ಆಚಾರ ವಿಚಾರಗಳ ಜತೆಗೆ ದೈವತ್ವದ ಭಾವನೆಗಳನ್ನು ಗೌರವದಿಂದ ಕಂಡಿರುವಂಥದ್ದು. ಈ ನೆಲದ ಮೂಲ ಸಂಸ್ಕೃತಿಯನ್ನು ಅನುಸರಿಸಿರುವ ಸಮಾಜವಾಗಿದೆ.
ಕನ್ನಡಪ್ರಭ ವಾರ್ತೆ ಹಾನಗಲ್ಲಗುರುಸ್ಥಾನದಲ್ಲಿದ್ದು ಸಮಾಜಕ್ಕೆ ಮಾರ್ಗದರ್ಶನ ಮಾಡಿ, ಧರ್ಮಶಾಸ್ತ್ರ, ಸಂಸ್ಕೃತಿಗಳ ಅರಿವು ನೀಡಿದ ಬ್ರಾಹ್ಮಣ ಸಮುದಾಯ ಯಾವಾಗಲೂ ತನ್ನ ಹಿರಿತನ ಗೌರವ ಉಳಿಸಿಕೊಂಡು ಬಂದಿದೆ ಎಂದು ಶಾಸಕ ಶ್ರೀನಿವಾಸ ಮಾನೆ ತಿಳಿಸಿದರು.ಇಲ್ಲಿನ ಶಂಕರಮಠದ ಆವರಣದಲ್ಲಿರುವ ಶಂಕರ ಸಭಾಭವನದಲ್ಲಿ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಆಯೋಜಿಸಿದ್ದ ಪುರಸಭೆ ನೂತನ ಅಧ್ಯಕ್ಷರು ಹಾಗೂ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ರಾಜ್ಯ, ಜಿಲ್ಲಾ ಪದಾಧಿಕಾರಿಗಳಿಗೆ ಸನ್ಮಾನ ಹಾಗೂ ಅಭಿನಂದನಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿ, ಸಂತೃಪ್ತಿ ಜೀವನದ ಸಂದೇಶಗಳನ್ನು ನೀಡಿದೆ ಎಂದರು.
ಆಚಾರ ವಿಚಾರಗಳ ಜತೆಗೆ ದೈವತ್ವದ ಭಾವನೆಗಳನ್ನು ಗೌರವದಿಂದ ಕಂಡಿರುವಂಥದ್ದು. ಈ ನೆಲದ ಮೂಲ ಸಂಸ್ಕೃತಿಯನ್ನು ಅನುಸರಿಸಿರುವ ಸಮಾಜವಾಗಿದೆ. ಪಟ್ಟಣದ ಇತಿಹಾಸದಲ್ಲಿ ಮೊದಲ ಬಾರಿಗೆ ಬ್ರಾಹ್ಮಣ ಸಮುದಾಯದವರು ಪುರಸಭೆ ಅಧ್ಯಕ್ಷರಾಗುವ ಅವಕಾಶ ದೊರೆತಿದೆ. ಈಗ ಸಮುದಾಯಗಳ ಅಪೇಕ್ಷೆಯನ್ನೂ ಪರಿಗಣಿಸಿ ಅಧಿಕಾರ ಹಂಚುವ ಅನಿವಾರ್ಯತೆಗಳು ಕೂಡ ರಾಜಕೀಯ ವ್ಯವಸ್ಥೆಯಲ್ಲಿವೆ. ಬಂದ ಅವಕಾಶಗಳನ್ನು ಸದುಪಯೋಗ ಮಾಡಿಕೊಳ್ಳುವುದೊಂದೇ ಈಗಿನ ಅನಿವಾರ್ಯತೆ ಎಂದರು.ಅಧ್ಯಕ್ಷತೆ ವಹಿಸಿ ಮಾತನಾಡಿದ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ತಾಲೂಕು ಅಧ್ಯಕ್ಷ ರವಿಚಂದ್ರ ಪುರೋಹಿತ, ಬ್ರಾಹ್ಮಣ ನಿಗಮ ಮಂಡಳಿ ಹೆಸರಿಗೆ ಮಾತ್ರ ಆಗಿದೆ. ಯಾವುದೇ ಅನುದಾನ, ಅಭಿವೃದ್ಧಿಯ ಅವಕಾಶಗಳಿಲ್ಲದೆ ಕೇವಲ ಅಧಿಕಾರಕ್ಕಾಗಿ ನಿಗಮ ಮಂಡಳಿ ಎಂಬಂತಾಗಿದೆ. ಇದು ಸಮಾಜದ ಅಭಿವೃದ್ಧಿಗೆ, ಬಡ ಬ್ರಾಹ್ಮಣರಿಗೆ ಒಂದಷ್ಟೂ ಸಹಾಯವಾಗದ ಸ್ಥಿತಿಯಲ್ಲಿದೆ. ರಾಜ್ಯ ಸರ್ಕಾರ ಈ ನಿಗಮ ಮಂಡಳಿಗೆ ಅನುದಾನ ನೀಡಿ ಸಹಕರಿಸುವಂತಾಗಬೇಕು ಎಂದರು. ಸನ್ಮಾನ ಸ್ವೀಕರಿಸಿ ಮಾತನಾಡಿದ ಪುರಸಭೆ ನೂತನ ಅಧ್ಯಕ್ಷೆ ರಾಧಿಕಾ ದೇಶಪಾಂಡೆ, ಹಾನಗಲ್ಲ ಇತಿಹಾಸದಲ್ಲಿ ಬ್ರಾಹ್ಮಣ ಸಮುದಾಯಕ್ಕೆ ಮೊದಲ ಬಾರಿಗೆ ಅಧ್ಯಕ್ಷ ಸ್ಥಾನ ಕಲ್ಪಿಸಿದ ನಮ್ಮ ನಾಯಕ ಶಾಸಕ ಶ್ರೀನಿವಾಸ ಮಾನೆ ಇಡೀ ಸಮುದಾಯದಿಂದ ಅಭಿನಂದನಾರ್ಹರು. ಈ ಅವಕಾಶವನ್ನು ಪಟ್ಟಣದ ಅಭಿವೃದ್ಧಿಗೆ ವಿನಿಯೋಗಿಸುವ ಮೂಲಕ ಒಳ್ಳೆಯ ಕಾರ್ಯ ಮಾಡುವೆ ಎಂದರು.ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ರಾಜ್ಯ ಉಪಾಧ್ಯಕ್ಷ ಡಾ. ಸಂಜಯ ನಾಯ್ಕ, ರಾಜ್ಯ ಸಂಘಟನಾ ಕಾರ್ಯದರ್ಶಿಗಳಾದ ದತ್ತಾತ್ರೆಯ ನಾಡಿಗೇರ, ವಸಂತ ಮೊಕ್ತಾಲಿ, ಶ್ರೀನಿವಾಸ ಶಿವಪೂಜಿ ಗೌರವ ಸನ್ಮಾನ ಸ್ವೀಕರಿಸಿ ಮಾತನಾಡಿದರು. ಘನಶ್ಯಾಮ ದೇಶಪಾಂಡೆ ಹಾಗೂ ಕೆ.ಎಲ್. ದೇಶಪಾಂಡೆ ಅನಿಸಿಕೆಗಳನ್ನು ಹಂಚಿಕೊಂಡರು. ವೇದಮೂರ್ತಿಗಳಾದ ಶಂಕರ ಭಟ್ ಜೋಶಿ, ಮುಕುಂದಭಟ್ ಕಾಗಿನೆಲ್ಲಿ ಅವರಿಂದ ವೇದಘೋಷ ನಡೆಯಿತು. ಗಂಗಾ ಕೋಮಾರ ಪ್ರಾರ್ಥನೆ ಹಾಡಿದರು. ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ತಾಲೂಕು ಕಾರ್ಯದರ್ಶಿ ಗಿರೀಶ ದೇಶಪಾಂಡೆ ಸ್ವಾಗತಿಸಿದರು. ರವಿ ಪೋತದಾರ ಕಾರ್ಯಕ್ರಮ ನಿರೂಪಿಸಿದರು. ಮಹಿಳಾ ಯುವ ಘಟಕದ ಅಧ್ಯಕ್ಷೆ ಜಯಶ್ರೀ ದೇಶಪಾಂಡೆ ವಂದಿಸಿದರು.Brahmin society created awareness of religion, science and culture: MLA Srinivas Mane
ಹಾನಗಲ್ಲ ಸುದ್ದಿ, ಬ್ರಾಹ್ಮಣ ಸಮಾಜ, ಶಾಸಕ ಶ್ರೀನಿವಾಸ ಮಾನೆ, Hanagal News, Brahmin Society, MLA Srinivas Mane
ಆಚಾರ ವಿಚಾರಗಳ ಜತೆಗೆ ದೈವತ್ವದ ಭಾವನೆಗಳನ್ನು ಗೌರವದಿಂದ ಕಂಡಿರುವಂಥದ್ದು. ಈ ನೆಲದ ಮೂಲ ಸಂಸ್ಕೃತಿಯನ್ನು ಅನುಸರಿಸಿರುವ ಸಮಾಜವಾಗಿದೆ.---
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.