ಬ್ಯಾಡ್ಮಿಂಟನ್ ಕೂಟ ಸಂಪನ್ನ

KannadaprabhaNewsNetwork |  
Published : Aug 25, 2026, 03:15 AM IST
24ಜಿಎಂ | Kannada Prabha

ಸಾರಾಂಶ

ಬ್ರಹ್ಮಾವರ ಜಿ.ಎಂ. ವಿದ್ಯಾನಿಕೇತನ್ ಪಬ್ಲಿಕ್ ಸ್ಕೂಲ್‌ನಲ್ಲಿ ಉಡುಪಿ ಜಿಲ್ಲಾ ಮಟ್ಟದ ಅಂತರ್‌ ಶಾಲಾ ಐಕ್ಸ್‌ಜಿಎಮ್ ಶಟಲ್ ಬ್ಯಾಡ್ಮಿಂಟನ್ ಪಂದ್ಯ ಕೂಟ ನಡೆಯಿತು.

ಬ್ರಹ್ಮಾವರ: ಇಲ್ಲಿನ ಜಿ.ಎಂ. ವಿದ್ಯಾನಿಕೇತನ್ ಪಬ್ಲಿಕ್ ಸ್ಕೂಲ್‌ನಲ್ಲಿ ಉಡುಪಿ ಜಿಲ್ಲಾ ಮಟ್ಟದ ಅಂತರ್‌ ಶಾಲಾ ಐಕ್ಸ್‌ಜಿಎಮ್ ಶಟಲ್ ಬ್ಯಾಡ್ಮಿಂಟನ್ ಪಂದ್ಯ ಕೂಟ ನಡೆಯಿತು.

ಕರ್ನಾಟಕ ಟೇಬಲ್ ಟೆನಿಸ್ ಅಸೋಸಿಯೇಷನ್‌ನ ಉಪಾಧ್ಯಕ್ಷ ಗೌತಮ್ ಶೆಟ್ಟಿ ದೀಪ ಬೆಳಗಿ ಪಂದ್ಯಾಕೂಟವನ್ನು ಉದ್ಘಾಟಿಸಿ ಮಾತನಾಡಿ ಪ್ರತಿಯೊಬ್ಬ ಆಟಗಾರ ಚಾಂಪಿಯನ್ ಆಗಲು ಸಾಧ್ಯವಿಲ್ಲ. ಆದರೆ ಎಲ್ಲರೂ ಅತ್ಯುತ್ತಮ ಸಾಧಕರಾಗಬಹುದು. ಯಾವಾಗಲೂ ಮೈದಾನದಲ್ಲಿ ಸಕಾರಾತ್ಮಕವಾಗಿ ಚಿಂತಿಸಿ ಎಂದರು.

ಸಮಾರೋಪ ಸಮಾರಂಭದ ಅತಿಥಿ ಉಡುಪಿ ಐಕ್ಸಮ್ ಸ್ಪೋರ್ಟ್ಸ್ ಸೈನ್ಸ್‌ನ ವ್ಯವಸ್ಥಾಪಕ ನಿರ್ದೇಶಕ ರೋಹನ್ ಕರಂಬಳ್ಳಿ ವಿಜೇತರಿಗೆ ಪ್ರಶಸ್ತಿ ಪ್ರದಾನ ಮಾಡಿದರು. ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷ ಪ್ರಕಾಶ್ಚಂದ್ರ ಶೆಟ್ಟಿ, ಶಾಲಾ ಪ್ರಾಂಶುಪಾಲ ಜಾರ್ಜ್ ಕುರಿಯನ್ ಉಪಸ್ಥಿತರಿದ್ದರು.

ಪಂದ್ಯಾಕೂಟದಲ್ಲಿ ಜಿಲ್ಲೆಯ 24 ಶಾಲೆಯ 305 ಸ್ಪರ್ಧಿಗಳು ಭಾಗವಹಿಸಿದ್ದರು. ಕಿರಿಯ ಬಾಲಕರ ವಿಭಾಗದಲ್ಲಿ ಕಾಪುವಿನ ಆನಂದತೀರ್ಥ ವಿದ್ಯಾಲಯ, ಬಾಲಕಿಯರ ವಿಭಾಗದಲ್ಲಿ ಮಣಿಪಾಲದ ಮಾಧವ ಕೃಪಾ ಸ್ಕೂಲ್ ಹಾಗೂ ಹಿರಿಯ ಬಾಲಕರ ವಿಭಾಗದಲ್ಲಿ ಕಾರ್ಕಳದ ಶ್ರೀ ರವಿಶಂಕರ ವಿದ್ಯಾಮಂದಿರ, ಬಾಲಕಿಯರ ವಿಭಾಗದಲ್ಲಿ ಬ್ರಹ್ಮಾವರ ಲಿಟ್ಲ್ ರಾಕ್ ಇಂಡಿಯನ್ ಸ್ಕೂಲ್ ಚಾಂಪಿಯನ್‌ಶಿಪ್ ಪಡೆದುಕೊಂಡಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕೋಟಿ ವೃಕ್ಷ ಅಭಿಯಾನದಿಂದ ಅರಣ್ಯ ಪ್ರದೇಶ ಶೇ.2.4ಕ್ಕೆ ಏರಿಕೆ: ಪ್ರಶಾಂತ.ಪಿ.ಕೆ.ಎಂ
ಸಾಧನೆಗೆ ಆತ್ಮವಿಶ್ವಾಸವೇ ಶಿಖರ: ಮಂಗಳಾನಾಥನಂದಜೀ ಮಹಾರಾಜ್