆತ ಕಾರಣ ಸಮಾಜ ಅನೇಕ ಸಮಸ್ಯೆಎದುರಿಸುತ್ತಿದೆ. ಮಕ್ಕಳಲ್ಲಿ ಪುಸ್ತಕ ಪ್ರೀತಿ ಬೆಳೆಸಿದರೆ ಅವರ ಬದುಕಿನ ರೀತಿ ಬದಲಾಗಲಿದೆ ಎಂದು ಹೇಳಿದರು. ದಂತ ವೈದ್ಯ ಡಾ. ಜಿ. ಸಿ. ಶರತ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಪುಸ್ತಕ ಉಡುಗೊರೆ ಸಂಸ್ಕೃತಿ ಬೆಳೆಸ ಬೇಕಿದೆ. ಗ್ರಂಥಾಲಯ ಇರದ ಮನೆ ಸುಂದರ ಮನೆಯಾಗಲು ಸಾಧ್ಯವಿಲ್ಲ. ನಮ್ಮ ಘನತೆ ಪುಸ್ತಕ ಓದುವುದರಿಂದ ಹೆಚ್ಚಲಿದೆ ಎಂದು ಹೇಳಿದರು.ಜಾಗೃತಿ ಸಮಿತಿ ಸದಸ್ಯ ಹಾಗೂ ಪುರಸಭೆ ಸದಸ್ಯ ಟಿ.ದಾದಾಪೀರ್ ಹಾಗೂ ವಾಣಿ ಶ್ರೀನಿವಾಸ್ ಮಾತನಾಡಿದರು. ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ರವಿ ದಳವಾಯಿ, ಹಿರಿಯ ಪತ್ರಕರ್ತ ಅನಂತ ನಾಡಿಗ್, ಮಮತಾ ಮಹಿಳಾ ಸಮಾಜ ಅಧ್ಯಕ್ಷೆ ಸಹನಾ, ರೋಟರಿ ಅಧ್ಯಕ್ಷ ಬಿ.ಪಿ.ರವಿಕುಮಾರ್ , ಇನ್ನರ್ ವೀಲ್ ಅಧ್ಯಕ್ಷೆ ಮೀರಾ. ಗಮಕ ಕಲಾವಿದೆ ಸುನೀತ, ಟಿ.ಜಿ.ಸದಾನಂದ ಮತ್ತಿತರರು ಭಾಗವಹಿಸಿದ್ದರು.--
23ಕೆಟಿಆರ್.ಕೆ.10ಃತರೀಕೆರೆಯ ಮನೆಗೊಂದು ಗ್ರಂಥಾಲಯ ಸಮಾರಂಭದಲ್ಲಿ ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷರಾದ ಡಾ. ಮಾನಸ ಕರಪತ್ರ ಬಿಡುಗಡೆ ಮಾಡಿದರು. ದಂತ ವೈದ್ಯ ಡಾ. ಜಿ. ಸಿ. ಶರತ್, ವಾಣಿ ಶ್ರೀನಿವಾಸ್, ಜಾಗೃತಿ ಸಮಿತಿ ಸದಸ್ಯ ಹಾಗೂ ಪುರಸಭೆ ಸದಸ್ಯ ಟಿ.ದಾದಾಪೀರ್, ಮಂಜುನಾಥ ಸ್ವಾಮಿ ಮತ್ತಿತರರು ಭಾಗವಹಿಸಿದ್ದರು.