ಕನ್ನಡಪ್ರಭ ವಾರ್ತೆ ಚಾಮರಾಜನಗರ
ಬೆಳಗ್ಗೆ ೧೦ ಕ್ಕೆ.ಶೋಭ ಯಾತ್ರೆಗೆ ಜಿಲ್ಲಾಧಿಕಾರಿ ಶಿಲ್ಪಾನಾಗ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಬಿ.ಟಿ, ಕವಿತಾ ಮತ್ತು ಶ್ರೀವಿದ್ಯಾಗಣಪತಿ ಮಂಡಳಿ ಆಧ್ಯಕ್ಷ ಮತ್ತು ಪದಾಧಿಕಾರಿಗಳು ಪೂಜೆ ಸಲ್ಲಿಸಿ, ಪುಷ್ಪಾರ್ಚನೆ ಮಾಡುವ ಮೂಲಕ ಚಾಲನೆ ನೀಡಿದರು.
ಗುರುನಂಜಶೆಟ್ಟರ ಛತ್ರದ ಮುಂಭಾಗದಿಂದ ೧೧ ಗಂಟೆಗೆ ಆರಂಭಗೊಂಡ ವಿಸರ್ಜನಾ ಯಾತ್ರೆಯು ಕಡಕ್ ಮೊಹಲ್ಲಾ, ಡಾ.ಬಿ.ಆರ್ .ಅಂಬೇಡ್ಕರ್ ಬೀದಿ, ಡಿವಿಯೇಷನ್ ರಸ್ತೆ, ದೇವಾಂಗ ೩ನೇ ಬೀದಿ, ನಾಗಪ್ಪಶೆಟ್ಟರ ಚೌಕ, ದೊಡ್ಡಂಗಡಿ ಬೀದಿ, ಗಾಡಿಪೇಟೆ ಚೌಕ, ಮೇಗಲ ನಾಯಕರ ಬೀದಿ, ಶ್ರೀಕನ್ನಿಕಾ ಪರಮೇಶ್ವರಿ ದೇವಸ್ಥಾನದ ರಸ್ತೆ, ನಾಗಪ್ಪಶೆಟ್ಟರ ಚೌಕ ದೊಡ್ಡಂಗಡಿ ಬೀದಿ, ಚಿಕ್ಕಂಗಡಿ ಬೀದಿ, ಸಂತೇಮರಹಳ್ಳಿ ವೃತ್ತ, ವೀರಮದಕರಿ ನಾಯಕರ ಬೀದಿ, ಶ್ರೀಭಗೀರಥ ಉಪ್ಪಾರ ಬಡಾವಣೆ, ಶ್ರೀ ಆದಿಶಕ್ತಿ ದೇವಸ್ಥಾನ, ಬಣಜಿಗರ ಬೀದಿ, ಭ್ರಮರಾಂಭ ೨ನೇ ಕ್ರಾಸ್, ಭ್ರಮರಾಂಭ ೧ನೇ ಕ್ರಾಸ್, ಕುರಬರಬೀದಿ, ಹಳ್ಳದಬೀದಿ, ಅಗ್ರಹಾರ, ನಗರಸಭಾ ಕಚೇರಿ ರಸ್ತೆ, ಚಾಮಾಲ್ ಬೀದಿ, ಶ್ರೀವೀರಭದ್ರಸ್ವಾಮಿ ದೇವಸ್ಥಾನದ ಮುಂಭಾಗದಿಂದ ಜೈನರ ಬೀದಿ, ಕೊಳದ ಬೀದಿ ಮುಖಾಂತರ ಹೊರಟು ಶ್ರೀ ದೊಡ್ಡರಸನಕೊಳದವರೆಗೆ ನಡೆಯಿತು.ದೊಡ್ಡರಸನ ಕೊಳದಲ್ಲಿ ವಿಸರ್ಜನೆ ಬಾಣ ಬಿರುಸಿಗೆ ಎಲ್ಲಾ ವ್ಯವಸ್ಥೆ ಮಾಡಲಾಗಿತ್ತು, ಮಂಗಳವಾದ್ಯ, ಗೊರವರವ ಕುಣಿತ, ಕಂಸಾಳೆ, ಡೊಳ್ಳು ಕುಣಿತ, ಕೇರಳದ ಚೆಂಡೆ, ವೀರಗಾಸೆ ನಗಾರಿ, ತಮಟೆ, ಚಿಲಿಪಿಲಿ ಗೊಂಬೆಗಳು, ನಾಸಿಕ್ ಡೊಳ್ಳು ಮುಂತಾದ ಕಲಾ ತಂಡಗಳು ಮೆರವಣಿಗೆಗೆ ಮೆರಗು ತಂದವು.ಖಡಕ್ ಮೊಹಲ್ಲಾದಲ್ಲಿ ಗಣಪತಿ ಮೆರವಣಿಗೆಯು ಸಾಗಿ ಹೋಗುವಾಗ ಎಸ್ಪಿ ಡಾ. ಬಿ.ಟಿ, ಕವಿತಾ ನಿಂತು ಮೆರವಣಿಗೆ ಸುಗಮವಾಗಿ ಸಾಗಲು ಎಲ್ಲಾ ಸೂಚನೆಗಳನ್ನು ನೀಡಿದರು, ಯುವಪಡೆ ಕುಣಿದು ಕುಪ್ಪಳಿಸಿದರೆ ಭಾವುಟಗಳು ಹುಡುಗರ ಕೈಯಲ್ಲಿ ರಾರಾಜಿಸಿತು, ವಂದೇ ಮಾತರಂ ಜಯಘೋಷ ಮೊಳಗಿತು.
ಸೂಕ್ಷ ಪ್ರದೇಶಗಳಲ್ಲಿ ಹೆಚ್ಚಿನ ಭದ್ರತೆ ಮಾಡಲಾಗಿತ್ತು. ಸುಮಾರು ೧೦೦೦ ಕ್ಕೂ ಹೆಚ್ಚು ಪೊಲೀಸರನ್ನು ಬಂದೋಬಸ್ತಿಗೆ ಅಯೋಜಿಸಲಾಗಿತ್ತು. ಹೊಸದಾಗಿ ಬ್ಲಾಕ್ ತಂಡ ನಿಯೋಜಿಸಲಾಗಿತ್ತು, ಹೊರ ಜಿಲ್ಲೆಗಳಿಂದಲೂ ಪೊಲೀಸ್ ತಂಡಗಳನ್ನು ಕರೆಯಿಸಿಕೊಳ್ಳಲಾಗಿತ್ತು,
ಮಾಜಿ ಶಾಸಕ ಎನ್. ಮಹೇಶ್, ಮುಖಂಡರಾದ ಎಂ. ರಾಮಚಂದ್ರ, ನಗರಸಭಾ ಅಧ್ಯಕ್ಷg ಸುರೇಶ್, ಉಪಾಧ್ಯಕ್ಷ ಮಮತಾ, ಸದಸ್ಯರು, ಶ್ರೀ ವಿದ್ಯಾ ಗಣಪತಿ ಮಂಡಳಿ ಅಧ್ಯಕ್ಷ ಶಿವಣ್ಣ ಹಾಗೂ ಪದಾಧಿಕಾರಿಗಳು, ಬಾಲಸುಬ್ರಹ್ಮಣ್ಯಂ, ಸುರೇಶ್‌ನಾಯಕ, ಮಹದೇವನಾಯಕ, ಬಂಗಾರಸ್ವಾಮಿ, ಗಣೇಶ್‌ದೀಕ್ಷಿತ್, ಮಂಜುನಾಥಗೌಡ, ಶಿವಣ್ಣ, ಕೃಷ್ಣಪ್ಪ, ಶ್ರೀಕಂಠು, ಭಜರಂಗಧಳ ಸೇರಿದಂತೆ ನಾನಾ ಸಂಘಗಳ ಪದಾಧಿಕಾರಿಗಳು, ಮುಖಂಡರು ಭಾಗವಹಿಸಿದ್ದರು.