‘ಬಾರಗೆರೆ ಬರಂಬು ತುಳುವೆರೆ ಪುಂಚ ನಾಡೊಂದು’ ಪುಸ್ತಕ ಲೋಕಾರ್ಪಣೆ

KannadaprabhaNewsNetwork |  
Published : Nov 07, 2025, 03:15 AM IST
ತುಳು ಪುಸ್ತಕ ಲೋಕಾರ್ಪಣೆ | Kannada Prabha

ಸಾರಾಂಶ

ತುಳು ಭವನದಲ್ಲಿ ಬುಧವಾರ ಆಯೋಜಿಸಲಾದ ಸಮಾರಂಭದಲ್ಲಿ ಡಾ.ಇಂದಿರಾ ಹೆಗ್ಗಡೆ ಅವರ ‘ಬಾರಗೆರೆ ಬರಂಬು ತುಳುವೆರೆ ಪುಂಚ ನಾಡೊಂದು’ ಕೃತಿ ಲೋಕಾರ್ಪಣೆಗೊಂಡಿತು.

ಕನ್ನಡಪ್ರಭ ವಾರ್ತೆ ಮಂಗಳೂರು

ಸಂಶೋಧಕಿ ಡಾ.ಇಂದಿರಾ ಹೆಗ್ಗಡೆ ಅವರು ತನ್ನ ಜಾನಪದೀಯ ಸಂಶೋಧನೆಯ ಕ್ಷೇತ್ರ ಕಾರ್ಯದ ಅನುಭವಗಳನ್ನು ದಾಖಲಿಸಿರುವ ಮೂಲಕ ಸಂಶೋಧನಾ ಕ್ಷೇತ್ರಕ್ಕೆ ಬರುವವರಿಗೆ ಬಹುದೊಡ್ಡ ಮಾರ್ಗದರ್ಶಿ ಕೊಡುಗೆಯನ್ನು ನೀಡಿದ್ದಾರೆ. ತುಳುವಿನಲ್ಲಿ ಇದೊಂದು ಮಹತ್ವದ ಕೃತಿಯಾಗಲಿದೆ ಎಂದು ಶ್ರೀ ಗೋಕರ್ಣನಾಥೇಶ್ವರ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಡಾ.ಆಶಾಲತಾ ಸುವರ್ಣ ಹೇಳಿದರು.ಅವರು ತುಳು ಭವನದಲ್ಲಿ ಬುಧವಾರ ಆಯೋಜಿಸಲಾದ ಡಾ.ಇಂದಿರಾ ಹೆಗ್ಗಡೆ ಅವರ ‘ಬಾರಗೆರೆ ಬರಂಬುತುಳುವೆರೆ ಪುಂಚ ನಾಡೊಂದು’ ಕೃತಿಯನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದರು.

ಜಾನಪದೀಯ ಅಧ್ಯಯನ ಕ್ಷೇತ್ರ ಕಾರ್ಯಗಳ ಸಂದರ್ಭದಲ್ಲಿ ಮಹಿಳೆಯರು ಸಾಕಷ್ಟು ಎಡರು ತೊಡಕುಗಳನ್ನು ಎದುರಿಸುವ ಸಂದರ್ಭ ಉಂಟಾಗುತ್ತಿತ್ತು. ಈ ಎಲ್ಲ ಸವಾಲುಗಳನ್ನು ಧೈರ್ಯದಿಂದ ಎದುರಿಸಿ ಮುನ್ನಡೆದು ಡಾ.ಇಂದಿರಾ ಹೆಗ್ಗಡೆ ಅವರುಹಲವು ಮಹತ್ವದ ಕೃತಿಗಳನ್ನು ನೀಡಿರುವುದು ಪ್ರಶಂಸನೀಯ ಎಂದು ಡಾ.ಆಶಾಲತಾ ಸುವರ್ಣಅಭಿಪ್ರಾಯಪಟ್ಟರು.

ಲೇಖಕಿ ಡಾ.ಇಂದಿರಾ ಹೆಗ್ಗಡೆ ಅವರು ಮಾತನಾಡಿ, ತಾನು ಕನ್ನಡದಲ್ಲಿ ಹಲವು ಕೃತಿಗಳನ್ನು ಬರೆದರೂ ತುಳುವಿನಲ್ಲಿ ಬರೆದ ‘ಬಾರಗೆರೆ ಬರಂಬು ತುಳುವೆರೆ ಪುಂಚ ನಾಡೊಂದು’ ಕೃತಿ ನನಗೆ ಹೃದಯಕ್ಕೆ ಹಾಗೂ ಮನಸ್ಸಿಗೆ ತುಂಬಾ ಆಪ್ತವಾಯಿತು, ತುಳುವಿನಲ್ಲಿ ಬರೆಯುವುದು ತುಂಬಾ ಆಪ್ತವಾದ ವಿಚಾರ ಎಂದರು.

ಮುಖ್ಯ ಅತಿಥಿಯಾಗಿ ಪಾಲ್ಗೊಂಡ ಡಾ.ಸಮೀರ್ ಮಾಡ , ಹಿರಿಯ ಲೇಖಕಿ ಪ್ರೇಮಾ ಅಜ್ರಿ ಕಾರ್ಕಳ, ಚೇಳೈರು ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲೆ ಡಾ.ಜ್ಯೋತಿ ಚೇಳೈರು, ನಿವೃತ್ತ ಪ್ರಾಂಶುಪಾಲ ಕೃಷ್ಣಮೂರ್ತಿ ಪಿ. ಅವರು ಕೃತಿಯ ಬಗ್ಗೆ ಮಾತನಾಡಿದರು.ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ತಾರಾನಾಥ ಗಟ್ಟಿ ಕಾಪಿಕಾಡ್ ಮಾತನಾಡಿ, ತುಳುವಿನಲ್ಲಿ ಹೊಸದಾಗಿ ಸಂಶೋಧನೆ ಮಾಡಲು ಹೊರಟವರಲ್ಲಿ ಕ್ಷೇತ್ರ ಕಾರ್ಯದ ಅನುಭವದ ಕೊರತೆ ಇದೆ. ತಳಸ್ಪರ್ಶಿಯಾದ ಕ್ಷೇತ್ರ ಅಧ್ಯಯನದ ಮೂಲಕ ಸಂಶೋಧನೆ ನಡೆಸುವುದಕ್ಕೆ ಇಂದಿರಾ ಹೆಗ್ಗಡೆಯವರು ನಿದರ್ಶನವಾಗಿದ್ದಾರೆ ಎಂದರು.ಅಕಾಡೆಮಿ ಸದಸ್ಯ ಸಂತೋಷ್ ಶೆಟ್ಟಿ ಹಿರಿಯಡ್ಕ ನಿರೂಪಿಸಿ, ವಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬೆಂಗಳೂರಲ್ಲಿ ಲಾಲ್‌ಬಾಗ್‌ ಮಾದರಿಯಲ್ಲಿ ಮತ್ತೆರಡು ಪಾರ್ಕ್‌ ನಿರ್ಮಾಣ: ಡಿ.ಕೆ.ಶಿವಕುಮಾರ್
ಸಂಕ್ರಾಂತಿ: ಇಂದು ಗವಿಗಂಗಾಧರನಿಗೆ ಸೂರ್ಯರಶ್ಮಿ ಸ್ಪರ್ಶ