....ಬೋವಿ ಸಮಾಜದ ಮುಖಂಡ ಕಲ್ಲು ಸೀನಪ್ಪ ನಿಧನ

KannadaprabhaNewsNetwork |  
Published : Jun 24, 2026, 01:30 AM IST
ಶಿರ್ಷಿಕೆ-23ಕೆ.ಎಂ.ಎಲ್‌.ಆರ್.3- ಮೃತ ಕಲ್ಲು ಸೀನಪ್ಪ | Kannada Prabha

ಸಾರಾಂಶ

ಬೋವಿ ಸಮಾಜದ ಮುಖಂಡ, ಬೋವಿ ಹಾಸ್ಟೆಲ್ ಟ್ರಸ್ಟ್‌ ಖಜಾಂಚಿ, ಭುವನೇಶ್ವರಿ ಕಲಾಸಂಘದ ಉಪಾಧ್ಯಕ್ಷರಾದ ಕಲ್ಲು ವಿ. ಸೀನಪ್ಪ ಆವರು (೮೩) ಅನಾರೋಗ್ಯದ ಕಾರಣ ನಗರದ ಹನುಮಂತನಗರದ ಅವರ ನಿವಾಸದಲ್ಲಿ ನಿಧನರಾದರು.ಮೃತರಿಗೆ ಇಬ್ಬರು ಪುತ್ರಿಯರಿದ್ದಾರೆ. ಮೃತರ ಇಚ್ಛೆಯಂತೆ ಕೋಲಾರ ನಗರದ ಆರ್.ಎಲ್. ಜಾಲಪ್ಪ ವೈದ್ಯಕೀಯ ಕಾಲೇಜಿಗೆ ಮೃತ ದೇಹವನ್ನು ದಾನವಾಗಿ ನೀಡಿದರು.

ಕನ್ನಡಪ್ರಭ ವಾರ್ತೆ, ಮಾಲೂರು

ಬೋವಿ ಸಮಾಜದ ಮುಖಂಡ, ಬೋವಿ ಹಾಸ್ಟೆಲ್ ಟ್ರಸ್ಟ್‌ ಖಜಾಂಚಿ, ಭುವನೇಶ್ವರಿ ಕಲಾಸಂಘದ ಉಪಾಧ್ಯಕ್ಷರಾದ ಕಲ್ಲು ವಿ. ಸೀನಪ್ಪ ಆವರು (೮೩) ಅನಾರೋಗ್ಯದ ಕಾರಣ ನಗರದ ಹನುಮಂತನಗರದ ಅವರ ನಿವಾಸದಲ್ಲಿ ನಿಧನರಾದರು.ಮೃತರಿಗೆ ಇಬ್ಬರು ಪುತ್ರಿಯರಿದ್ದಾರೆ. ಮೃತರ ಇಚ್ಛೆಯಂತೆ ಕೋಲಾರ ನಗರದ ಆರ್.ಎಲ್. ಜಾಲಪ್ಪ ವೈದ್ಯಕೀಯ ಕಾಲೇಜಿಗೆ ಮೃತ ದೇಹವನ್ನು ದಾನವಾಗಿ ನೀಡಿದರು.

ಸೀನಪ್ಪ ಅವರು ತಮಿಳುನಾಡಿನ ಆಲೂರು ಮೂಲದವರಾಗಿದ್ದು, ಸುಮಾರು ೬೦ ವರ್ಷಗಳಿಂದ ಮಾಲೂರಿನ ಹನುಮಂತನಗರದ ವಾಸಿಯಾಗಿ ಭೋವಿ ಸಮಾಜದ ಹಿರಿಯ ಮುಖಂಡನಾಗಿ ಟ್ರಸ್ಟಿನ ಖಜಾಂಚಿಯಾಗಿ ಬೋವಿ ಹಾಸ್ಟೆಲ್ ನಿರ್ಮಾಣಕ್ಕೆ ಪ್ರಮುಖ ಪಾತ್ರ ವಹಿಸಿದ್ದರು. ಭುವನೇಶ್ವರಿ ಕನ್ನಡ ಕಲಾ ಸಂಘದಲ್ಲಿ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು.

ಮೃತರ ನಿವಾಸಕ್ಕೆ ಶಾಸಕ ಕೆ.ವೈ. ನಂಜೇಗೌಡ, ಮಂಗಮ್ಮ ಮುನಿಸ್ವಾಮಿ, ಬೋವಿ ಟ್ರಸ್ಟಿನ ಅಧ್ಯಕ್ಷ ಹನುಮಪ್ಪ, ಪ್ರಧಾನ ಕಾರ್ಯದರ್ಶಿ ಎಚ್.ಮುನಿಯಪ್ಪ, ಆರ್.ಪ್ರಬಾಕರ್, ಸಿ. ಲಕ್ಷ್ಮಿನಾರಾಯಣ್, ಮಾರಿಕಾಂಬ ದೇವಾಲಯ ಟ್ರಸ್ಟಿನ ಅಧ್ಯಕ್ಷ ಪಿ. ವೆಂಕಟೇಶ್, ಭೋವಿ ಸಮಾಜದ ಮುಖಂಡ ಫುಡ್ ರಮೇಶ್, ಶ್ರೀಕೃಷ್ಣ, ಮುಖಂಡರಾದ ಪಿ.ನಾಗರಾಜ್, ಭುವನೇಶ್ವರಿ ಕಲಾಸಂಘದ ದೇವರಾಜರೆಡ್ಡಿ, ಹನುಮಂತಪ್ಪ, ನಾಗರಾಜ, ಟೈಲರ್ ಆಂಜನಪ್ಪ, ಬೋವಿ ನೌಕರರ ಸಂಘದ ಅಧ್ಯಕ್ಷ ಎಚ್.ಟಿ.ಕೃಷ್ಣಪ್ಪ, ಪ್ರಧಾನ ಕಾರ್ಯದರ್ಶಿ ರವಿಶಂಕರ್, ಕಾರ್ಯಾಧ್ಯಕ್ಷ ಜಿ. ಮುನಿಯಪ್ಪ, ಸಂಘಟನಾ ಕಾರ್ಯದರ್ಶಿ ಮುನಿರಾಜು ಎಮ್ ಸಿ, ಬಹದ್ದೂರ್ ಸಾಬ್, ಬಾರ್ ಸೋಮಣ್ಣ, ಶ್ರೀಧರ್ ಉಪಾಧ್ಯಾಯ, ಪತ್ರಕರ್ತರಾದ ಡಿ.ಎಂ. ವಿಜಯಕುಮಾರ್, ಟಿ.ಕೆ. ನಾಗರಾಜ್, ಎಸ್. ನಾರಾಯಣಸ್ವಾಮಿ, ಇನ್ನಿತರರು ಮೃತರ ನಿವಾಸಕ್ಕೆ ಆಗಮಿಸಿ ಮೃತರ ದರ್ಶನ ಪಡೆದು ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾವು ತಿನ್ನಲು ಅಡ್ಡಿಯಾದ ಕಾರು ಜಖಂ ಮಾಡಿದ ಕಾಡಾನೆ
ಪಿಯು ಉಪನ್ಯಾಸಕರು ಪ್ರೌಢಶಾಲೆಗೆ ಬೋಧಿಸಲು ತಿದ್ದುಪಡಿ ವಿರೋಧಿಸಿ ಉಪನ್ಯಾಸಕರ ಪ್ರತಿಭಟನೆ