ಬ್ರಹ್ಮಾವರ : ಸ್ವತಃ ಮಗನೇ ಹೆತ್ತ ತಾಯಿಯನ್ನು ಅಪರಿಚಿತ ಸ್ಥಳದಲ್ಲಿ ಬಿಟ್ಟು ಹೋಗಿರುವ ಅಮಾನವೀಯ ಘಟನೆ ಇಲ್ಲಿನ ಬ್ರಹ್ಮಾವರದಲ್ಲಿ ಭಾನುವಾರ ರಾತ್ರಿ ನಡೆದಿದೆ.ಸೋಮವಾರ ಬೆಳಗ್ಗೆ ಇಲ್ಲಿನ ಎಸ್.ಎಂ.ಎಸ್. ಆಂಗ್ಲ ಮಾಧ್ಯಮ ಶಾಲೆಯ ಬಳಿ ಅಪರಿಚಿತ ವೃದ್ಧೆ ಗಾಬರಿ ಭಯದಿಂದ ಚಡಪಡಿಸುತ್ತಿರುವುದನ್ನು ಶಾಲಾ ಬಸ್ ಚಾಲಕ ರಾಮನಾಥ್ ಶೆಣೈ ಗಮನಿಸಿ, ಸಮಾಜಸೇವಕ ನಿತ್ಯಾನಂದ ಒಳಕಾಡು ಅವರಿಗೆ ಮಾಹಿತಿ ನೀಡಿದ್ದರು.
ಮಹಿಳೆಯು ತೀವ್ರ ಅನಾರೋಗ್ಯದಿಂದ ಬಳಲುತಿದ್ದು, ನಡೆದಾಡುವ ಸ್ಥಿತಿಯಲ್ಲಿಲ್ಲ, ಆಕೆ ತನ್ನ ಹೆಸರು ಸರಸ್ವತಿ (70) ತಮಿಳುನಾಡಿನ ತಿರುವಳ್ಳೂರು ಊರು, ಮಗ ಕಮಾರ್ ಸಂಬಂಧಿಕರ ಮನೆಗೆ ಹೋಗಲೆಂದು ಕರೆದುಕೊಂಡು ಬಂದು ಬಲವಂತವಾಗಿ ಇಲ್ಲಿ ಇಳಿಸಿ ಹೋಗಿದ್ದಾನೆ ಎಂದು ಅಳಲು ತೋಡಿಕೊಂಡಿದ್ದಾರೆ.
ಈ ಘಟನೆಯ ಕುರಿತು ನಿತ್ಯಾನಂದ ಒಳಕಾಡು ಅವರು ಮಹಿಳಾ ಪೊಲೀಸ್ ಠಾಣೆ ಹಾಗೂ ಹಿರಿಯ ನಾಗರಿಕರ ಸಹಾಯವಾಣಿಗೆ ದೂರು ನೀಡಿದ್ದಾರೆ.