ವಿಜೃಂಭಣೆಯಿಂದ ನಡೆಯುತ್ತಿರುವ ಬ್ರಹ್ಮಾನಂದ ಶ್ರೀ ಚಾತುರ್ಮಾಸ್ಯ

KannadaprabhaNewsNetwork | Published : Aug 18, 2024 1:48 AM

ಸಾರಾಂಶ

ಭಟ್ಕಳ ತಾಲೂಕಿನ ಕರಿಕಲ್ ಶ್ರೀರಾಮ ಧ್ಯಾನ ಮಂದಿರದಲ್ಲಿ ನಾಮಧಾರಿ ಸಮಾಜದ ಕುಲಗುರುಗಳು ಮತ್ತು ಧರ್ಮಸ್ಥಳದ ಕನ್ಯಾಡಿ ಶ್ರೀ ರಾಮ ಕ್ಷೇತ್ರದ ಪೀಠಾಧೀಶ ಶ್ರೀ ಬ್ರಹ್ಮಾನಂದ ಸರಸ್ವತೀ ಸ್ವಾಮೀಜಿಯವರ ಚಾತುರ್ಮಾಸ ವ್ರತಾಚರಣೆ ವಿಜ್ರಂಭಣೆಯಿಂದ ನಡೆಯುತ್ತಿದ್ದು, ದಿನದಿಂದ ದಿನಕ್ಕೆ ಭಕ್ತರ ಸಂಖ್ಯೆ ಹೆಚ್ಚುತ್ತಿದೆ.

ಭಟ್ಕಳ: ತಾಲೂಕಿನ ಕರಿಕಲ್ ಶ್ರೀರಾಮ ಧ್ಯಾನ ಮಂದಿರದಲ್ಲಿ ನಾಮಧಾರಿ ಸಮಾಜದ ಕುಲಗುರುಗಳು ಮತ್ತು ಧರ್ಮಸ್ಥಳದ ಕನ್ಯಾಡಿ ಶ್ರೀ ರಾಮ ಕ್ಷೇತ್ರದ ಪೀಠಾಧೀಶ ಶ್ರೀ ಬ್ರಹ್ಮಾನಂದ ಸರಸ್ವತೀ ಸ್ವಾಮೀಜಿಯವರ ಚಾತುರ್ಮಾಸ ವ್ರತಾಚರಣೆ ವಿಜ್ರಂಭಣೆಯಿಂದ ನಡೆಯುತ್ತಿದ್ದು, ದಿನದಿಂದ ದಿನಕ್ಕೆ ಭಕ್ತರ ಸಂಖ್ಯೆ ಹೆಚ್ಚುತ್ತಿದೆ.

ಶನಿವಾರ ಶ್ರೀಗಳ ಪಾದಪೂಜೆಯನ್ನು ತಾಲೂಕಿನ ಪಿನ್ನುಪಾಲು ಕೂಟದ ಮುಖ್ಯಸ್ಥರು ನೆರವೇರಿಸಿದರು.

ಶನಿವಾರ ಬೆಳಗ್ಗೆಯಿಂದಲೇ ಪಿನ್ನುಪಾಲು, ಕಂಚಿಕೇರಿ, ಬೆಳಕೆ, ನೂಜ್ ಹಾಗೂ ಗಂಜಿಕೇರಿ ಭಾಗದ ಬುಧವಂತರು, ಕೋಲ್ಕಾರರು ಸೇರಿದಂತೆ ನೂರಾರು ಸಂಖ್ಯೆಯ ಗುರುಭಕ್ತರು ಕರಿಕಲ್ ಶ್ರೀ ರಾಮ ಧ್ಯಾನ ಮಂದಿರಕ್ಕೆ ಆಗಮಿಸಿ ಶ್ರೀಗಳ ಆಶೀರ್ವಾದವನ್ನು ಪಡೆದು ಸಂಪೂರ್ಣ ಕೆಲಸ ನಿರ್ವಹಿಸಿದರು. ಆನಂತರ ಮಧ್ಯಾಹ್ನದ ಊಟ ಬಡಿಸುವುದರಿಂದ ಹಿಡಿದು ಬಂದ ಜನರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸುವುದರೊಂದಿಗೆ ಕಾರ್ಯಕ್ರಮಕ್ಕೆ ಶೋಭೆ ತಂದರು. ಬೆಳಗ್ಗೆಯಿಂದ ಮಂಕಿಯ ಹನುಮಂತ ದೇವಸ್ಥಾನದ ವಿನೋದ ಮಹಾಲೆ ಅವರ ಭಜನಾ ತಂಡದವರಿಂದ ಭಜನಾ ಕಾರ್ಯಕ್ರಮ ನಡೆಯಿತು. ಪುತ್ತೂರಿನ ಶ್ರೀಯಾನ್ ಕುಮಾರ್ ಜೈನ್, ಆಸರಕೇರಿಯ ಅಣ್ಣಪ್ಪ ನಾಯ್ಕ ರಾಣಿಬೆನ್ನೂರು ಸೇರಿದಂತೆ ನೂರಾರು ಭಕ್ತರು ಆಗಮಿಸಿ ಶ್ರೀಗಳ ಆಶೀರ್ವಾದ ಪಡೆದರು. ಚಾತುರ್ಮಾಸ್ಯ ಸಮಿತಿಯ ಅಧ್ಯಕ್ಷ ಕೃಷ್ಣ ನಾಯ್ಕ ಆಸರಕೇರಿ, ಸಂಚಾಲಕ ಕೃಷ್ಣ ನಾಯ್ಕ ಪೃಥ್ವಿ, ಆಸರಕೇರಿ ಗುರುಮಠದ ಅಧ್ಯಕ್ಷ ಅರುಣ ನಾಯ್ಕ, ಕಾರ್ಯದರ್ಶಿ ಡಿ.ಎಲ್. ನಾಯ್ಕ, ಮಾಜಿ ಶಾಸಕ ಸುನಿಲ್ ನಾಯ್ಕ, ಮಾಜಿ ಸೈನಿಕ ಶ್ರೀಕಾಂತ ನಾಯ್ಕ, ಮಾಜಿ ಸೈನಿಕ ವಾಮನ ನಾಯ್ಕ ಮಂಕಿ, ಸತೀಶಕುಮಾರ್, ಭವಾನಿಶಂಕರ ನಾಯ್ಕ, ಈಶ್ವರ ನಾಯ್ಕ, ಪಾಂಡುರಂಗ ನಾಯ್ಕ ಬೆಳಕೆ ಉಪಸ್ಥಿತರಿದ್ದರು. ಸಂಜೆ ಉಜಿರೆಯ ಶ್ರೀರಾಮ ಕಾರುಣ್ಯ ಕಲಾ ಸಂಘ ಕನ್ಯಾಡಿ ಇವರಿಂದ ನಳದಮಯಂತಿ ಯಕ್ಷಗಾನ ಎಲ್ಲರ ಮನಮೆಚ್ಚಿಸುವಲ್ಲಿ ಯಶಸ್ವಿಯಾಯಿತು.

Share this article