ಗಜೇಂದ್ರಗಡ: ಬ್ರಾಹ್ಮಣ ಸಮಾಜಕ್ಕೆ ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಅಭಿವೃದ್ಧಿ ಕಾರ್ಯಗಳಿಗೆ ಅನುದಾನ ನೀಡುವುದಾಗಿ ಮಾಜಿ ಸಚಿವ ಕಳಕಪ್ಪ ಬಂಡಿ ಹೇಳಿದರು.
''ಬ್ರಾಹ್ಮಣ ಸಮಾಜ ಸರ್ವೇಜನ ಸುಖೀನೋ ಭವಂತು'' ಎಂದು ಹೇಳುವ ಸಮಾಜ. ಅಂತಹ ಸಮಾಜದಿಂದ ಸಾಮಾಜಿಕ ಹಾಗೂ ಧಾರ್ಮಿಕ ಕಾರ್ಯಕ್ರಮಗಳನ್ನು ಮಾಡುತ್ತಾ ಬಂದಿದೆ. ಪ್ರತಿಯೊಂದು ಜಾತಿಯಲ್ಲಿಯೂ ಬಡವರಿದ್ದಾರೆ. ಆದರೆ, ಬ್ರಾಹ್ಮಣ ಸಮುದಾಯದಲ್ಲಿರುವ ಬಡವರು ಅದನ್ನು ತೋರ್ಪಡಿಸದೇ ಇರುವುದರಲೇ ಸ್ವಾಭಿಮಾನ ಬದುಕು ನಡೆಸುತ್ತಿದ್ದು ಅವರ ಆರ್ಥಿಕ ಸ್ಥಿತಿಯನ್ನು ಸರ್ಕಾರ ದೃಷ್ಟಿಯಲ್ಲಿಟ್ಟುಕೊಂಡು ಕಾನೂನು, ಕಾಯ್ದೆ ಸೌಲಭ್ಯಗಳ ವಿಚಾರದಲ್ಲಿ ಕೆಲವೊಂದು ಮಾರ್ಪಾಡು ಮಾಡಬೇಕಿದೆ ಎಂದರು.
ಸಮಾಜದ ಅಧ್ಯಕ್ಷ ರಾಮಚಂದ್ರ ಗಾಡಗೋಳಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮಕ್ಕೂ ಮುನ್ನ ದೇವಸ್ಥಾನದಲ್ಲಿ ರಘುನಾಥಭಟ್ಟ ತಾಸಿನ ಹಾಗೂ ಕೆ. ಸತ್ಯನಾರಾಯಣಭಟ್ಟ ಅವರಿಂದ ಲಕ್ಷ್ಮೀ ಸಹಿತ ಸತ್ಯನಾರಾಯಣ ಪೂಜೆ ಹಾಗೂ ರುಕ್ಮಿಣಿ ಪಾಂಡುರಂಗ, ಮಾರುತಿ ದೇವರಿಗೆ ವಿಶೇಷ ಪೂಜೆ ನಡೆಯಿತು. ಬಳಿಕ ಸಮಾಜದಿಂದ ಮಹಾಪ್ರಸಾದ ನಡೆಯಿತುಈ ವೇಳೆ ವಿವಿಧ ಗಣ್ಯರಿಗೆ ಬ್ರಾಹ್ಮಣ ಸಮಾಜ ಸೇವಾ ಸಮಿತಿಯಿಂದ ಸನ್ಮಾನಿಸಿದ ಬಳಿಕ ಮಾಜಿ ಸಚಿವರಿಗೆ ಸಮಾಜದಿಂದ ಮನವಿ ನೀಡಲಾಯಿತು.