ಕನ್ನಡಪ್ರಭ ವಾರ್ತೆ ವಿಜಯಪುರ
ತಿಕೋಟಾ ತಾಲೂಕಿನ ರತ್ನಾಪುರ ಗ್ರಾಮದಲ್ಲಿ ಇತ್ತೀಚೆಗೆ ಕರ್ನಾಟಕ ಯುವಗರ್ಜನೆ ಸಂಘಟನೆ ವತಿಯಿಂದ ಕರ್ನಾಟಕ ಸುವರ್ಣ ಮಹೋತ್ಸವ 50ರ ಸಂಭ್ರಮದ ಪ್ರಯುಕ್ತ ಗಡಿನಾಡ ಕನ್ನಡಿಗರ ಸಮಾವೇಶಕ್ಕೆ ಚಾಲನೆ ನೀಡಿ ಮಾತನಾಡಿದರು.
ಬಬಲೇಶ್ವರ ಮತಕ್ಷೇತ್ರದಲ್ಲಿ ಒಂದಿಷ್ಟು ಪಟ್ಟಬದ್ಧ ಹಿತಾಸಕ್ತಿಗಳು ಮಹಾರಾಷ್ಟ್ರದ ಯುವಕರ ನಕಲಿ ದಾಖಲೆಗಳನ್ನು ಸೃಷ್ಟಿಸಿ, ಗಡಿನಾಡ ಯುವಕರಿಗೆ ಸಿಗಬೇಕಾದ ಸರ್ಕಾರದ ಸೌಲಭ್ಯಗಳನ್ನು ಪಡೆಯುತ್ತಿದ್ದಾರೆ. ಇದಕ್ಕೆ ಯಾರ ಕೈವಾಡವಿದೆ. ತಿಕೋಟಾ ತಾಲೂಕು ಆಡಳಿತ ಕಣ್ಮಚ್ಚಿ ಕುಳಿತಿದೆಯೇ ಎಂದರು.ಸಾನ್ನಿಧ್ಯ ವಹಿಸಿದ್ದ ಬಾಬು ಮಹಾರಾಜರು ಹೊನವಾಡ ಆಶೀರ್ವಚನ ನೀಡಿ, ಸಣ್ಣ-ಪುಟ್ಟ ಊರಗಳಲ್ಲಿ ಕನ್ನಡದ ಅಭಿಮಾನ ಬೆಳೆಸುವ ಕೆಲಸ ಕರ್ನಾಟಕ ಯುವಗರ್ಜನೆ ಮಾಡುತ್ತಿರುವುದು ಹೆಮ್ಮೆಯ ವಿಷಯ. ಮುಂದಿನ ದಿನಗಳಲ್ಲಿ ನಾವೆಲ್ಲರೂ ಕನ್ನಡದ ಸೇವೆ ಮಾಡೋಣ ಎಂದರು.
ಮಾಜಿ ಸೈನಿಕ ಮಲ್ಲಪ್ಪ ಯಡವೆ, ಪ್ರವೀಣ ಪವಾರ ಅವರಿಗೆ ಸನ್ಮಾನಿಸಿ ಗೌರವಿಸಲಾಯಿತು. ಕರ್ನಾಟಕ ಯುವಗರ್ಜನೆಯ ಗೌರವಾಧ್ಯಕ್ಷ ಪ್ರಕಾಶ ಮಿರ್ಜಿ, ಅಡಿವೆಪ್ಪ ಸಲಗಲ, ಜಕ್ಕಪ್ಪ ಯಡವೆ, ಮುತ್ತಪ್ಪ ಶಿವಣ್ಣವರ, ಶರತ ಬಿರಾದಾರ, ಸಂಗಮೇಶ ಜಾಧವ, ಬಸವರಾಜ ತಾಳಿಕೋಟಿ ಮುಂತಾದವರು ಇದ್ದರು.