ಪ್ರತಿಭಾವಂತರಿಗೆ ಪುಸ್ತಕಗಳೇ ಸಹಪಾಠಿ: ವಿನಯ್ ಕುಮಾರ್

KannadaprabhaNewsNetwork |  
Published : Jun 29, 2026, 03:15 AM IST
28ಎಚ್.ಎಲ್.ಐ1.ಸ್ವಾಭಿಮಾನಿ ಬಳಗ, ಇನ್ ಸೈಟ್ಸ್ಐಎಎಸ್ ತರಬೇತಿ ಸಂಸ್ಥೆವತಿಯಿಂದ ಹೊನ್ನಾಳಿ ಹಿರೇಕಲ್ಮಠದಲ್ಲಿ  ಎಸ್.ಎಸ್.ಎಲ್.ಸಿ. ಮತ್ತು ಪಿಯುಸಿ ಪ್ರತಿಭಾವಂತ ಮಕ್ಕಳಿಗೆ ಪ್ರತಿಭಾ ಪ್ರೇರಣೋತ್ಸವ ಕಾರ್ಯಕ್ರಮದಲ್ಲಿ ಜಿ.ಬಿ.ವಿನಯ್ ಕುಮಾರ್ ಅವರು ವಿದ್ಯಾರ್ಥಿಗಳಿಗೆ ಸನ್ಮಾನಿಸಿದರು. ಸ್ವಾಭಿಮಾನಿ ಬಳಗದ ಅನೇಕ ಪದಾಧಿಕಾರಿಗಳು ಇದ್ದರು.   28ಎಚ್.ಎಲ್.ಐ1.ಸ್ವಾಭಿಮಾನಿ ಬಳಗ, ಇನ್ ಸೈಟ್ಸ್ಐಎಎಸ್ ತರಬೇತಿ ಸಂಸ್ಥೆವತಿಯಿಂದ ಹೊನ್ನಾಳಿ ಹಿರೇಕಲ್ಮಠದಲ್ಲಿ  ಎಸ್.ಎಸ್.ಎಲ್.ಸಿ. ಮತ್ತು ಪಿಯುಸಿ ಪ್ರತಿಭಾವಂತ ಮಕ್ಕಳಿಗೆ ಪ್ರತಿಭಾ ಪ್ರೇರಣೋತ್ಸವ ಕಾರ್ಯಕ್ರಮದಲ್ಲಿ ಜಿ.ಬಿ.ವಿನಯ್ ಕುಮಾರ್ ಅವರು ವಿದ್ಯಾರ್ಥಿಗಳಿಗೆ ಸನ್ಮಾನಿಸಿದರು. ಸ್ವಾಭಿಮಾನಿ ಬಳಗದ ಅನೇಕ ಪದಾಧಿಕಾರಿಗಳು ಇದ್ದರು.    | Kannada Prabha

ಸಾರಾಂಶ

ಹೊನ್ನಾಳಿ ಹಿರೇಕಲ್ಮಠದಲ್ಲಿ ಎಸ್ಸೆಸ್ಸೆಲ್ಸಿ, ಪಿಯುಸಿ ಪ್ರತಿಭಾವಂತ ಮಕ್ಕಳಿಗೆ ಜಿ.ಬಿ.ವಿನಯ್ ಕುಮಾರ್ ಸನ್ಮಾನಿಸಿದರು. ಸ್ವಾಭಿಮಾನಿ ಬಳಗದ ಅನೇಕ ಪದಾಧಿಕಾರಿಗಳು ಇದ್ದರು.

ಕನ್ನಡಪ್ರಭ ವಾರ್ತೆ ಹೊನ್ನಾಳಿ

ಪ್ರತಿಭಾವಂತರಿಗೆ ಪುಸ್ತಕಗಳೇ ಸಹಪಾಠಿಗಳಾಗಿದ್ದು, ಪುಸ್ತಕಗಳೇ ಸಾಧಗೆ ಸೋಪಾನವಾಗುತ್ತವೆ ಎಂದು ಸ್ವಾಭಿಮಾನಿ ಬಳಗದ ರಾಜ್ಯಾಧ್ಯಕ್ಷ ಹಾಗೂ ಇನ್ ಸೈಟ್ಸ್ಟ್ಐಎಎಸ್.ಸಂಸ್ಥೆಯ ಸಂಸ್ಥಾಪಕ ಜಿ.ಬಿ. ವಿನಯ್ ಕುಮಾರ್ ಹೇಳಿದರು.

ಸ್ವಾಭಿಮಾನಿ ಬಳಗ ವತಿಯಿಂದ ಪಟ್ಟಣದ ಹಿರೇಕಲ್ಮಠದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಪ್ರತಿಭಾ ಪ್ರೇರಣೋತ್ಸವ ಎಸ್.ಎಸ್.ಎಲ್.ಸಿ. ಮತ್ತು ಪಿ.ಯು.ಸಿ. ಶೇ.85ಕ್ಕಿಂತ ಹೆಚ್ಚಿನ ಅಂಕ ಪಡೆದ ಹೊನ್ನಾಳಿ, ಮತ್ತು ನ್ಯಾಮತಿ ಅವಳಿ ತಾಲೂಕಿನ ವಿದ್ಯಾರ್ಥಿಗಳ ಸನ್ಮಾನ ಕಾರ್ಯಕ್ರಮವನ್ನು ಚಾಲನೆ ನೀಡಿ ಅವರು ಮಾತನಾಡಿದರು.

ಯಾರೂ ನಮಗೆ ವೇದಿಕೆ ಸೃಷ್ಠಿ ಮಾಡಿಕೊಡುವುದಿಲ್ಲ. ಆದರೆ, ತಮ್ಮ ಪ್ರತಿಭೆಯಿಂದ, ಶ್ರಮದಿಂದ ನಾವೇ ಉತ್ತಮ ವೇದಿಕೆ ಸೃಷ್ಟಿಕೊಂಡು ಜೀವನದಲ್ಲಿ ಅವಿಸ್ಮರಣೀಯ ಸಾಧನೆ ಮೂಲಕ ಉತ್ತಮ ಸಾಧಕರಾಗಿ ಹೊರಹೊಮ್ಮಬೇಕು. ಇದಕ್ಕಾಗಿ ನಿಮ್ಮ ಜೊತೆ ಸದಾ ಇನ್ ಸೈಟ್ಸ್ ಐಎಎಸ್, ತರಬೇತಿ ಸಂಸ್ಥೆ ಇರುತ್ತದೆ ಎಂದು ಹೇಳಿದರು.

ವಿದ್ಯಾರ್ಥಿಗಳಿಗೆ ಹಾಗೂ ಅವರ ಪೋಷಕರಿಗೆ ಎಸ್.ಎಸ್.ಎಲ್.ಸಿ., ಪಿಯುಸಿ ಆದ ಮೇಲೆ ಸೂಕ್ತವಾದ ಕೋರ್ಸ್ ಬಗ್ಗೆ ಸಮಗ್ರ ಮಾಹಿತಿ ಪಡೆದು ಸೇರಿ ಅಭ್ಯಾಸ ಮಾಡಬೇಕು. ಆಗ ಮಾತ್ರ ಕನಸು ನನಸಾಗಲು ಸಾಧ್ಯ. ಎಲ್ಲರಲ್ಲಿಯೂ ಆತ್ಮಶಕ್ತಿ ಇದ್ದೇ ಇರುತ್ತದೆ. ಆದರೆ, ಸೂಕ್ತ ಮಾರ್ಗದರ್ಶನದ ಅವಶ್ಯಕತೆ ಇದೆ. ಅತ್ಯಂತ ಪ್ರತಿಭಾಂತ ಬಡ ವಿದ್ಯಾರ್ಥಿಗಳಿಗೆ ತಮ್ಮ ಇನ್ ಸೈಟ್ಸ್ ಐಎಎಸ್ ಸಂಸ್ಥೆಯಲ್ಲಿ ಉಚಿತ ತರಬೇತಿ ಇರುತ್ತದೆ. ಅರ್ಹ ವಿದ್ಯಾರ್ಥಿಗಳು ಸದುಪಯೋಗ ಪಡೆದುಕೊಳ್ಳಬೇಕು ಎಂದು ಹೇಳಿದರು.

ಅವಳಿ ತಾಲೂಕುಗಳ ಎಸ್.ಎಸ್.ಎಲ್.ಸಿ. ಮತ್ತು ಪಿ.ಯು.ಸಿ. ಪರೀಕ್ಷೆಗಳಲ್ಲಿ ಶೇಕಡ 85ಕ್ಕಿಂತ ಹೆಚ್ಚಿನ ಅಂಕಪಡೆದ ಪ್ರತಿಭಾವಂತ ಸುಮಾರು 700ಕ್ಕೂ ಹೆಚ್ಚಿನ ವಿದ್ಯಾರ್ಥಿಗಳಿಗೆ ಪಾರಿತೋಷಕ, ಪ್ರಮಾಣ ಪತ್ರ ಹಾಗೂ ₹1000 ನಗದು ಬಹುಮಾನಗಳನ್ನು ನೀಡಿ ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಸ್ವಾಭಿಮಾನಿ ಬಳಗದ ರಾಜು ಮೌರ್ಯ, ಶಿವಕುಮಾರ್ ಶೆಟ್ಟರ್,ಶಾಂತ್ ಕುಮಾರ್,ಶಿವಕುಮಾರ್ , ಸುದೀಪ್, ರೈತ ಮುಖಂಡ ಕಡದಕಟ್ಟೆ ಜಗದೀಶ್, ದೇವರಾಜ್, ರಾಜು ಕಣಗಣ್ಣಾರ, ಮಂಜುನಾಥ, ಪಂಕಜ ಅರುಣ್ ಕುಮಾರ್, ಹಳದಪ್ಪ ಪಿರಗಿ, ದಿಡಗೂರು ಫಾಲಾಕ್ಷಪ್ಪ, ವಿದ್ಯಾ, ವಿದ್ಯಾರ್ಥಿಗಳು, ಪೋಷಕರು ಇದ್ದರು. ಕಲಾವಿದ ಖಾಸಿಂ ಆಲಿ ‍‍‍ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪ್ರತಿಭಾವಂತರು ಪ್ರಪಂಚದ ಯಾವುದೇ ಮೂಲೆಯಲ್ಲಿ ಗುರುತಿಸಿಕೊಳ್ಳಬಹುದು: ಡಾ.ಕೆ.ಪಿ.ಅಂಶುಮಂತ್
ರಾಜ್ಯದ ಮೊದಲ ನಗರ ಸುರಂಗಕ್ಕೆ ಶಂಕು