ಇತಿಹಾಸ ಪ್ರಸಿದ್ಧ ಶ್ರೀ ವೀರಭದ್ರೇಶ್ವರ ಸ್ವಾಮಿಗೆ 24 ರಂದು ಬ್ರಹ್ಮ ರಥೋತ್ಸವ

KannadaprabhaNewsNetwork | Published : Jun 18, 2024 12:46 AM

ಸಾರಾಂಶ

ಕಡೂರು, ಜೂನ್ 24 ರ ಸೋಮವಾರ ಪಟ್ಟಣದ ದೊಡ್ಡಪೇಟೆಯ ಇತಿಹಾಸ ಪ್ರಸಿದ್ಧ ಶ್ರೀ ವೀರಭದ್ರೇಶ್ವರ ಸ್ವಾಮಿ ಬ್ರಹ್ಮ ರಥೋತ್ಸವ ಅದ್ಧೂರಿಯಾಗಿ ಜರುಗಲಿದೆ ಎಂದು ಹನ್ನೆರಡು ಹರಿವಾಣದ ಗುಡಕಟ್ಟಿನ ಸಮಿತಿ ಅಧ್ಯಕ್ಷ ಭರತ್‍ ಕೆಂಪರಾಜ್ ಹೇಳಿದರು.

ಕನ್ನಡಪ್ರಭ ವಾರ್ತೆ, ಕಡೂರು

ಜೂನ್ 24 ರ ಸೋಮವಾರ ಪಟ್ಟಣದ ದೊಡ್ಡಪೇಟೆಯ ಇತಿಹಾಸ ಪ್ರಸಿದ್ಧ ಶ್ರೀ ವೀರಭದ್ರೇಶ್ವರ ಸ್ವಾಮಿ ಬ್ರಹ್ಮ ರಥೋತ್ಸವ ಅದ್ಧೂರಿಯಾಗಿ ಜರುಗಲಿದೆ ಎಂದು ಹನ್ನೆರಡು ಹರಿವಾಣದ ಗುಡಕಟ್ಟಿನ ಸಮಿತಿ ಅಧ್ಯಕ್ಷ ಭರತ್‍ ಕೆಂಪರಾಜ್ ಹೇಳಿದರು.ಪಟ್ಟಣದ ಶ್ರೀ ಕೆಂಚಾಂಬಿಕಾ ದೇವಾಲಯದ ಬಳಿ ಸೋಮವಾರ ತೇರಿನಮನೆಯಿಂದ ರಥ ಹೊರತೆಗೆದು ಜಾತ್ರಾಮಹೋತ್ಸವದ ಸಿದ್ಧತೆಗೆ ಚಾಲನೆ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು. ಜೂ.18ರಿಂದ ಜಾತ್ರಾಮಹೋತ್ಸವಕ್ಕೆ ಚಾಲನೆ ದೊರಕಿ ಜೂ.27ರವರೆಗೆ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ. ಜೂ.18ರ ಮಂಗಳವಾರ ಗ್ರಾಮ ದೇವತೆ ಕೆಂಚಾಂಬಿಕಾ ದೇವಿ ಬಾನಸೇವೆ, ಜೂ.20ರ ಗುರುವಾರ ಶ್ರೀ ಸ್ವಾಮಿ ಪುಣ್ಯಾಹ ಕಾರ್ಯ ನೆರವೇರಿಸಿ ಜಾಂಡೇವು ಧ್ವಜಾರೋಹಣ ನಡೆಯಲಿದೆ. ಆನಂತರ ಶ್ರೀ ಸ್ವಾಮಿ ಉತ್ಸವ ಮೂರ್ತಿಯನ್ನು ದೊಡ್ಡಪಟ್ಟಣಗೆರೆ ಗ್ರಾಮಕ್ಕೆ ಸಾಂಪ್ರದಾಯಿಕ ಪೂಜಾ ಕಾರ್ಯಕ್ಕೆ ತೆರಳಿ ನಂತರ ಕಡೂರಿಗೆ ದಯಮಾಡಿಸಲಿದೆ ಎಂದರು.ಜೂ.21ರ ಶುಕ್ರವಾರ ಹೊಳೆಪೂಜೆ ಮತ್ತು ಕೆಂಡಾರ್ಚನೆ ಸೇವೆ ನೆರವೇರಲಿದ್ದು, ಜೂ.22ರ ಶನಿವಾರ ಬೆಳಿಗ್ಗೆ ಶ್ರೀ ಸ್ವಾಮಿ ಸನ್ನಿಧಿಯಲ್ಲಿ ಪಂಚಬ್ರಹ್ಮ ಕಳಸಪೂಜೆ, ಕಳಸಾರೋಹಣ, 101 ಎಡೆಸೇವೆ ನಡೆಯಲಿದೆ. ಜೂ.23ರ ಭಾನುವಾರ ಸಂಜೆ ಶ್ರೀ ವೀರಭದ್ರಸ್ವಾಮಿ ಮತ್ತು ಭದ್ರಕಾಳಮ್ಮ ದೇವಿ ಧಾರೆಮೂಹರ್ತ ನೆರವೇರಲಿದೆ. ಜೂ.24ರ ಸೋಮವಾರ ಶ್ರೀ ಸ್ವಾಮಿ ಉತ್ಸವ ಮೂರ್ತಿಯನ್ನು ಜಾನಪದ ಕಲಾ ತಂಡ ಗಳೊಂದಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿ ನಂತರ ಮಧ್ಯಾಹ್ನ 1.30ಕ್ಕೆ ಬ್ರಹ್ಮರಥೋತ್ಸವ ಅದ್ಧೂರಿಯಾಗಿ ನಡೆಯಲಿದೆ ಎಂದರು. ಜೂ.25ರ ಮಂಗಳವಾರ ಕೆಂಚಾಂಬಿಕಾ ದೇವಿಯವರಿಗೆ ಮುತೈದೆ ಸೇವೆ, ಜೂ.26ರ ಬುಧವಾರ ಶ್ರೀ ಕೆಂಚಮ್ಮನವರ ಸಿಡಿಸೇವೆ, ಮಧ್ಯಾಹ್ನ ಓಕಳಿಸೇವೆ ಸಂಜೆ ಭಕ್ತಾಧಿಗಳ ಮಡಲಕ್ಕಿ ಸೇವೆ ನಡೆಯಲಿದ್ದು, ಜೂ27 ರ ಗುರುವಾರ ಶ್ರೀ ವೀರಭದ್ರಸ್ವಾಮಿಯವರಿಗೆ ಮಹಾರುದ್ರಾಭಿಷೇಕ ಮತ್ತು ಮಹಾಮಂಗಳಾರತಿ ನಡೆಯಲಿದೆ. ಅದೇ ದಿನ ಮಧ್ಯಾಹ್ನ ಶ್ರೀ ನಿರ್ವಾಣಸ್ವಾಮಿ ಮಠದಲ್ಲಿ 101 ಎಡೆಸೇವೆ ಏರ್ಪಡಿಸಲಾಗಿದೆ ಈ ಎಲ್ಲಾ ಕಾರ್ಯಕ್ರಮದಲ್ಲಿ ದೇವಾಲಯದ ಸಮಿತಿಯಿಂದ ಭಕ್ತಾದಿಗಳಿಗೆ ದಾಸೋಹದ ವ್ಯವಸ್ಥೆ ಕಲ್ಪಿಸಲಾಗಿದೆ ಎಂದರು.ಈ ಸಂದರ್ಭದಲ್ಲಿ ಪುರಸಭಾ ಸದಸ್ಯ ಈರಳ್ಳಿ ರಮೇಶ್, ದೇವಾಲಯ ಸಮಿತಿ ಪದಾಧಿಕಾರಿಗಳಾದ ನಲ್ಲೂರಿ ಸುರೇಶ್, ದಳವಾಯಿ ನಿರಂಜನ್, ಕೆ.ಜಿ.ಲೋಕೇಶ್ವರ್, ಕೆ.ಜಿ. ಶ್ರೀನಿವಾಸ್‍ಮೂರ್ತಿ, ಚಂದ್ರು,ತುರುವನಹಳ್ಳಿ ರೇಣುಕಪ್ಪ, ಶ್ರೀಧರ್ , ನಾಗೇಂದ್ರ, ಅರ್ಚಕರಾದ ವಿಶ್ವನಾಥ್, ಆನಂದ್ ಮತ್ತಿತರಿದ್ದರು.17ಕೆಕೆಡಿಯು2.

ಕಡೂರು ಪಟ್ಟಣದ ಛತ್ರದ ಬೀದಿಯ ಶ್ರೀ ಕೆಂಚಾಂಬಿಕಾ ದೇವಾಲಯ ಬಳಿ ಶ್ರೀ ವೀರಭದ್ರೇಶ್ವರ ಸ್ವಾಮಿ ಜಾತ್ರಾಮಹೋತ್ಸವದ ಅಂಗವಾಗಿ ದೇವಾಲಯ ಸಮಿತಿ ಪದಾಧಿಕಾರಿಗಳು ತೇರುಮನೆಯಿಂದ ರಥವನ್ನು ಹೊರ ಎಳೆದರು.

Share this article