ಬಡವರ ಬಿಪಿಎಲ್‌ ಕಾರ್ಡುಗಳಿಗೆ ಅನ್ಯಾಯ ಆಗಬಾರದು: ಶಾಸಕ ಸೂಚನೆ

KannadaprabhaNewsNetwork |  
Published : Sep 28, 2024, 01:21 AM ISTUpdated : Sep 28, 2024, 01:22 AM IST
ಸೋಮವಾರಪೇಟೆ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ತಾಲ್ಲೂಕು ಪಂಚಾಯಿತಿ ತ್ರೆöÊಮಾಸಿಕ ಸಭೆ ಶಾಸಕ ಡಾ. ಮಂತರ್ ಗೌಡ ಅವರ ಅಧ್ಯಕ್ಷತೆಯಲ್ಲಿ ಶುಕ್ರವಾರ ನಡೆಯಿತು. | Kannada Prabha

ಸಾರಾಂಶ

ಅಧಿಕಾರಿಗಳು ಮತ್ತು ಸಮಿತಿ ಸದಸ್ಯರು ಯಾರೇ ಸಮಸ್ಯೆಯಲ್ಲಿ ಸಿಲುಕಿದಾಗ ಸೂಕ್ತವಾಗಿ ಸ್ಪಂದಿಸಬೇಕು. ಅದಕ್ಕಾಗಿ ಸರ್ಕಾರ ವಿವಿಧ ಸಮಿತಿಗಳನ್ನು ನೇಮಕಮಾಡಿದ್ದು, ಅವರ ಕೆಲಸಗಳಿಗೆ ಅಧಿಕಾರಿಗಳು ಸಹಕರಿಸಬೇಕೆಂದು ಮಡಿಕೇರಿ ಶಾಸಕ ಡಾ. ಮಂತರ್ ಗೌಡ ತಿಳಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಸೋಮವಾರಪೇಟೆ

ಇಲ್ಲಿನ ತಾಲೂಕು ಪಂಚಾಯಿತಿ ತ್ರೈಮಾಸಿಕ ಸಭೆ ಶಾಸಕ ಡಾ. ಮಂತರ್ ಗೌಡ ಅಧ್ಯಕ್ಷತೆಯಲ್ಲಿ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ನಡೆಯಿತು.

ಅಧಿಕಾರಿಗಳು ಮತ್ತು ಸಮಿತಿ ಸದಸ್ಯರು ಯಾರೇ ಸಮಸ್ಯೆಯಲ್ಲಿ ಸಿಲುಕಿದಾಗ ಸೂಕ್ತವಾಗಿ ಸ್ಪಂದಿಸಬೇಕು. ಅದಕ್ಕಾಗಿ ಸರ್ಕಾರ ವಿವಿಧ ಸಮಿತಿಗಳನ್ನು ನೇಮಕಮಾಡಿದ್ದು, ಅವರ ಕೆಲಸಗಳಿಗೆ ಅಧಿಕಾರಿಗಳು ಸಹಕರಿಸಬೇಕೆಂದು ಶಾಸಕರು ತಿಳಿಸಿದರು.

ತಾಲೂಕಿನಲ್ಲಿ ಸಾಕಷ್ಟು ಉಳ್ಳವರು ಬಿಪಿಎಲ್ ರೇಷನ್ ಕಾರ್ಡ್‌ಗಳನ್ನು ಹೊಂದಿದ್ದಾರೆ. ಕಾರುಗಳಲ್ಲಿ ಬಂದು ಪಡಿತರ ತೆಗೆದುಕೊಂಡು ಹೋಗುತ್ತಿದ್ದಾರೆ. ಆದರೆ, ಏನೂ ಇಲ್ಲದವರ ಕಾರ್ಡುಗಳು ಎಪಿಎಲ್ ಕಾರ್ಡುಗಳಾಗಿ ಬದಲಾಗುತ್ತಿರುವುದು ದುರಂತ. ಅದನ್ನು ಸರಿಪಡಿಸಬೇಕೆಂದು ಆಹಾರ ಇಲಾಖೆಯ ಅಧಿಕಾರಿ ಯಶಸ್ವಿನಿಗೆ ತಿಳಿಸಿದರು.

ತಾಲೂಕಿನಲ್ಲಿ ೨೪೧೧ ಬಿಪಿಎಲ್ ಕಾರ್ಡುಗಳು ಎಪಿಎಲ್‌ಗಳಾಗಿ ಬದಲಾಗಿವೆ. ಇನ್ನೂ ೪೫೦ ಕಾರ್ಡುದಾರರಿಗೆ ಡಿಬಿಟಿಯಾಗದ ಬಗ್ಗೆ ಸಭೆಗೆ ಮಾಹಿತಿ ನೀಡಿದ ಸಂದರ್ಭ ಶಾಶಕರು, ಸಾಕಷ್ಟು ಜನರಿಗೆ ಇನ್ನೂ ಪಾನ್ ಕಾರ್ಡ್ ಮತ್ತು ತೆರಿಗೆ ಪಾವತಿ ಬಗ್ಗೆ ಗೊತ್ತಿಲ್ಲ ಎಂದರು.

ಆದರೂ, ಹಲವರ ಬಿಪಿಎಲ್ ಕಾರ್ಡುಗಳು ರದ್ಧಾಗಿವೆ. ಸಂಬಂಧಿಸಿದ ಅಧಿಕಾರಿಗಳು ಸೂಕ್ತ ಪರಿಶೀಲನೆ ಮಾಡಿ, ಬಡವರಿಗೆ ಬಿಪಿಎಲ್ ಕಾರ್ಡ್ ಸಿಗುವಂತೆ ಮಾಡಬೇಕು. ಉಳ್ಳವರು ಕಾರ್ಡ್ ಪಡೆದಿದ್ದರೆ, ಅಂತಹವರ ಮೇಲೆ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳಬೇಕೆಂದರು.

ನ್ಯಾಯ ಬೆಲೆ ಅಂಗಡಿಯವರು ಸರ್ಕಾರ ನಿಗದಿಗೊಳಿಸಿದ ಸಮಯದಲ್ಲಿ ಪಡಿತರ ನೀಡುತ್ತಿಲ್ಲ. ಅಂಗಡಿಯವರನ್ನು ಪ್ರಶ್ನೆ ಮಾಡಿದರೆ, ಮುಂದಿನ ತಿಂಗಳಿನಿಂದ ಅಂತಹವರ ಬಿಪಿಎಲ್ ಕಾರ್ಡ್ ಎಪಿಎಲ್ ಕಾರ್ಡುಗಳಾಗಿ ಮಾರ್ಪಾಡಾಗುತ್ತಿವೆ ಎಂದು ಸಮಿತಿ ಸದಸ್ಯ ಶನಿವಾರಸಂತೆಯ ಪಿ.ಕೆ. ಗಂಗಾಧರ್, ಕೊಡ್ಲಿಪೇಟೆಯ ಔರಂಗಜೇಬ್ ದೂರಿದರು. ಅಂತಹ ದೂರುಗಳಿದ್ದಲ್ಲಿ ಅಧಿಕಾರಿಗಳೂ ಸ್ಥಳಕ್ಕೆ ಭೇಟಿ ನೀಡಿ ಸೂಕ್ತ ಕ್ರಮ ತೆಗೆದುಕೊಳ್ಳಬೇಕೆಂದು ಶಾಸಕರು ತಿಳಿಸಿದರು.

ಕೆಲ ಅಂಗನವಾಡಿ ಶಿಕ್ಷಕಿಯರು ಸರಿಯಾಗಿ ಅಂಗನವಾಡಿಗಳಿಗೆ ತೆರಳುತ್ತಿಲ್ಲ. ಅವರ ಭಾಗದಲ್ಲಿ ಎಷ್ಟು ಜನ ಗರ್ಭೀಣಿಯರು ಮತ್ತು ಬಾಣಂತಿಯರು ಇದ್ದಾರೆ ಎಂಬ ಯಾವುದೇ ಮಾಹಿತಿ ಇಲ್ಲ ಎಂದು ಶಾಸಕರು ಸಭೆಯಲ್ಲಿ ದೂರಿದರು.

ತಾಲೂಕಿನಲ್ಲಿ ಹಿಂದಿನ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಪರಿಶಿಷ್ಟ ಜಾತಿ ಪಂಗಡದ ೧೨೨ ವಿದ್ಯಾರ್ಥಿಗಳು ಅನುತ್ತೀರ್ಣರಾಗಿದ್ದಾರೆ. ೨೩ ವಿದ್ಯಾರ್ಥಿಗಳು ಶಾಲೆಯಿಂದ ಹೊರಗೆ ಇರುವುದಾಗಿ ಬಿಇಒ ಎಸ್. ಭಾಗ್ಯಮ್ಮ ಸಭೆಗೆ ತಿಳಿಸಿದರು. ಸಿಆರ್‌ಪಿಗಳು ಪ್ರಯತ್ನಿಸಿದರೂ, ಮಕ್ಕಳನ್ನು ಶಾಲೆಗೆ ಕರೆತರಲು ಸಾಧ್ಯವಾಗಿಲ್ಲ ಎಂದು ಮಾಹಿತಿ ನೀಡಿದರು.

ತಾಲೂಕು ಪಂಚಾಯಿತಿ ಆಡಳಿತಾಧಿಕಾರಿ ಝೀವಲ್ ಖಾನ್, ಕಾರ್ಯನಿರ್ವಹಣಾಧಿಕಾರಿ ಪರಮೇಶ್, ತಾಲೂಕು ಮಟ್ಟದ ಗ್ಯಾರಂಟಿ ಯೋಜನಾ ಅನುಷ್ಠಾನ ಸಮಿತಿ ಅಧ್ಯಕ್ಷ ಜಿ.ಎಂ. ಕಾಂತರಾಜು ಇದ್ದರು.

PREV

Latest Stories

ಡಿಕೆಶಿ ಪರ ದಾವಣಗೆರೆಯಲ್ಲಿ 101 ತೆಂಗಿನಕಾಯಿ ಸೇವೆ
ಬೆಂಗಳೂರು-ತುಮಕೂರುಪ್ರಯಾಣ, ಜನ ಹೈರಾಣ
ಸ್ಮಾರ್ಟ್‌ ಮೀಟರ್‌ ವಿವಾದ: ಸಚಿವಜಾರ್ಜ್ ವಿರುದ್ಧ ಬಿಜೆಪಿ ದೂರು