ಕಾರವಾರ: ಅಂದು ದೇಶಕ್ಕೆ ಸ್ವಾತಂತ್ರ್ಯ ದೊರಕಿಸಿಕೊಟ್ಟ ವೀರ ಯೋಧರ ತ್ಯಾಗ, ಬಲಿದಾನ ದೊಡ್ದದು. ಅದು ಎಂದಿಗೂ ಮರೆಯಲು ಸಾಧ್ಯವಿಲ್ಲ. ಇಂದು ನಮ್ಮ ಯೋಧರು ದೇಶ ರಕ್ಷಣೆಗಾಗಿ ಹಗಲಿರುಳು ದುಡಿಯುತ್ತಿದ್ದಾರೆ. ಸ್ವಾತಂತ್ರ್ಯೋತ್ಸವದ ಸಂದರ್ಭದಲ್ಲಿ ಅವರೆಲ್ಲರ ಯೋಗಕ್ಷೇಮಕ್ಕಾಗಿ ದೇವರಲ್ಲಿ ಪ್ರಾರ್ಥಿಸೋಣ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷೆ, ಕಾರವಾರ ಅಂಕೋಲಾ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕಿ ರೂಪಾಲಿ ಎಸ್.ನಾಯ್ಕ ಹೇಳಿದರು.
ಭಾರತೀಯ ಜನತಾ ಪಕ್ಷದ ಕಾರ್ಯಕರ್ತರೆಂದರೆ ದೇಶ ರಕ್ಷಣೆಗೆ ನಿಂತ ಕಾರ್ಯಕರ್ತರಂತೆ. ಬಡವರು, ದೀನ ದಲಿತರ ಪರವಾಗಿ ಹಾಗೂ ದೇಶಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ನಿರಂತರವಾಗಿ ದುಡಿಯುತ್ತಿದ್ದಾರೆ. ಅವರ ಕೈ ಬಲಪಡಿಸುವ ಮೂಲಕ ನಾವು ದೇಶಕ್ಕೆ ಕೊಡುಗೆ ನೀಡೋಣ ಎಂದರು.
ಗ್ರಾಮೀಣ ಮಂಡಳ ಅಧ್ಯಕ್ಷ ಸುಭಾಷ್ ಗುನಗಿ, ನಗರ ಸಭೆ ಮಾಜಿ ಅಧ್ಯಕ್ಷರಾದ ನಿತಿನ್ ಪಿಕಳೆ, ನಮ್ಮ ದೇಶದ ವೀರ ಯೋಧರ ಸಾಹಸದ ಬಗ್ಗೆ ವಿವರಣೆ ನೀಡಿದರು.ನಗರ ಮಂಡಳ ಅಧ್ಯಕ್ಷರಾದ ನಾಗೇಶ್ ಕುರಡೇಕರ ಸ್ವಾಗತಿಸಿ, ವಂದನಾರ್ಪಣೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ನಗರ ಸಭೆ ಸ್ಥಾಯಿ ಸಮಿತಿ ಅಧ್ಯಕ್ಷೆ ಮಾಲಾ ಹುಲ್ಸವಾರ, ಜಿಲ್ಲಾ ಮಾಧ್ಯಮ ಸಹ ಸಂಚಾಲಕ ಕೀಶನ್ ಕಾಂಬ್ಳೆ, ಯುವ ಮೋರ್ಚಾ ಮುಖಂಡ ಪರ್ಬತ್ ನಾಯ್ಕ, ಸುನಿಲ್ ಸೋನಿ, ಮಹಿಳಾ ಮೋರ್ಚಾ ವೈಶಾಲಿ ತಾಂಡಲ್, ಬಿಜೆಪಿ ಹಿರಿಯ ಕಿರಿಯ ಕಾರ್ಯಕರ್ತರು ಪಕ್ಷದ ಪದಾಧಿಕಾರಿಗಳು ನಗರ ಸಭೆ ಸದಸ್ಯರು, ಎರಡೂ ಮಂಡಳಗಳ ಪದಾಧಿಕಾರಿಗಳು, ಕಾರ್ಯಕರ್ತರು ಪಕ್ಷದ ಅಭಿಮಾನಿಗಳು ಉಪಸ್ಥಿತರಿದ್ದರು.